ಮನೆಯಲ್ಲಿ ದೀಪ ಹಚ್ಚುವ ಹೆಣ್ಮಕ್ಕಳೇ ಇಲ್ಲಿ ಗಮನಿಸಿ

0

ಮನೆಯಲ್ಲಿ ನಾವು ದೇವರಿಗೆ ಕೆಲವರು ಬಾಗಿಲಿಗೂ ದೀಪವನ್ನು ಹಚ್ಚುತ್ತಾರೆ, ಸನಾತನ ಸಂಸ್ಕೃತಿಯಲ್ಲಿ ಮನೆಯಲ್ಲಿ ದೀಪ ಹಚ್ಚುವುದು ಮನೆಗೆ ಶ್ರೇಯಸ್ಸು ದೀಪದ ಬೆಳಕು ಅಂಧಕಾರವನ್ನು ಹೋಗಲಾಡಿಸಿ ಮನೆಗೆ ಬೆಳಕನ್ನು ತುಂಬುತ್ತದೆ ಎನ್ನುವ ನಂಬಿಕೆ ಇದೆ ಅಂತಹ ದೀಪಕ್ಕೆ ಬತ್ತಿಯನ್ನು ಹಾಕಲಾಗುತ್ತದೆ. ದೀಪದ ಬತ್ತಿ ಹೇಗಿರಬೇಕು ಎಷ್ಟು ಬತ್ತಿಯನ್ನು ಹಾಕಿದರೆ ಯಾವೆಲ್ಲಾ ಪ್ರಯೋಜನಗಳಿವೆ ಅಥವಾ ಅನಾನುಕೂಲಗಳಿವೆ ಎಂಬುದರ ಬಗ್ಗೆ ಹಲವು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮನೆಯಲ್ಲಿ ದೇವರ ಪೂಜೆಗೆ ಬತ್ತಿಯನ್ನು ಮಾಡುತ್ತೇವೆ ಬತ್ತಿಯ ಬಗ್ಗೆ ಅನೇಕ ವಿಷಯಗಳು ನಮಗೆ ಗೊತ್ತಿಲ್ಲ ಹಲವು ವಿಷಯಗಳನ್ನು ತಿಳಿದುಕೊಂಡು ದೀಪಕ್ಕೆ ಬತ್ತಿಯನ್ನು ಬಳಸಬೇಕು ದೀಪದ ಬತ್ತಿ ಕೊಳೆಯಾಗಿದ್ದರೆ ಮನೆಯಲ್ಲಿರುವವರಿಗೆ ಜ್ಞಾಪಕ ಶಕ್ತಿ ಕಡಿಮೆಯಾಗಿ ಬಹಳ ಯೋಚನೆ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ದೀಪದ ಬತ್ತಿಯು ಕಪ್ಪಾಗಿದ್ದರೆ ದಿನೆ ದಿನೆ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ದೀಪದ ಬತ್ತಿಯು ಹಾಲಿನಂತೆ ಬೆಳ್ಳಗಿದ್ದರೆ ಜೀವನದಲ್ಲಿ ಸಮಸ್ತ ಕಾರ್ಯಗಳು ಸರಾಗವಾಗಿ ಸಾಗುತ್ತದೆ.

ದೀಪದ ಬತ್ತಿಯು ಬಹಳ ಚಿಕ್ಕದಾಗಿದ್ದರೆ ಮನೆಯಲ್ಲಿ ಜಿಪುಣತನ ಕಂಡು ಬರುತ್ತದೆ ಅಲ್ಲದೆ ಮನೆಯಲ್ಲಿ ಸದಾ ಕೋಪ ಜಗಳ ಮನಸ್ತಾಪ ಮನೆ ಮಾಡುತ್ತದೆ. ದೀಪದ ಬತ್ತಿಯು ಕೃತಕ ಬಣ್ಣಗಳಿಂದ ಕೂಡಿದ್ದರೆ ದೇಹಕ್ಕೆ ಅಗೋಚರವಾದ ಅಂದರೆ ಕಣ್ಣಿಗೆ ಕಾಣಿಸದ ಯಾರಿಗೂ ಗೊತ್ತಾಗದೆ ಇರುವಂತಹ ರೋಗಗಳು ಹಾಗೂ ಚರ್ಮವ್ಯಾಧಿಗಳು ಕಂಡುಬರುತ್ತದೆ. ದೀಪದ ಬತ್ತಿಯು ಗಟ್ಟಿಯಾಗಿದ್ದರೆ ಮನೆಯಲ್ಲಿರುವ ಎಲ್ಲರೂ ಒಗ್ಗಟ್ಟಿನಿಂದ ಕೂಡಿರುತ್ತಾರೆ. ಬತ್ತಿ ಎರಡಕ್ಕಿಂತ ಜಾಸ್ತಿ ಇದ್ದರೆ ದೇವರ, ಗುರುಗಳ ಅನುಗ್ರಹ ಎಂದೆಂದೂ ಇದ್ದು ಗೆಳೆಯರ ಸಹಾಯ ದೊರಕುವುದಲ್ಲದೆ ಸಕಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ.

ಒಂದೊಂದು ದೀಪಕ್ಕೆ ಒಂದೊಂದು ಬತ್ತಿಯಂತೆ ಎರಡು ದೀಪಕ್ಕೆ ಹಚ್ಚಿದರೆ ಮನೆಯಲ್ಲಿ ಸುಖ ಶಾಂತಿ ಇರುತ್ತದೆ. ಒಂದೊಂದು ದೀಪಕ್ಕೆ ಎರಡು ಬತ್ತಿ ಎರಡು ದೀಪ ಹಚ್ಚಿದರೆ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಒಂದೊಂದು ದೀಪಕ್ಕೆ ನಾಲ್ಕು ಬತ್ತಿ ಹಚ್ಚಿದರೆ ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ, ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುತ್ತದೆ, ಮಕ್ಕಳು ವಿದ್ಯಾವಂತರಾಗುತ್ತಾರೆ. ಒಂದೊಂದು ದೀಪಕ್ಕೆ ಆರು ಬತ್ತಿ ಹಚ್ಚಿದರೆ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತಲೆ ಇರುತ್ತದೆ. ಮಹಾಲಕ್ಷ್ಮೀಯ ಅನುಗ್ರಹ ಎಂದೆಂದೂ ಇದ್ದು ಸಾಲದ ಸಮಸ್ಯೆ ನಿವಾರಣೆ ಆಗುತ್ತದೆ.

ಮನೆಯಲ್ಲಿ ಒಂದೊಂದು ದೀಪಕ್ಕೆ ಎಂಟು ಬತ್ತಿ ಹಚ್ಚಿದರೆ ಮನೆಯಲ್ಲಿ ರೋಗಭಾದೆ ಇಲ್ಲದೆ ಎಲ್ಲರೂ ಆರೋಗ್ಯವಂತರಾಗಿ ಇರುತ್ತಾರೆ, ಅಪಮೃತ್ಯು ಅಪಘಾತ ಭಯ ದೂರವಾಗುತ್ತದೆ. ಮನೆಯಲ್ಲಿ ಒಂದೊಂದು ದೀಪಕ್ಕೆ ಹತ್ತು ಬತ್ತಿ ಹಚ್ಚಿದರೆ ದೇವರ, ಗುರುಗಳ ಅನುಗ್ರಹ ಆಶೀರ್ವಾದ ಎಂದೆಂದೂ ಇದ್ದು ಸಕಲ ಕಾರ್ಯಗಳು ಸುಸೂತ್ರವಾಗಿ ಸಾಗುತ್ತದೆ, ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ ಜೊತೆಗೆ ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ ಜಾತಕದ ಸರ್ವ ಶಾಪಗಳು ನಿವಾರಣೆಯಾಗುತ್ತದೆ.

ದೇವರ ಪೂಜೆ ಮಾಡುವಾಗ ಹೂವು, ಹಣ್ಣು ಕಾಯಿ ಹೇಗೆ ಮುಖ್ಯವೊ ಅದರಂತೆ ದೇವರ ಮುಂದೆ ದೀಪ ಹಚ್ಚಲೇಬೇಕು. ದೀಪ ಹಚ್ಚದೆ ದೇವರ ಪೂಜೆಯನ್ನು ಮಾಡಿದರೆ, ಪೂಜೆ ಸಂಪೂರ್ಣವಾಗುವುದಿಲ್ಲ. ಮನೆಯಲ್ಲಿ ದೇವರ ಮುಂದೆ ಹಚ್ಚಿಟ್ಟ ದೀಪದ ಬೆಳಕನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೊ ಖುಷಿ ತಂದುಕೊಡುತ್ತದೆ ದೀಪದ ಬೆಳಕು ಮನೆಯಲ್ಲಿರುವ ಅಂಧಕಾರವನ್ನು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಪ್ರತಿದಿನ ಸಂಜೆ ಹೆಣ್ಣುಮಕ್ಕಳು ಹಾಗೂ ಬೆಳಗ್ಗೆ ಗಂಡು ಮಕ್ಕಳು ದೀಪವನ್ನು ಹಚ್ಚಬೇಕು ಹೀಗೆ ದೇವರಿಗೆ ದೀಪ ಹಚ್ಚುವಾಗ ದೀಪದ ಬತ್ತಿ ಹೇಗಿರಬೇಕು ಅಥವಾ ಯಾವ ರೀತಿ ಇರುವ ದೀಪದ ಬತ್ತಿ ಏನನ್ನು ಹೇಳುತ್ತದೆ ಎಂಬುದು ತಿಳಿಯಿತಲ್ಲವೆ ನಿಮ್ಮ ಮನೆಯ ದೀಪದ ಬತ್ತಿ ಹೇಗಿದೆ ಎಷ್ಟು ಬತ್ತಿಯಿಂದ ದೀಪವನ್ನು ಹಚ್ಚುತ್ತಿದ್ದೀರಿ ಎಂಬುದನ್ನು ನಮಗೆ ತಿಳಿಸಿ.

Leave A Reply

Your email address will not be published.

error: Content is protected !!
Footer code: