WhatsApp Group Join Now
Telegram Group Join Now

ಸೆಲೆಬ್ರಿಟಿಗಳಿಗೆ ಇದೀಗ ರೀಲ್ಸ್ ಮಾಡುವುದೆಂದರೆ ಏನೋ ಒಂದು ಖುಷಿ.ಕೇವಲ ಸಾಮಾನ್ಯರಿಗೆ ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿರುತ್ತಾರೆ. ಈ ಮೂಲಕ ಸೆಲೆಬ್ರಿಟಿಗಳು ತಮ್ಮ‌ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇನ್ಸ್ಟಾಗ್ರಾಂ ಓಪನ್ ಮಾಡಿದರೆ ಅದರಲ್ಲಿ ಇದೀಗ ಫೋಟೊಗಳಿಗಿಂತ ರೀಲ್ಸ್ ವಿಡಿಯೋಗಳೇ ಹೆಚ್ಚು ಕಂಡು ಬರುತ್ತವೆ.

ಅದೇ ರೀತಿ ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯೂಟಿ ವೈಷ್ಣವಿ‌ ಗೌಡ ಕೂಡ ಈ ರೀಲ್ಸ್ ಮಾಡುವುದರಲ್ಲಿ ಎತ್ತಿದ ಕೈ. ಇವರು ಮನೆ ಮಗಳಾಗಿ ಗುರುತಿಸಿಕೊಂಡವರು. ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ಸನ್ನಿಧಿಯಾಗಿ ಪಾತ್ರ ಮಾಡಿದ್ದ ವೈಷ್ಣವಿ‌ ಗೌಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಎಷ್ಟೋ ಮಂದಿ ನಮಗೂ ಇಂತಹ ಸೊಸೆ ಅಥವಾ ಮಗಳು ಸಿಗಲಿ ಎಂದು ಆಸೆ ಪಟ್ಟಿದ್ದರು.

ಹೀಗೆ ಕನ್ನಡ ಕಿರುತೆರೆಯಲ್ಲಿ ಮನೆ ಮಗಳು ಎಂದೇ ಖ್ಯಾತಿ ಪಡೆದಿರುವ ನಟಿ‌ ವೈಷ್ಣವಿ‌ ಗೌಡ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದು ಬಿಗ್ ಬಾಸ್ ಸೀಸನ್ 8 ರಲ್ಲಿ ಅವರು ಸ್ಪರ್ಧಿಯಾಗಿ ಬಂದ ನಂತರ. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಅತ್ಯಂತ ಮುಗ್ಧೆಯಾಗಿ ಕಾಣಿಸಿಕೊಂಡಿದ್ದ ವೈಷ್ಣವಿ‌ ಗೌಡ ಬಿಗ್ ಬಾಸ್ ಮನೆಯಲ್ಲಿ ಪ್ರಾರಂಭದಲ್ಲಿ ಕೂಡ ಹಾಗೆಯೇ ಇದ್ದರು. ಆದರೆ ವಾರಗಳು ಕಳೆದಂತೆ ವೈಷ್ಣವಿ‌ ಗೌಡ ತಮ್ಮ ಕೀಟಲೆ ಹಾಗೂ ಹಾಸ್ಯ ಬುದ್ದಿ ಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಯ ಸ್ಪರ್ಧಿಯಾಗಿ ಬಿಟ್ಟಿದ್ದರು.

ಎಲ್ಲರ ಕಾಲೆಳೆಯುತ್ತಾ, ಜೋಕ್ ಮಾಡುತ್ತಾ ಎಲ್ಲರನ್ನು ನಗಿಸುತ್ತಿದ್ದರು. ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಅವರು ಜೊತೆಯಾದರೆ ಮುಗಿದೇ ಹೋಯಿತು. ಹೀಗೆ ಬಿಗ್ ಬಾಸ್ ಮನೆಯಿಂದ ಕೊನೆಯ ನಾಲ್ಕನೇ ಸ್ಪರ್ಧಿಯಾಗಿ ಮನೆಯಿಂದ ಹೊರ ಬಂದ ವೈಷ್ಣವಿ‌ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಅಕ್ಟೀವ್ ಆಗಿದ್ದಾರೆ. ವೈಷ್ಣವಿ‌ ಗೌಡ ಅವರು ಅದ್ಭುತ ಡ್ಯಾನ್ಸರ್. ಹೀಗಾಗಿ ಇವರು ನಾನ ಬಗೆಯ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ.

ಹಲವು ಸಿನಿಮಾಗಳ ಹಾಡುಗಳಿಗೂ ನಟಿ ವೈಷ್ಣವಿ ಆಗಾಗ ಸೊಂಟ ಬಳುಕಿಸುತ್ತಾರೆ. ಇತ್ತೀಚಿಗೆ ನಟ ಸುದೀಪ್, ಜಾಕ್ವೆಲಿನ್ ಡಾನ್ಸ್ ಮಾಡುವ ಇದಂತಹ ‘ರಾ.. ರಾ.. ರಕ್ಕಮ್ಮ’ ಹಾಡಿಗೆ ಕೂಡ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಹೃದಯ ಕದ್ದಿದ್ದರು. ಅದೇ ರೀತಿ ಶಿವರಾಜ್ ಕುಮಾರ್ ಅವರ ಭೈರವ ಸಿನಿಮಾದ ರಿದಮ್ ಆಫ್ ಶಿವಪ್ಪ ಹಾಡಿಗೂ ಸಿಗ್ನೇಚರ್ ಸ್ಟೆಪ್ ಹಾಕಿದ್ದರು. ಹೀಗೆ ಯಾವುದೇ ಟ್ರೆಂಡ್ ಆಗಿರುವ ಹಾಡು ಬರಲಿ ಅದಕ್ಕೆ ಅಭಿಮಾನಿಗಳ ಅದೇ ರೀತಿ ನೆಟ್ಟಿಗರ ದಿಲ್ ಖುಷ್ ಆಗುವಂತೆ ಸ್ಟೆಪ್ ಹಾಕುತ್ತಾರೆ.

ಒಂದಲ್ಲ ಒಂದು ವಿಡಿಯೋಗಳ ಮೂಲಕ ನಟಿ ವೈಷ್ಣವಿ ಕಿಚ್ಚು ಹಚ್ಚುತ್ತಾರೆ. ಇದೇ ರೀತಿ ಇದೀಗ ಸುಂದರವಾದ ಡ್ರೆಸ್ ತೊಟ್ಟ ವೈಷ್ಣವಿ ಗೌಡ ದಿಸ್ ವರ್ಸನ್ ಆಫ್ ರಾಬ್ತಾ ಎಂದು ಟೈಟಲ್ ಹಾಕಿ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಬಾಲಿವುಡ್ ದಿವಂಗತ ಸುಶಾಂತ್ ಸಿಂಗ ರಜ್ಪೂತ್ ಹಾಗೂ ದೀಪಿಕಾ ಪಡುಕೋಣೆ ಅವರ ರಾಬ್ತಾ ಸಿನಿಮಾದ ಹಾಡು ಇದಾಗಿದೆ.

ಆ ಹಾಡಿನಲ್ಲಿ ದೀಪಿಕಾ ಪಡುಕೋಣೆ ಫುಲ್ ಹಾಟ್ ಆಗಿ ಕಾಣಿಸಿದ್ದರೆ ವೈಷ್ಣವಿ‌ ಗೌಡ ಸ್ಟೈಲಿಷ್ ಸ್ಕರ್ಟ್ ಹಾಗೂ ಟಾಪ್ ನಲ್ಲಿ ಸ್ಮೂತ್ ಆಗಿ ಸ್ಟೆಪ್ ಹಾಕಿದ್ದಾರೆ. ಇದನ್ನು ಅದೆಷ್ಟು ಬಾರಿ ನೋಡಿದರೂ ಕಣ್ಣಿಗೆ ಸುಸ್ತಾಗುವುದಿಲ್ಲ. ನಿಮಗೆ ವೈಷ್ಣವಿ‌ ಗೌಡ ಅವರ ಈ ರೀಲ್ಸ್ ಹೇಗನ್ನಿಸಿತು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: