ದಿನದ ಈ ಸಮಯದಲ್ಲಿ ಸ್ನಾನ ಮಾಡಬೇಡಿ ಯಾಕೆಂದರೆ..

0

ನೀವು ತಪ್ಪಾದ ಸಮಯದಲ್ಲಿ ಸ್ನಾನ ಮಾಡಿದರೆ ಅದು ನಿಮಗೆ ಬಡತನ, ಕಷ್ಟ ಎದುರಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಮತ್ತು ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಒಳ್ಳೆಯದು ಎಂದು ಇಲ್ಲಿ ನೀವು ತಿಳಿದುಕೊಳ್ಳಬಹುದು.

ತಪ್ಪಾದ ಸಮಯದಲ್ಲಿ ಸ್ನಾನ ಮಾಡಿದರೆ ಕಷ್ಟ ಬಡತನಗಳು ಎದುರಾಗುತ್ತದೆ ಎಂದು ಭಗವಂತ ಶ್ರೀ ಕೃಷ್ಣ ಹೇಳಿದ್ದಾರೆ. ಸ್ನಾನ ಅಲ್ಲವಾ ಯಾವ ಸಮಯದಲ್ಲಾದರೂ ಮಾಡಿದರೆ ಆಗುತ್ತದೆ ಎಂದು ಜನ ತಿಳಿದುಕೊಳ್ಳುತ್ತಾರೆ ಆದರೆ ಇದು ತಪ್ಪು ಇದರಿಂದ ನೀವು ಕಷ್ಟವನ್ನು ಎದುರಿಸುತ್ತೀರಾ. ಪೂರ್ವಜರು, ಹಿರಿಯರು ಮಾಡಿರುವಂತಹ ಶಾಸ್ತ್ರ ಮತ್ತು ನೀಡಿರುವಂತಹ ಸಂಸ್ಕಾರಗಳು ನಮಗೆ ತುಂಬಾ ಲಾಭದಾಯಕ ಎಂದು ನಿಮಗೆ ಈ ಲೇಖನವನ್ನು ಓದಿದಾಗ ತಿಳಿಯುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ನಾನ ಮಾಡುವುದು ಒಂದು. ಸ್ನಾನ ಮಾಡುವುದರಿಂದ ದೇಹಕ್ಕೆ ತುಂಬಾ ಪ್ರಯೋಜನಗಳು ಸಿಗುತ್ತದೆ ಇದರ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಶಾಸ್ತ್ರಗಳ ಪ್ರಕಾರದ ಪ್ರತಿದಿನ ಸ್ನಾನ ಮಾಡುವುದು ತುಂಬಾ ಶುಭ ಆದರೆ ಸ್ನಾನ ಮಾಡುವುದಕ್ಕೂ ಒಂದು ಸಮಯವಿದೆ ಸರಿಯಾದ ಸಮಯ ಹಾಗೂ ಸರಿಯಾದ ಕ್ರಮವನ್ನು ಅನುಸರಿಸದೆ ಹೋದರೆ ಕಷ್ಟ ತಪ್ಪಿದ್ದಲ್ಲ.

ನಾವು ದಿನನಿತ್ಯ ಮಾಡುವಂತಹ ಚಿಕ್ಕಪುಟ್ಟ ಕೆಲಸದ ಬಗ್ಗೆಯೂ ಕೂಡ ಬಹಳ ಸುಂದರವಾಗಿ ಗರುಡ ಪುರಾಣದಲ್ಲಿ ವಿವರಿಸಿದ್ದಾರೆ. ಮೊದಲನೆಯ ಸ್ಥಾನ ಬ್ರಹ್ಮ ಸ್ನಾನ, ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿದರೆ ಅದು ಶ್ರೇಷ್ಠ ‌ ಎಂದು ಹೇಳಲಾಗುತ್ತದೆ. ಪ್ರಾತಕಾಲದ ನಾಲ್ಕು ಗಂಟೆಯಿಂದ 5 ಗಂಟೆಯೊಳಗೆ ಸ್ನಾನ ಮಾಡಿದರೆ ಅದು ಬ್ರಹ್ಮ ಸ್ನಾನ. ಈ ಸಮಯ ತುಂಬಾ ಶ್ರೇಷ್ಠ ಮತ್ತು ಈ ಸಮಯದಲ್ಲಿ ದೇವರ ಆರಾಧನೆಯನ್ನು ಮಾಡುತ್ತಾ ಸ್ನಾನ ಮಾಡಿದರೆ ಒಳ್ಳೆಯದು. ಈ ಸಮಯದಲ್ಲಿ ಸ್ನಾನ ಮಾಡಿ ನಂತರ ಸೂರ್ಯದೇವನಿಗೆ ನಮಸ್ಕರಿಸುವುದು ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಸಿಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ.

ಎರಡನೆಯ ಸ್ನಾನ ದೇವ ಸ್ನಾನ, ಬೆಳಿಗ್ಗೆ ಐದರಿಂದ ಆರು ಗಂಟೆ ಒಳಗಡೆ ಮಾಡುವಂತಹ ಸ್ನಾನಕ್ಕೆ ದೇವ ಸ್ನಾನ ಎನ್ನಲಾಗುತ್ತದೆ. ಎಲ್ಲಾ ಪವಿತ್ರ ನದಿಗಳನ್ನು ಸ್ಮರಣೆ ಮಾಡುತ್ತಾ ಮಾಡುವ ಈ ಸ್ನಾನ ಕೂಡ ತುಂಬಾ ಶ್ರೇಷ್ಠ. ಈ ಸಮಯದಲ್ಲಿ ಸ್ನಾನ ಮಾಡಿದರೆ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ನಕಾರತ್ಮಕ ಶಕ್ತಿಯು ಕೂಡ ನಮ್ಮ ದೇಹದಿಂದ ಹೊರಗಡೆ ಹೋಗುತ್ತದೆ. ದೇವ ಸ್ನಾನ ಮಾಡುವುದರಿಂದ ನಮ್ಮ ದೇಹ ಅಷ್ಟೇ ಅಲ್ಲದೆ ಮನಸು ಕೂಡ ಶುದ್ದಿಗೋಳುತ್ತದೆ. ನಸುಕಿನ ಜಾವ ಆಕಾಶದಲ್ಲಿ ನಕ್ಷತ್ರಗಳು ಕಾಣುವ ಸಮಯದಲ್ಲಿ ಸ್ನಾನ ಮಾಡಿದರೆ ಆ ಸ್ನಾನವನ್ನು ಋಷಿ ಸ್ನಾನ ಎಂದು ಕರೆಯಲಾಗುತ್ತದೆ. ಇದು ಕೂಡ ಶ್ರೇಷ್ಠ ಸ್ನಾನ ಮತ್ತು ಈ ಸಮಯದಲ್ಲಿ ಸ್ನಾನ ಮಾಡಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ.

ಮೂರನೆಯದು ಮಾನವ ಸ್ನಾನ, ಆರರಿಂದ ಎಂಟು ಗಂಟೆಯೊಳಗೆ ಮಾಡುವ ಸ್ನಾನವನ್ನು ಮಾನವ ಸ್ನಾನ ಎಂದು ಹೇಳುತ್ತಾರೆ. ಸೂರ್ಯೋದಯ ಸಮಯದಲ್ಲಿ ಮತ್ತು ಸೂರ್ಯೋದಯ ವಾದ ನಂತರ ಈ ಸ್ನಾನವನ್ನು ಮಾಡುತ್ತಾರೆ. ಈ ಸಮಯದಲ್ಲಿ ಸ್ನಾನ ಮಾಡುವುದು ಕೂಡ ತುಂಬಾ ಉತ್ತಮ ಮತ್ತು ಈ ಸಮಯದಲ್ಲಿ ಸ್ನಾನ ಮಾಡಿದರೆ ನೀವು ದಿನಪೂರ್ತಿ ಖುಷಿಯಿಂದ ಒಳ್ಳೆಯ ಹುರುಪಿನಿಂದ ಇರುತ್ತೀರ. ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಆ ದಿನ ಮಾಡುವಂತಹ ಎಲ್ಲಾ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಾ ಆದರೆ ಎಂಟು ಗಂಟೆಯ ನಂತರ ಮಾಡುವ ಸ್ನಾನವನ್ನು ಉತ್ತಮ ಸ್ನಾನ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಕಡಿಮೆ ಉತ್ಸಾಹವನ್ನು ಹೊಂದಿರುತ್ತೀರಾ, ಹಾಗಾಗಿ ದಿನಪೂರ್ತಿ ಅಲಸ್ಯ ಗುಣವನ್ನು ತೋರಿಸುತ್ತೀರಿ.

ಗರುಡ ಪುರಾಣದಲ್ಲಿ ಬ್ರಹ್ಮ ಸ್ನಾನ, ದೇವ ಸ್ನಾನ ಮತ್ತು ಋಷಿ ಸ್ನಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿ ದೇವರ ಆಶೀರ್ವಾದ ಪಡೆಯುವುದು ಉತ್ತಮ. ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ನಮ್ಮ ದೇಹ ಅಷ್ಟೇ ಅಲ್ಲದೆ ಮನಸ್ಸು ಕೂಡ ನೆಮ್ಮದಿಯಿಂದ ಇರುತ್ತದೆ. ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ತನ್ನಿಂದ ತಾನೇ ಸಿಗುತ್ತದೆ ಮತ್ತು ನಮ್ಮಲ್ಲಿರುವಂತಹ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಹಾಗೂ ಸುಖ ಶಾಂತಿಗೆ ದಾರಿಯಾಗುತ್ತದೆ.

ಸಾಯಂಕಾಲ ಅಥವಾ ರಾತ್ರಿ ಸ್ನಾನ ಮಾಡುವುದು ಒಳ್ಳೆಯದಲ್ಲ. ಸ್ನಾನ ಮಾಡುವಾಗ ಮುಖ್ಯವಾಗಿ ಎಲ್ಲಾ ನದಿಗಳಿಗೆ ಕೃತಜ್ಞತೆ ಮತ್ತು ಗೌರವವನ್ನು ಸೂಚಿಸುತ್ತಾ ಶಾಸ್ತ್ರದಲ್ಲಿ ಉಲ್ಲೇಖ ಮಾಡಿರುವ “ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ| ನರ್ಮದೆ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||” ಈ ಶ್ಲೋಕವನ್ನು ಪಠಿಸಬೇಕು. ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಮತ್ತು ಕಾವೇರಿ ನದಿಗಳೇ ನೀವೆಲ್ಲರೂ ನನ್ನ ಸ್ನಾನದ ನೀರಿನಲ್ಲಿ ಬನ್ನಿರಿ ಎಂದು ಈ ಶ್ಲೋಕದ ಅರ್ಥ. ಈ ಶ್ಲೋಕ ಪಠಿಸುವುದರಿಂದ ತೀರ್ಥ ಸ್ನಾನದ ಪುಣ್ಯ ನಿಮಗೆ ದೊರಕುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!