WhatsApp Group Join Now
Telegram Group Join Now

ಸ್ನೇಹಿತರೆ, ಹಲವಾರು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ರಮ್ಯಾ ಅವರು ಇದ್ದಕ್ಕಿದ್ದ ಹಾಗೆ ಚಿತ್ರರಂಗ ಹಾಗು ರಾಜಕೀಯ ಎರಡನ್ನು ತೊರೆದು ಅಭಿಮಾನಿಗಳಿಂದ ದೂರ ಉಳಿದಿದ್ದರು. ಆದರೀಗ ಮತ್ತೆ ಕಂಬ್ಯಾಕ್ ಮಾಡುವ ಮೂಲಕ ಅಭಿಮಾನಿ ವರ್ಗಕ್ಕೆ ಎಲ್ಲಿಲ್ಲದ ಸಂತಸವನ್ನು ನೀಡಿದ್ದಾರೆ. ಅದರಲ್ಲೂ ರಮ್ಯಾ ಅವರ ಅಭಿಮಾನಿಗಳು ಇವರ ಸಿನಿಮಾವನ್ನು ತೆರೆಯ ಮೇಲೆ ಮತ್ತೊಮ್ಮೆ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದು.

ಇದರ ಬೆನ್ನಲ್ಲೇ ರಮ್ಯಾ ಹೊಸ ಹೊಸ ಫೋಟೋ ಶೂಟ್ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಹೌದು ಗೆಳೆಯರೇ 20 ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ರಮ್ಯಾ ಅವರು ಪುನೀತ್ ರಾಜಕುಮಾರ್ ಅವರ ಅಪ್ಪು ಸಿನಿಮಾದ ಮೂಲಕ ನಾಯಕ ನಟಿಯಾಗಿ ಡಾಕ್ಟರ್ ರಾಜಕುಮಾರ್ ಮನೆತನದ ಸಹಾಯದಿಂದ ಎಂಟ್ರಿ ಕೊಟ್ಟರು.

ಅಂದಿನಿಂದ ಇಂದಿನವರೆಗೂ ಅಷ್ಟೇ ಬೇಡಿಕೆ ಹಾಗೂ ಕ್ರೇಜ್ ಅನ್ನು ಉಳಿಸಿಕೊಂಡು ಬಂದಿರುವ ರಮ್ಯಾ ಇದೀಗ ಕಂಬ್ಯಾಕ್ ಮಾಡುವ ಪ್ರಯತ್ನದಲ್ಲಿ ಸಾಕಷ್ಟು ಸಿನಿಮಾದ ಗೆಸ್ಟ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಮಾಹಿತಿ ತಿಳಿದು ಬಂದಿದೆ. ಇನ್ನು ರಾಜ್ ಬಿ ಶೆಟ್ಟಿ ಅವರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ನಾಯಕಿಯಾಗಿ ರಮ್ಯಾ ಅಭಿನಯಿಸಲಿದ್ದಾರೆ ಎಂಬ ಅಧಿಕೃತ ಸುದ್ದಿ ಹೊರಬಂದಿತ್ತು.

ಆದರೆ ಕಾರಣಾಂತರಗಳಿಂದ ರಮ್ಯಾ ಸಿನಿಮಾ ತಂಡದಿಂದ ಹೊರ ಬಂದಿದ್ದು, ಡಾಲಿ ಧನಂಜಯ್ ‘ಉತ್ತರ ಕಾಂಡ’ ಎಂಬ ಚಿತ್ರದ ಮೂಲಕ ತಮ್ಮ ಕಂಬ್ಯಾಕ್ನ ಮೊದಲ ಸಿನಿಮಾದಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳ ನೆಚ್ಚಿನ ಡಾಲಿ ಹಾಗೂ ರಮ್ಯಾ ಅವರ ಕಾಂಬಿನೇಷನನ್ನು ಒಟ್ಟಿಗೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಸಿನಿಮಾ ಅದಾಗಲೇ ಮೊದಲ ಹಂತದ ಶೂಟಿಂಗ್ ಪ್ರಾರಂಭಿಸಿದೆ.

ರಮ್ಯಾ ಕೂಡ ತಂಡವನ್ನು ಸೇರಿಕೊಂಡಿದ್ದು ಚಿತ್ರೀಕರಣದ ಕೆಲಸದ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಡನೆ ಒಡನಾಟದಲ್ಲಿರುವುದನ್ನು ಎಂದಿಗೂ ಮರೆಯುವುದಿಲ್ಲ. ನೆನ್ನೆಯಷ್ಟು ರಮ್ಯಾ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ರಮ್ಯಾ ಅವರು ಬಹಳನೇ ಕ್ಯೂಟ್ ಆಗಿ ಫೋಟೋಗೆ ಫೋಸ್ ನೀಡಿದ್ದು.

ತಮ್ಮ ಜೀವನವನ್ನು ಗುಲಾಬಿಗೆ ಹೋಲಿಸುತ್ತಾ ಅರ್ಥಭರಿತವಾದ ಇಂಗ್ಲಿಷ್ ಕವಿತೆ ಒಂದರ ಕ್ಯಾಪ್ಚರ್ ಬರೆದಿದ್ದಾರೆ. ಈ ಫೋಟೋಗಳು ಸದ್ಯ ಬಾರಿ ವೈರಲ್ ಆಗುತ್ತಿದ್ದು, ಅಮೃತ ಅಯ್ಯರ್, ಸಂಯುಕ್ತ ಹೆಗ್ಡೆ, ಮತ್ತು ವಾಸುಕಿ ವೈಭವ್ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದರು ಹಾಗೂ ಅಭಿಮಾನಿಗಳು ಇವರ ಹೊಸ ಫೋಟೋಗಳಿಗೆ ಫಿದಾ ಆಗಿ ಪ್ರೀಟಿ, ಕ್ಯೂಟ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: