Harshika poonacha: ಕೊಡಗಿನ ಶೈಲಿಯಲ್ಲಿ ಮದುವೆಗೆ ಸಿದ್ದರಾದ ಹರ್ಷಿಕ ಪುಣಚ್ಚ ಇಲ್ಲಿವೆ ಸಕತ್ ಫೋಟೋಸ್

0

Harshika poonacha ಸ್ನೇಹಿತರೆ, ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ ನಟಿಯರಾದಂತಹ ಹರ್ಷಿಕ ಪುಣಚ್ಚ Harshika poonachaಮತ್ತು ಭುವನ್ ಕೊಡವ ಸಾಂಪ್ರದಾಯದಂತೆ ಆಗಸ್ಟ್ 24 ನೇ ತಾರೀಕಿನಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಮದುವೆಗೂ ಮುನ್ನ ನಡೆಯಬೇಕಿದ್ದಂತಹ ಎಲ್ಲಾ ಪೂಜಾ ವಿಧಾನಗಳನ್ನು ನೆರವೇರಿಸಿ ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸ್ಯಾಂಡಲ್ವುಡ್ನ ಮುದ್ದಾದ ಜೋಡಿ ಹಕ್ಕಿಗಳು ಎಂದೇ ಕರೆಸಿಕೊಳ್ಳುತ್ತಿದ್ದ ಹರ್ಷಿಕ ಮತ್ತು ಭುವನ್ (Harshika- Bhuvan) ಕಳೆದ 12 ವರ್ಷಗಳಿಂದ ಪ್ರೀತಿಸಿ ಒಂದು ಒಳ್ಳೆ ಸಕ್ಸಸ್ ದೊರೆತ ನಂತರ ಮದುವೆಯಾಗಲು ತೀರ್ಮಾನ ಮಾಡಿರುತ್ತಾರೆ. ಹೀಗೆ ಇವರಿಬ್ಬರ ಮದುವೆಗೆ ಎರಡು ಮನೆ ಕಡೆಯಿಂದ ಒಪ್ಪಿಗೆ ದೊರೆತು ಇದೀಗ ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹೌದು ಗೆಳೆಯರೇ ಸ್ವತಹ ಸಂದರ್ಶನ ಒಂದರಲ್ಲಿ ಹರ್ಶಿಕ ಮತ್ತು ಭುವನ್ ಅವರೇ ಹೇಳಿದ ಹಾಗೆ ಫ್ಯಾಶನ್ ಶೋ ಒಂದರಲ್ಲಿ ಇವರಿಬ್ಬರ ಪರಿಚಯವಾಗಿ, ಪರಿಚಯವೇ ಪ್ರೀತಿಗೆ ತಿರುಗಿ ಭುವನ್ ಹರ್ಷಿಕಗೆ ಪ್ರೇಮ ನಿವೇದನೆಯನ್ನು(love proposal) ಮಾಡಿ ಒಂದೇ ಒಂದು ದಿನದಲ್ಲೇ ಉತ್ತರ ಹೇಳಬೇಕೆಂದು ಕಂಡಿಶನ್ ಕೂಡ ಹಾಕುತ್ತಾರಂತೆ. ಹೀಗೆ ಫಸ್ಟ್ ಇಂಪ್ರೆಷನಲ್ಲೇ ಭುವನ್ನವರಿಗೆ ಮಾರಿ ಹೋದಂತಹ ಹರ್ಷಿಕ ಗ್ರೀನ್ ಸಿಗ್ನಲ್ ನೀಡಿ ಕಳೆದ 12 ವರ್ಷಗಳಿಂದ ಜೊತೆಗಿದ್ದಾರೆ.

ಇಷ್ಟು ವರ್ಷಗಳ ಕಾಲ ಪ್ರೀತಿಸಿ ಇದನ್ನು ಗುಟ್ಟಾಗಿ ಇಟ್ಟುಕೊಂಡಿದ್ದು ಯಾಕೆ ಎಂದು ಸಂದರ್ಶಕರು ಕೇಳಿದ್ದಕ್ಕೆ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೆ ಇರಲಿ ಎಂದು ಈವರೆಗೂ ಎಲ್ಲಿಯೂ ಇದನ್ನು ಬಹಿರಂಗಪಡಿಸದೆ ಸೈಲೆಂಟಾಗಿ ಇದ್ವಿ ನಮ್ಮ ಆತ್ಮೀಯರು ಹಾಗೂ ಕುಟುಂಬಸ್ಥರಿಗೆ ಮಾತ್ರ ನಮ್ಮ ಪ್ರೀತಿ ವಿಚಾರ ಗೊತ್ತಿತ್ತು ಎಂಬ ಸ್ಪಷ್ಟನೆ ನೀಡಿದರು.

ಈಗ ಇಬ್ಬರು ಕೊಡುವ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, 23-24ರ ಆಗಸ್ಟ್ನಂದು ಕೊಡಗಿನ ವಿರಾಜಪೇಟೆಯಲ್ಲಿ(Kodagu, Virajpet) ಹರ್ಷಿಕಾ ಮತ್ತು ಭುವನ್ ಅವರ ಅದ್ದೂರಿ ಮದುವೆ ಸಮಾರಂಭ ನಡೆಯಲಿದೆ. ಈ ಮದುವೆಗೆ ಚಿತ್ರರಂಗದ ಹಾಗೂ ರಾಜಕೀಯ ಪ್ರಭಾವಿ ವ್ಯಕ್ತಿಗಳು ಆತ್ಮೀಯ ಸ್ನೇಹಿತರು ಹಾಜರಾಗಲಿದ್ದಾರೆ.

ಇದನ್ನೂ ಓದಿ: ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಹಾಸ್ಯ ಪ್ರತಿಭೆ, ರಂಗಾಯಣ ರಘು ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ಇವರ ಮುದ್ದಾದ ಕುಟುಂಬದ ಫೋಟೋಸ್

Leave A Reply

Your email address will not be published.

error: Content is protected !!