actress Ganesh with Shruti Daughters: ಸ್ನೇಹಿತರೆ ಸದ್ಯ ಸೋಶಿಯಲ್ ಮೀಡಿಯಾದಲ್ಲೊಂದು ವೈರಲ್ ಫೋಟೋ ಹರಿದಾಡುತ್ತಿದ್ದು ಕನ್ನಡದ ಸಿನಿ ತಾರೆಯರಾದ ಶ್ರುತಿ (Shruthi) ಮತ್ತು ಸುಧಾರಾಣಿ (Sudharani) ಮಕ್ಕಳೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲಿಕ್ಕಿಸಿಕೊಂಡಿರುವಂತಹ ಈ ಫೋಟೋ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ. ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಶ್ರುತಿ ಅವರು ಒಂದರ ಮೇಲೆ ಒಂದರಂತೆ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಉತ್ತುಂಗದ ಶಿಖರದಲ್ಲಿರುವಾಗಲೇ ಆಗಿನ ಪ್ರಖ್ಯಾತ ನಿರ್ದೇಶಕರಾಗಿದ್ದಂತಹ
ಎಸ್ ಮಹೇಂದರ್ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಕಾಲ ಸುಖ ಸಂಸಾರಿಕ ಜೀವನವನ್ನು ನಡೆಸಿದಂತಹ ಶ್ರುತಿ ಮತ್ತು ಮಹೇಂದರ್ ದಂಪತಿಗಳಿಗೆ ಗೌರಿ ಎಂಬ ಮುದ್ದಾದ ಮಗಳು ಜನಿಸುತ್ತಾಳೆ. ಆನಂತರ ಕೆಲ ವೈಯಕ್ತಿಕ ಕಾರಣಗಳಿಂದ ಶ್ರುತಿ ಹಾಗೂ ಮಹೇಂದ್ರ ದೂರಾದರು. ಹಾಗೆ ಸುಧಾರಾಣಿ ಕೂಡ ಅಮೆರಿಕ ಮೂಲದ ಸಂಜಯ್ ಎಂಬುವವರಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ಆದರೆ ಮದುವೆಯಾದ ಕೆಲ ತಿಂಗಳಲ್ಲೇ ವೈಯಕ್ತಿಕ ಕಲಹಗಳಿಂದಾಗಿ ಸಂಜಯವರನ್ನು ತೊರೆದು ಭಾರತಕ್ಕೆ ಬಂದಂತಹ ಸುಧಾರಾಣಿಯವರು ಸಿನಿ ಕೆಲಸಗಳಲ್ಲಿ ಮತ್ತೆ ಸಕ್ರಿಯರಾದಾಗ ಗೋವರ್ಧನ್ ಎಂಬ ಚಾರ್ಟೆಡ್ ಅಕೌಂಟೆಂಟ್ರ ಪರಿಚಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಈ ದಂಪತಿಗಳಿಗೆ ನಿಧಿ ಎಂಬ ಮಗಳಿದ್ದು ಮುಂದಿನ ದಿನಗಳಲ್ಲಿ ಆಕೆ ಕೂಡ ತಾಯಿಯಂತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಲಿದ್ದಾರಾ?
ಎಂಬುದನ್ನು ಕಾದು ನೋಡಬೇಕಿದೆ. ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರು ನಿಧಿ(Nidhi) ಹಾಗೂ ಗೌರಿ(Gowri) ಇಬ್ಬರ ಒಟ್ಟಿಗೆ ಬಾಲ್ಯದಲ್ಲಿ ಬಹಳ ಮುದ್ದಾದ ಫೋಟೋ ಒಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆನಂತರ ಕಳೆದ ಕೆಲವು ದಿನಗಳ ಇಂಡಸ್ಟ್ರಿ ನಡೆದ ಕಾರ್ಯಕ್ರಮ ಒಂದರಲ್ಲಿ ಈ ಫೋಟೋದ ಮೆಮೊರಿಯನ್ನು ಮತ್ತೆ ರೀ ಕ್ರಿಯೇಟ್ ಮಾಡಿರುವ ಗಣೇಶ್, ಗೌರಿ ಹಾಗೂ ನಿಧಿಯ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ(Social media) ಆಕರ್ಷಣೆಗೆ ಗುರಿಯಾಗುತ್ತಿದೆ.
ಹೌದು ಗೆಳೆಯರೇ ಬಾಲ್ಯದಿಂದಲೂ ಇಂದಿನವರೆಗೂ ಅದೇ ರೀತಿಯಾದಂತಹ ಬಾಂಧವ್ಯವನ್ನು ಮುಂದುವರೆಸಿಕೊಂಡು ಬಂದಿರುವ ಈ ಮೂವರ ಅಪರೂಪದ ಫೋಟೋಗೆ ಅಭಿಮಾನಿಗಳು ಪ್ರೀತಿಯ ಸುರಿಮಳೆಯನ್ನು ಹರಿಸುತ್ತಿದ್ದಾರೆ. ಇದನ್ನೂ ಓದಿ ನಟ ನೆನಪಿರಲಿ ಪ್ರೇಮ್ ಮನೆಯಲ್ಲಿ ನಡೆಯಿತು ಶ್ರಾವಣ ಪೂಜೆ! ದೇಸಿ ಉಡುಗೆಯಲ್ಲಿ ಮಿಂಚಿದ ಅಮ್ಮ ಮಗಳು