Actor Yash: ಮಕ್ಕಳೊಂದಿಗೆ ದೇಶ ಪ್ರೇಮ ಮೆರೆದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ!

0

ಸ್ನೇಹಿತರೆ, ಕಳೆದ ವರ್ಷದಂತೆ ಈ ವರ್ಷವೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ ಹಾಗೆ ಹರ್ ಗರ್ ಶ್ರೀರಂಗ (#Hargartriranga) ಯೋಜನೆಗೆ ಸಾಕಷ್ಟು ಸೆಲೆಬ್ರಿಟಿಗಳು ಕೈಜೋಡಿಸಿ ತಮ್ಮ ತಮ್ಮ ಮನೆಯಲ್ಲಿ ದೇಶಪ್ರೇಮ ಮೆರೆದು ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮವನ್ನು ಆಚರಿಸಿದರು.

ಹೀಗೆ ಸ್ಯಾಂಡಲ್ ವುಡ್ನ ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ, ಶ್ರೀ ಲೀಲಾ, ರಾಘವೇಂದ್ರ ರಾಜಕುಮಾರ್, ಪ್ರೇಮ್, ಗಣೇಶ್ ಹೇಗೆ ಮುಂತಾದ ಸೆಲೆಬ್ರೆಟಿಗಳು ತಮ್ಮ ಮನೆಯ ಸದಸ್ಯರೊಂದಿಗೆ ಸೇರಿಕೊಂಡು ಬಾವುಟವನ್ನಾರಿಸಿ ಅದರ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅದರಂತೆ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿಯೂ ಸ್ವತಂತ್ರ ದಿನಾಚರಣೆಯ ಸಂಭ್ರಮ ಮನೆ ಮಾಡಿತ್ತು,

ತಮ್ಮ ಕುಟುಂಬದೊಂದಿಗೆ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆಯ ಆಚರಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಇಬ್ಬರು ಮಕ್ಕಳು ಯಶ್ ಅವರಿಗೆ ಸಾತ್ ನೀಡಿ, ಐರ ಮತ್ತು ಯಥರ್ವ ತ್ರಿವರ್ಣ ಧ್ವಜವನ್ನು ಹಿಡಿದು ಕ್ಯಾಮೆರಾಗೆ ನೀಡುವುದರ ಜೊತೆಗೆ ಧ್ವಜದ ಹಿರಿಮೆಯನ್ನು ಎತ್ತಿ ಮೆರೆದಿದ್ದಾರೆ. ಈ ಫೋಟೋಗಳನ್ನೆಲ್ಲ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್

ಇಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿ ಜೈ ಹಿಂದ್ ಎಂದು ಪ್ರತಿಯೊಬ್ಬರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರಿದರು. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social media) ಭಾರಿ ವೈರಲಾಗುತ್ತಿದ್ದು, ಅಭಿಮಾನಿಗಳು ಒಳ್ಳೆಯ ಫೋಟೋ, ‘ಕೆಜಿಎಫ್- ಕರ್ನಾಟಕ ಗಂಧರ್ವ ಫ್ಯಾಮಿಲಿ’, ‘ಲವ್ ಯು ಬಾಸ್’,’ ಐ ಲವ್ ಮೈ ಇಂಡಿಯಾ’ ಎಂದೆಲ್ಲಾ

ಕಮೆಂಟ್ ಮಾಡುವ ಮೂಲಕ ಪ್ರೀತಿಯ ಮಹಾಪೂರವನ್ನೇ ಹರಿಸುತ್ತಿದ್ದರು. ಇನ್ನು ಈಗಾಗಲೇ ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ ರಿಲೀಸ್ ಆಗಿ ಹಲವು ತಿಂಗಳುಗಳ ಉರುಳಿದರು ತಮ್ಮ ಮುಂದಿನ ಚಿತ್ರ ಯಾವುದೇ ಎಂಬುದನ್ನು ಇಂದಿಗೂ ರಿವಿಲ್ ಮಾಡಿಲ್ಲ. ವಿದೇಶದಲ್ಲೆಲ್ಲಾ ಶೂಟಿಂಗ್ ಕೆಲಸಗಳಲ್ಲಿ ಭಾಗಿಯಾಗುತ್ತಾ, ರಾಕಿಂಗ್ ಸ್ಟಾರ್ ಯಶ್ ಸಕ್ಕತ್ ಬ್ಯುಸಿ ಇದ್ದು, ಇದರ ನಡುವೆ ಪ್ರಶಾಂತ್ ನೀಲ್ (Prashanth Neel) ಮತ್ತೊಮ್ಮೆ ಯಶ್ ಅವರಿಗೆ ಕೆಜಿಎಫ್ 3 (KGF 3) ಸಿನಿಮಾದ ಆಕ್ಷನ್ ಕಟ್ ಹೇಳುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ ಶೃತಿ ಮತ್ತು ಮಗಳೊಂದಿಗೆ ಸುಂದರ ಸಮಯ ಕಳೆದ ದೀಪಿಕ ದಾಸ್!

Leave A Reply

Your email address will not be published.

error: Content is protected !!