Deepika Das ಶೃತಿ ಮತ್ತು ಮಗಳೊಂದಿಗೆ ಸುಂದರ ಸಮಯ ಕಳೆದ ದೀಪಿಕ ದಾಸ್!

0

Deepika Das ಸ್ನೇಹಿತರೆ, 80-90ರ ದಶಕದಿಂದಲೂ ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ನಟಿ ಶ್ರುತಿಯವರು ಹೆಚ್ಚಿನ ಅಳುಮುಂಜಿಯ ಪಾತ್ರದ ಮೂಲಕ ರಂಜಿಸಿದಂತಹ ಅಪ್ರತಿಮ ಕಲಾವಿದೆ. ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ಶ್ರುತಿ(Shruthi) ಸೌಮ್ಯ ಮುಗ್ಧ ಸ್ವಭಾವದ ಹೆಣ್ಣು ಮಗಳಾಗಿ ಅಭಿನಯಿಸುವ ಮೂಲಕ ಕನ್ನಡಿಗರ ಮನೆಮಗಳಾಗಿ ಹೋಗಿದ್ದರು.

ಇಂದಿಗೂ ಕೂಡ ಕೆಲ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಾ ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿರುವ ಶ್ರುತಿ ಆಗಾಗ ತಮ್ಮ ಹಾಗೂ ತಮ್ಮ ಕುಟುಂಬದ ಕ್ಯೂಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿರುತ್ತಾರೆ.

ಅದರಂತೆ ಕಳೆದ ಕೆಲವು ದಿನಗಳ ಹಿಂದೆ ಪ್ರಸಾರವಾಗುತ್ತಿದ್ದ ನಾಗಿಣಿ ಸೀರಿಯಲ್ ಖ್ಯಾತಿಯ ನಟಿ ದೀಪಿಕಾ ದಾಸ್, ಶ್ರುತಿ ಮನೆಗೆ ಭೇಟಿ ನೀಡಿ ಅಮ್ಮ ಮಗಳೊಂದಿಗೆ ಸುಂದರ ಸಮಯ ಕಳೆದಿದ್ದಾರೆ. ಹೌದು ಗೆಳೆಯರೇ ಬಿಗ್ ಬಾಸ್ ಸೀಸನ್ 9ರ ಪ್ರವೀಣರಾಗಿ ಮನೆಯೊಳಗೆ ಪ್ರವೇಶಿಸಿದ ದೀಪಿಕಾ ತಮ್ಮ ದಿಟ್ಟ ಛಲದ ಮೂಲಕ ಎಂತಹದ್ದೇ ಟಾಸ್ಕ್ ನೀಡಿದರು, ಅದರಲ್ಲಿ ಜಯಭೇರಿ ಬಾರಿಸುತ್ತಿದ್ದಂತಹ ಹೆಣ್ಣು ಮಗಳು.

ಹೀಗೆ ಹಲವು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ದೀಪಿಕಾ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದು, ಆಗಾಗ ನಮ್ಮ ಕ್ಯೂಟೆಸ್ಟ್ ಫೋಟೋಗಳ ಮೂಲಕ ನೆಟ್ಟಿಗರ ನಿದ್ದೆಗೆಡಿಸುತ್ತಿರುತ್ತಾರೆ. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಶೃತಿ, ಮಗಳಾದ ಗೌರಿ ಹಾಗೂ ದೀಪಿಕಾ ದಾಸ್ ಒಟ್ಟಿಗೆ ಇರುವ ಫೋಟೋಗಳು ವೈರಲ್ ಆಗುತ್ತಿದ್ದು, ದೀಪಿಕಾ ದಾಸ್ ಗೌರಿಯವರ ಕೆನ್ನೆಯನ್ನು ಹಿಡಿದು ಮುದ್ದಾಡುತ್ತಿರುವ ಫೋಟೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಹೌದು ಸ್ನೇಹಿತರೆ ಇಂಡೋ ವೆಸ್ಟ್ರನ್ ಬಟ್ಟೆಯಲ್ಲಿ ನಟಿ ಶ್ರುತಿ(Shruthi) ಕ್ಲಾಸ್ ಆಗಿ ಕಾಣಿಸಿಕೊಂಡರೆ ಮಗಳು ಗೌರಿ(Gowri) ಪುಟ್ಟ ಫ್ರಾಕ್ ಧರಿಸಿ ಮಿಂಚಿದ್ದಾರೆ‌. ಅದರಂತೆ ನಟಿ ದೀಪಿಕಾ ದಾಸ್(Deepika Das) ಜೀನ್ಸ್ ಹಾಗೂ ನೀಲಿ ಬಣ್ಣದ ಟೀ ಶರ್ಟ್ನಲ್ಲಿ ಕಂಗೊಳಿಸಿದ್ದು ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲಾಗುತ್ತಿದೆ. ಇದನ್ನೂ ಓದಿ ಪಕ್ಕ ಹಳ್ಳಿ ಹೈದನಂತೆ ಮೇಕೆಯೊಂದಿಗೆ ಫೋಟೋ ಶೂಟ್ ಮಾಡಿದ ನಟ ಸತೀಶ್ ನೀನಾಸಂ

Leave A Reply

Your email address will not be published.

error: Content is protected !!