ಕನ್ನಡದ ಪ್ರಖ್ಯಾತ ನಟಿ ತೇಜಸ್ವಿನಿ ಪ್ರಕಾಶ್ ಮದುವೆ ಫೋಟೋಸ್! ಇಲ್ಲಿದೆ

0

actress tejaswini prakash Marriage Latest photos: ಸ್ನೇಹಿತರೆ, ಡಾಕ್ಟರ್ ವಿಷ್ಣುವರ್ಧನ್ ಅವರ ಮಾತಡ್ ಮಾತಾಡು ಮಲ್ಲಿಗೆ (Mathad Mathadu Mallige) ಸಿನಿಮಾದಿಂದ ಇಂದಿನವರೆಗೂ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸುತ್ತಾ ಕನ್ನಡ ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವಂತಹ ನಟಿ ತೇಜಸ್ವಿನಿ ಪ್ರಕಾಶ್(Tejaswini Prakash) ಪಣಿವರ್ಮ (Pani Varma) ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ದಂಪತಿಗಳ ಮದುವೆ ಫೋಟೋಸ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ಲಾಗುತ್ತಿದ್ದು, ಕೆಂಪು ಹಾಗೂ ಚಿನ್ನ ಮಿಶ್ರಿತವಿರುವ ಸೀರೆಯಲ್ಲಿ ನಟಿ ತೇಜಸ್ವಿನಿ ಕಂಗೊಳಿಸಿದರೆ ಫಣಿವರ್ಮ ಅವರು ಬಿಳಿ ಬಣ್ಣದ ಸಾಂಪ್ರದಾಯಕ ಉಡುಗೆಯಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. ಇವರ ಮದುವೆಗೆ ಸ್ಯಾಂಡಲ್ ವುಡ್ನ ಸಾಕಷ್ಟು ಸೆಲೆಬ್ರಿಟಿಗಳು ಸ್ನೇಹಿತರು ಹಾಜರಾಗಿ ನವ ವಧು ವರರನ್ನು ಆಶೀರ್ವದಿಸಿದ್ದಾರೆ.

ಸದ್ಯ ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿನಿ ಪ್ರಕಾಶ್ ಸಂತಸ ವ್ಯಕ್ತಪಡಿಸಿದ್ದಾರೆ. 2007ರಲ್ಲಿ ‘ಮಸಣದ ಮಕ್ಕಳು’ ಎಂಬ ಚಿತ್ರದ ಮೂಲಕ ತಮ್ಮ ಬಣ್ಣದ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ ತೇಜಸ್ವಿನಿ ಅನಂತರ ಅರಮನೆ, ಗಜ, ಗೂಳಿ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ಮಾತಾಡ್ ಮಾತಾಡು ಮಲ್ಲಿಗೆ, ಸವಿ ಸವಿ ನೆನಪು, ಬಂಧು ಬಳಗ, ನಂದಗೋಕುಲ, ಕಿಲಾಡಿ ಕೃಷ್ಣ, ಕಲ್ಯಾಣ ಮಸ್ತು ಹೇಗೆ ಮುಂತಾದ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸುತ್ತ ಅತಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡರು.

ಅದಲ್ಲದೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(Bigg Boss) ಸೀಸನ್ 5ಕ್ಕೂ ಪಾದರ್ಪಣೆ ಮಾಡಿ ಮನೆ ಮಾತದಂತಹ ತೇಜಸ್ವಿನಿ ನನ್ನರಸಿ ರಾಧೆ ಧಾರವಾಹಿಯ ಮೂಲಕ ಕನ್ನಡ ಕಿರುತರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಾ ಜನಮನ ಗೆದ್ದರು. ಹೀಗೆ ಬರೋಬ್ಬರಿ 10 ವರ್ಷಗಳಿಂದ ಸಿನಿಮಾ ಬದುಕಿನಲ್ಲಿ ಮಹತ್ತರವಾದ ಯಶಸ್ಸನ್ನು ಸಾಧಿಸಿದ್ದಂತಹ ನಟಿ ತೇಜಸ್ವಿನಿ(Tejaswini) ಕಳೆದ ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ ನಾನು ಮದುವೆಯಾಗಬೇಕು ಅಂದ್ರೆ ಈ ನಟಿ ತರಾನೇ ಹುಡುಗಿ ಸಿಗಬೇಕು ಎಂದ ಕುರಿಗಾಹಿ ಹನುಮಂತಣ್ಣ!

Leave A Reply

Your email address will not be published.

error: Content is protected !!