ಸ್ನೇಹಿತರೆ ತಮ್ಮ ಅದ್ಭುತವಾದ ಹಾಸ್ಯ ಪ್ರತಿಭೆಯ ಮೂಲಕ ಪ್ರತಿಯೊಬ್ಬ ಕನ್ನಡಿಗನಿಗೆ ನಗುವಿನ ಕಚಗುಳಿ ಇಡುತ್ತಾ ದುನಿಯಾ(Duniya) ಸಿನಿಮಾದಿಂದ ಇಂದಿನವರೆಗೂ ಅಷ್ಟೇ ಬೇಡಿಕೆಯನ್ನು ಪಡೆದು ಕನ್ನಡ ಚಿತ್ರರಂಗದ ಹಾರ್ಟ್ ಫೇವರೆಟ್ ನಟರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿರುವಂತಹ ರಂಗಾಯಣರಗೂ ನಿಮ್ಮೆಲ್ಲರಿಗೂ ಚಿರಪರಿಚಿತ. ಆದರೆ ಅವರ ಮಗಳು ಯಾರು? ಹೇಗಿದ್ದಾರೆ?
ತಮ್ಮ ತಂದೆಯಂತೆಯೇ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರ?ಎಂಬ ಎಲ್ಲ ಮಾಹಿತಿ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ದುನಿಯಾ ವಿಜಯ್ ಅವರ ಹಲವಾರು ಸಿನಿಮಾಗಳಲ್ಲಿ ರಂಗಾಯಣ ರಘು (Rangayana Raghu) ಅವರ ಅದ್ಭುತ ಅಭಿನಯದ ಪ್ರದರ್ಶನವನ್ನು ಕಂಡಿರುತ್ತೀರಿ.
ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ ಎಂಬ ಡೈಲಾಗ್ ಮೂಲಕ ಖ್ಯಾತಿ ಪಡೆದ ರಂಗಾಯಣ ರಘು 1965ರಲ್ಲಿ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಜನಿಸಿದವರು ಸದ್ಯ ಇವರಿಗೆ 57ವರ್ಷ. 1955ರಲ್ಲಿ ರಂಗಾಯಣರಘು ಹಂಸಲೇಖರವರ ಸುಗ್ಗಿ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಪಾದರ್ಪಣೆ ಮಾಡಿದರು.
ಹೀಗೆ ಅಂದಿನಿಂದ ಇಂದಿನವರೆಗೂ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವ ರಂಗಾಯಣ ರಘು (Rangayana Raghu) ತಮ್ಮ ಯಶಸ್ವಿ ಪಾತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಇನ್ನೂ 2014ರಲ್ಲಿ ಮಂಗಳ (Mangala) ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಂಗಾಯಣ ರಘು (Rangayana Raghu) ಪತ್ನಿ ಜೊತೆ ಸೇರಿಕೊಂಡು ಬೆಂಗಳೂರಿನಲ್ಲಿ ಸಂಚಾರಿ ಥಿಯೇಟರ್ ಒಂದನ್ನು ಓಪನ್ ಮಾಡಿದ್ದಾರೆ.
ಸಂಚಾರಿ ಥಿಯೇಟರ್ನಲ್ಲಿ(Sanchari Theatre) ಮಂಗಳ ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ. ಈ ದಂಪತಿಗಳಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ, ಆಕೆಯ ಹೆಸರು ಚುಕ್ಕಿ(Chikki), ಆಕೆ ಕೂಡ ಬೆಂಗಳೂರಿನಲ್ಲಿ ತಮ್ಮ ಡಿಗ್ರಿ ವಿದ್ಯಾಭ್ಯಾಸವನ್ನು ಮುಗಿಸಿದ್ದು, ಬಿಡುವಿದ್ದಾಗ ತಂದೆಯ ಥಿಯೇಟರನ್ನು ನೋಡಿಕೊಳ್ಳುತ್ತಿದ್ದಾರೆ. ದೇವಸ್ಥಾನಕ್ಕೆ ತೆರಳಿ ನಾಗರ ಪಂಚಮಿ ಆಚರಿಸಿದ ನಟಿ ಪ್ರಣಿತಾ ಸುಭಾಷ್!