ಗಂಡ ಹೆಂಡತಿ ಒಟ್ಟಿಗೆ ಊಟ ಮಾಡುತ್ತೀರಾ? ಆಗಿದ್ರೆ ಈ ವಿಚಾರ ತಿಳಿದುಕೊಳ್ಳಿ

0

ಇಂದಿನ ಅವಸರದ ಯುಗದಲ್ಲಿ ಮನೆಯಲ್ಲಿ ಎಲ್ಲ ಸದಸ್ಯರು ಕೂತು ಊಟ ಮಾಡುವುದು ತುಂಬಾ ಕಡಿಮೆ ಆಗುತ್ತಿದೆ ಹೀಗಾಗಿ ಮನೆಯ ಸದಸ್ಯರ ನಡುವಿನ ಬಾಂಧವ್ಯ ಕ್ರಮೇಣವಾಗಿ ಕಡಿಮೆ ಆಗುತ್ತಾ ಬಂದಿದೆ ಅಷ್ಟೇ ಅಲ್ಲದೆ ಮನೆಯಲ್ಲಿ ತಾವೇ ಅಡುಗೆ ಮಾಡಿಕೊಂಡು ಊಟ ಮಾಡುವ ಪದ್ಧತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಹೋಟೆಲ್ ಗಳಲ್ಲಿ ಊಟ ಮಾಡುವ ಪದ್ಧತಿ ರೂಢಿಗೊಳ್ಳುತ್ತಿದೆ ಇದರಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ರೋಗ ರುಜಿನಗಳು ಹೆಚ್ಚಾಗಿವೆ ಅನಾರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಬಿಪಿ ಶುಗರ್ ಎಲ್ಲವೂ ಕಂಡು ಬರುತ್ತಿದೆ ಇವೆಲ್ಲವೂ ಸಹ ನಾವು ಅನುಸರಿಸುವ ಆಹಾರ ಕ್ರಮವನ್ನು ಅವಲಂಬಿಸಿದೆ. ನಾವು ಊಟ ಮಾಡುವಾಗ ಸಹ ಕೆಲವೊಂದು ಕ್ರಮವನ್ನು ಅನುಸರಿಸಬೇಕು

ಇಂದಿನ ದಿನಗಳಲ್ಲಿ ನಾವು ಊಟ ಮಾಡುವಾಗ ಸಹ ಮೊಬೈಲ್ ಬಳಕೆ ಮಾಡುತ್ತಿದ್ದೇವೆ ಇದರಿಂದಾಗಿ ಮನೆಯವರ ಜೊತೆಗೆ ಬೆರೆಯುವುದು ಕಷ್ಟ ಸಾಧ್ಯ ಆಗಿದೆ ಅಷ್ಟೇ ಅಲ್ಲದೆ ನಮ್ಮ ಆರೋಗ್ಯದ ಮೇಲೆ ಸಹ ಪರಿಣಾಮ ಬೀಳುತ್ತದೆ ನಾವು ಈ ಲೇಖನದ ಮೂಲಕ ಊಟ ಮಾಡುವಾಗ ಯಾವ ವಿಷಯವನ್ನು ತಿಳಿದುಕೊಳ್ಳಬೇಕು ಹಾಗೂ ಊಟದ ನಂತರ ಯಾವುದನ್ನು ಮಾಡಬಾರದು ಹಾಗೂ ಗಂಡ ಹೆಂಡತಿಯು ಇಂದೆ ತಟ್ಟೆಯಲ್ಲಿ ಯಾಕೆ ಊಟ ಮಾಡಬಾರದು ಎನ್ನುವುದನ್ನು ತಿಳಿದುಕೊಳ್ಳೋಣ.

ಊಟ ಮಾಡುವ ಸಮಯದಲ್ಲಿ ಕೆಲವೊಂದು ನಿಯಮವನ್ನು ಪಾಲನೆ ಮಾಡುವುದರಿಂದ ನಮ್ಮ ಉನ್ನತಿ ಹಾಗೂ ಅಭಿವೃದ್ಧಿಗೆ ಕಾರಣ ಆಗುತ್ತದೆ ಹಾಗೆಯೇ ಮಹಾಭಾರತದಲ್ಲಿ ಇದರ ಬಗ್ಗೆ ಉಲ್ಲೇಖ ಇರುತ್ತದೆ ಆಹಾರ ಸೇವನೆಯ ಬಗ್ಗೆ ಅರ್ಜುನನಿಗೆ ಭೀಷ್ಮನು ಹೇಳಿರುವ ಉಲ್ಲೇಖ ಮಹಾಭಾರತದಲ್ಲಿ ಇರುತ್ತದೆ ಊಟ ಮಾಡುವ ಮೊದಲು ಕೈ ಕಾಲು

ಮುಖ ಸ್ವಚ್ಚವಾಗಿ ತೊಳೆಯಬೇಕು ಹಾಗೆಯೇ ಊಟ ಮಾಡುವ ಮುನ್ನ ತಾಯಿ ಅನ್ನಪೂರ್ಣೆಶ್ವರಿಯ ಸ್ಮರಣೆ ಮಾಡಬೇಕು ಹಾಗೆಯೇ ತಾಯಿ ಅನ್ನಪೂರ್ಣೆಶ್ವರಿಯ ಸ್ಮರಣೆ ಮಾಡಿದ ನಂತರ ಹಸಿದಿರುವ ಎಲ್ಲ ಪ್ರಾಣಿಗಳಿಗೂ ಆಹಾರ ಸಿಗಲೆಂದು ಬೇಡಿಕೊಳ್ಳಬೇಕು ನಂತರದಲ್ಲಿ ಆಹಾರ ಸೇವಿಸಬೇಕು. ಅಡುಗೆ ಮಾಡುವ ಮುನ್ನ ಸ್ತ್ರೀಯರು ಶುಚಿಯಾಗಿ ಶುಭ್ರವಾದ ಮನಸ್ಸಿನಿಂದ ಅಡುಗೆಯನ್ನು ಮಾಡಬೇಕು ಹಾಗೆಯೇ ಅಗ್ನಿ ದೇವರಿಗೆ ಪ್ರಾರ್ಥಿಸಿ ಒಲೆಯನ್ನು ಹೊತ್ತಿಸಬೇಕು ಪ್ರತಿದಿನವೂ ಸಹ ಮಾಡಿದ ಅಡುಗೆಯಲ್ಲಿ ಹಸುವಿಗೆ ಹಾಗೂ ನಾಯಿಗೆ ಕಾಗೆಗೆ ಹಾಕಬೇಕು .

ಮನೆಯಲ್ಲಿ ಊಟ ಮಾಡುವಾಗ ಮನೆಯ ಸದಸ್ಯರು ಒಟ್ಟಾರೆ ಕೂತು ಅಡುಗೆಯನ್ನು ಮಾಡಬೇಕು ಮನೆಯ ಸದಸ್ಯರು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆಯಾಗಿ ಊಟ ಮಾಡಿದರೆ ಮನೆಯ ಸದಸ್ಯರ ನಡುವೆ ಸಾಮರಸ್ಯ ಕಡಿಮೆ ಆಗುತ್ತದೆ ಸಾಯಂಕಾಲ ಸೂರ್ಯಾಸ್ತವಾಗಿ ಒಂದೂವರೆ ಗಂಟೆಯ ಒಳಗೆ ಊಟವನ್ನು ಮಾಡಬೇಕು ಆಗ ಜಠರ ಕ್ರಿಯಾಶೀಲವಾಗಿ ಇರುತ್ತದೆ ಒಂದು ಸಲ ಊಟ ಮಾಡುವವನು ಯೋಗಿ 2 ಸಲ ಊಟ ಮಾಡುವವನು ಭೋಗಿ ಎಂದು ಹೇಳಲಾಗುತ್ತದೆ

ಹಾಗೆಯೇ ಭೋಜನವನ್ನು ಉತ್ತರ ಹಾಗೂ ಪೂರ್ವ ದಿಕ್ಕಿಗೆ ಮುಖಮಾಡಿ ಮಾಡಬೇಕು ಹಾಗೆಯೇ ದಕ್ಷಿಣ ದಿಕ್ಕಿಗೆ ಮಾಡಿದ ಊಟ ಪ್ರೇತಗಳಿಗೆ ಸಮ ಆಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಕುಳಿತು ಊಟ ಮಾಡಿದರೆ ರೋಗ ವೃದ್ಧಿ ಆಗುವ ಲಕ್ಷಣ ಇರುತ್ತದೆ ಅಷ್ಟೇ ಅಲ್ಲದೆ ಹಾಸಿಗೆಯ ಮೇಲೆ ಕುಳಿತು ಊಟ ಮಾಡಬಾರದು ಹಾಗೆಯೇ ಮುರಿದು ಹೋದ ತಾಟು ಹಾಗೂ ಲೋಟದಲ್ಲಿ ಊಟವನ್ನು ಮಾಡಬಾರದು ಹಾಗೆಯೇ ಅರಳಿ ಮರದ ಕೆಳಗೆ ಹಾಗೂ ವಟ ವಕ್ಷದ ಕೆಳಗೆ ಕುಳಿತು ಊಟ ಮಾಡಬಾರದು ಹಾಗೆಯೇ ಬಡಿಸಿಕೊಟ್ಟ ಊಟವನ್ನು ನಿಂದನೆ ಮಾಡಬಾರದು ಚಪ್ಪಲಿಯನ್ನು ತೆಗೆದು ಊಟವನ್ನು ಮಾಡಬೇಕು ಅಷ್ಟೇ ಅಲ್ಲದೆ ತುಂಬಾ ಖಾರವಾದ ಹಾಗೂ ತುಂಬಾ ಸಿಹಿಯಾದ ಊಟವನ್ನು ಮಾಡಬಾರದು .

ಜಗಳ ಹಾಗೂ ದ್ವೇಷದ ವಾತಾವರಣ ಇರುವ ಕಡೆಗಳಲ್ಲಿ ಊಟವನ್ನು ಮಾಡಬಾರದು ಅತಿಯಾದ ಗಲಾಟೆ ಹಾಗೂ ಶಬ್ದ ಇರುವ ಕಡೆಗಳಲ್ಲಿ ಊಟವನ್ನು ಮಾಡಬಾರದು ಹಾಗೆಯೇ ಶಾಸ್ತ್ರದ ಪ್ರಕಾರ ನಿಂತುಕೊಂಡು ಊಟವನ್ನು ಮಾಡಬಾರದು ಹಾಗೆಯೇ ಅರ್ಧ ತಿಂದು ಬಿಟ್ಟ ಹಣ್ಣು ಹಾಗೂ ಸಿಹಿ ಪದಾರ್ಥವನ್ನು ತಿನ್ನಬಾರದು ಊಟ ಮಾಡುವಾಗ ಅರ್ಧಕ್ಕೆ ಎದ್ದ ಮೇಲೆ ಪುನಃ ಊಟವನ್ನು ಮಾಡಬಾರದು ಹಾಗೆಯೇ ಯಾರಾದರೂ ಅವಮಾನಿಸಿ ಊಟವನ್ನು ಕೊಟ್ಟರೆ ಅಂತಹ ಊಟವನ್ನು ಮಾಡಬಾರದು

ಊಟ ಮಾಡುವಾಗ ಮನಸ್ಸು ಪ್ರಶಾಂತವಾಗಿ ಇರಬೇಕು ಮೌನವಾಗಿ ಮಾಡಬೇಕು ಚಿಂತೆಗೆ ಇಡುಮಾಡುವ ವಿಷಯಗಳನ್ನು ಊಟದ ಸಮಯದಲ್ಲಿ ಹೇಳಬಾರದು ಊಟ ಮಾಡುವಾಗ ಧನಾತ್ಮಕ ವಿಷಯಗಳ ಬಗ್ಗೆ ಮಾತ್ರ ಮಾತನಾಡಬೇಕು ಹಾಗೆಯೇ ಊಟವನ್ನು ಅಗೆದು ಅಗೆದು ತಿನ್ನಬೇಕು. ಅತಿ ಬಿಸಿಯಾದ ಹಾಗೂ ತಣ್ಣನೆಯ ಊಟವನ್ನು ಮಾಡಬಾರದು ಊಟವಾದ ನಂತರ ನೀರು ಟಿ ಕಾಫಿಯನ್ನು ಕುಡಿಯಬಾರದು ಊಟದ ನಂತರ ಓಟ ಕುದುರೆ ಓಟ ಹಾಗೂ ಈಜುವುದನ್ನ ಮಾಡಬಾರದು

ಊಟದ ನಂತರ ಕನಿಷ್ಠ 100 ಹೆಜ್ಜೆಯಾದರು ನಡೆಯಬೇಕು ಯಾರಾದರೂ ಊಟದ ತಟ್ಟೆಯನ್ನು ದಾಟಿದರೆ ಅಂತಹ ಊಟವನ್ನು ಮಾಡಬಾರದು ಹಾಗೆಯೇ ಗಂಡ ಹಾಗೂ ಹೆಂಡತಿಯರು ಒಂದೇ ತಟ್ಟೆಯಲ್ಲಿ ಊಟವನ್ನು ಮಾಡಬಾರದು ಗಂಡನಿಗೆ ಊಟ ಬಡಿಸಿ ಊಟವಾದ ನಂತರ ಬೇರೆ ತಟ್ಟೆಯಲ್ಲಿ ಊಟವನ್ನು ಮಾಡಬೇಕು ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಇವುಗಳನ್ನು ಮಹಾಭಾರತದಲ್ಲಿ ಅರ್ಜುನನಿಗೆ ಭೀಷ್ಮನು ಹೇಳಿದ್ದನು ಹೀಗೆ ಊಟ ಮಾಡುವಾಗ ನಾವು ತಿಳಿದು ತಿಳಿಯದೆ ಕೆಲವು ತಪ್ಪನ್ನು ಮಾಡುತ್ತೇವೆ ಕೆಲವೊಂದು ವಿಷಯಗಳು ತುಂಬಾ ಜನರಿಗೆ ತಿಳಿದು ಇರುವುದು ಇಲ್ಲ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!