ನಟ ನೆನಪಿರಲಿ ಪ್ರೇಮ್ ಮನೆಯಲ್ಲಿ ನಡೆಯಿತು ಶ್ರಾವಣ ಪೂಜೆ! ದೇಸಿ ಉಡುಗೆಯಲ್ಲಿ ಮಿಂಚಿದ ಅಮ್ಮ ಮಗಳು

0

ಸ್ನೇಹಿತರೇ, ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಹಲವು ದಶಕಗಳಿಂದ ಕನ್ನಡ ಸಿನಿಮಾರಂಗದಲ್ಲಿ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ನೆನಪಿರಲಿ ಪ್ರೇಮ್(Nenapirali Prem), ಸಿನಿ ಕೆಲಸಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇದ್ದು, ಆಗಾಗಿ ತಮ್ಮ ಹೆಂಡತಿ ಹಾಗೂ ಮಕ್ಕಳೊಂದಿಗಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಲೇ ವೈರಲ್ ಆಗುತ್ತಿರುತ್ತಾರೆ.

ಹೌದು ಸ್ನೇಹಿತರೆ ಜ್ಯೋತಿ (Jyothi) ಎಂಬುವರನ್ನು ಪ್ರೀತಿಸಿ ಮನೆಯವರ ವಿರೋಧವಾಗಿ ಓಡಿ ಹೋಗಿ ಪುಟ್ಟ ದೇವಸ್ಥಾನ ಒಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಾಂಸಾರಿಕ ಜೀವನವನ್ನು ಶುರು ಮಾಡಿದಂತಹ ಪ್ರೇಮ್ ದಂಪತಿಗಳಿಗೆ ಅಮೃತ(Amrutha) ಮತ್ತು ಏಕ್ನಾತ್(Eknath) ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು, ಮಗಳು ಅಮೃತ ಟಗರು ಪಲ್ಯ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ನಾಯಕ ನಟಿಯಾಗಿ ಕಾಲಿಟ್ಟರೆ,

ಮಗ ಏಕ್ನಾಥ ಶರಣ್ ಅವರ ಗುರು-ಶಿಷ್ಯರು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ. ಆಗಾಗ ತಮ್ಮ ಮಕ್ಕಳ ಜೊತೆಗಿನ ಕ್ಯುಟೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುವ ಪ್ರೇಮ್ ಮತ್ತು ಜ್ಯೋತಿ ದಂಪತಿಗಳು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮನೆಯಲ್ಲಿ ಬಹಳ ಸಿಂಪಲ್ ಆಗಿ ಲಕ್ಷ್ಮಿ ದೇವಿಯ ಪೂಜಾರಾದನೆಯನ್ನು ಮಾಡಿ ದೇವಿಯ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇನ್ನು ವಿಶೇಷವಾಗಿ ಅಮೃತ (Amrutha) ಕೂಡ ತಾಯಿಯಂತೆ ಸೀರೆಯುಟ್ಟು ಟ್ರಡಿಷನಲ್ ಉಡುಗೆಯಲ್ಲಿ ಕ್ಯಾಮೆರಾದ ಕಣ್ಣಿಗೆ ಪೋಸ್ ನೀಡಿದ್ದು ಬಹಳ ಸುಂದರವಾಗಿ ಕಾಣುವ ಪ್ರೇಮ್ ಅವರ ಫ್ಯಾಮಿಲಿ ಫೋಟೋಗೆ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇನ್ನು ಹಲವು ಅಭಿಮಾನಿಗಳು ಈ ಸುಂದರ ಕುಟುಂಬಕ್ಕೆ ಯಾರ ಕೆಟ್ಟ ದೃಷ್ಟಿನೂ ಬೀಳದೆ ಇರಲ್ಲಪ್ಪ ದೇವರೇ, ಬ್ಯೂಟಿಫುಲ್ ಫ್ಯಾಮಿಲಿ, ಯಾವಾಗಲು ಹೀಗೆ ಇರಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಪ್ರೇಮ್ ಕುಟುಂಬಕ್ಕೆ ಕೋರಿದ್ದಾರೆ.

Leave A Reply

Your email address will not be published.

error: Content is protected !!