Ashish Vidyarthi: 60ನೇ ವಯಸ್ಸಿನಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಶಿಷ್ ವಿದ್ಯಾರ್ಥಿ ದಂಪತಿಗಳ ಫೋಟೋಸ್!

0

Ashish Vidyarthi 2nd Marriage photos: ಸ್ನೇಹಿತರೆ, ಕಳೆದ ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಆಶಿಷ್ ವಿದ್ಯಾರ್ಥಿಯವರ ಕುರಿತಾದ ಸಾಕಷ್ಟು ವಿಚಾರಗಳು ಭಾರಿ ಮಟ್ಟದ ಸಂಚಲನ ಸೃಷ್ಟಿ ಮಾಡಿತ್ತು. ಮೊಮ್ಮಕ್ಕಳನ್ನು ಆಡಿಸುವಂತಹ ವಯಸ್ಸಿನಲ್ಲಿ ಈ ನಟ ಮದುವೆಯಾಗ ಹೊರಟಿದ್ದಾರಲ್ಲ ಎಂದು ತಮ್ಮ ವಿರೋಧವನ್ನು ಹಲವರು ನೆಟ್ಟಿಗರು ವ್ಯಕ್ತಪಡಿಸಿದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಹೊಸ ಜೀವನದ ಸಂತಸದ ಸಮಯವನ್ನು ತಮ್ಮ ಎರಡನೇ ಪತ್ನಿ ರೂಪಾಲಿ ಬರುವ(Roopali Baruva)

ಅವರೊಂದಿಗೆ ಆನಂದಿಸುತ್ತಿರುವ ಆಶಿಷ್ ವಿದ್ಯಾರ್ಥಿ (Ashish Vidyarthi) ಸೋಶಿಯಲ್ ಮಿಡಿಯಾ ಖಾತೆಯಲ್ಲಿ ತಮ್ಮ ಪತ್ನಿಯ ಜೊತೆಗಿನ ಹಲವು ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಟ್ರೆಂಡಿಂಗ್ ನಲ್ಲಿ ಇದ್ದಾರೆ. ಹೌದು ಗೆಳೆಯರೇ ಆಶಿಶ್ ವಿದ್ಯಾರ್ಥಿ ತಮ್ಮ ಮೊದಲ ಪತ್ನಿ ರಾಜೋಶಿ ಬರುವ ಅವರಿಗೆ ಕೆಲ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ನೀಡಿದರು. ಈ ದಂಪತಿಗಳಿಗೆ ಅರ್ಥ ವಿದ್ಯಾರ್ಥಿಯೆಂಬ ಮಗನಿದ್ದು ಆತ ಕೂಡ ಬರಹಗಾರನಾಗಿ ನಟನಾಗಿ ಗಾಯಕನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಹೀಗಿರುವಾಗ ತಮ್ಮ 60ನೇ ವಯಸ್ಸಿನಲ್ಲಿ ಆಶಿಷ್ ವಿದ್ಯಾರ್ಥಿ, ರೂಪಾಲಿ ಬರುವ ಎಂಬ ಕೊಲ್ಕತ್ತಾ ಮೂಲದ ಉದ್ಯಮಿಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಸಹಜ ಪರಿಚಯದಿಂದ ಶುರುವಾದಂತಹ ಇವರಿಬ್ಬರ ಸ್ನೇಹ ಕಾಲ ಪ್ರೀತಿಗೆ ತಿರುಗುತ್ತದೆ ರೂಪಾಲಿ ಬರುವ ಅವರಿಗೂ ಕೂಡ 50 ವರ್ಷ ವಯಸ್ಸಾಗಿತ್ತು. ಆಕೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಕಾರಣ ಆಶಿಶ್ ವಿದ್ಯಾರ್ಥಿ (Ashish Vidyarthi) ನನ್ನನ್ನು ಮದುವೆ ಮಾಡಿಕೊಳ್ಳುವಿರಾ ಎಂದು ಕೇಳುತ್ತಾರೆ.

ಹೀಗೆ ಕೇಳಿದೊಡನೆ ಒಪ್ಪಿಕೊಂಡು ಮನೆಯವರೆಲ್ಲರ ನಿರ್ಧಾರ ತೆಗೆದುಕೊಂಡ ನಂತರ ಕೊಲ್ಕತ್ತಾದ ರಿಜಿಸ್ಟರ್ ಆಫೀಸ್ ಒಂದರಲ್ಲಿ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗಳ ನಡುವೆ 10 ವರ್ಷದ ವಯಸ್ಸಿನ ಅಂತರವಿದ್ದು(age difference), ಪ್ರೀತಿಗೆ ಸೌಂದರ್ಯ ವಯಸ್ಸು ಹೀಗೆ ಯಾವುದರ ಬೇದವು ಇರುವುದಿಲ್ಲ ಎಂಬುದನ್ನು ಮತ್ತೆ ಈ ನವದಂಪತಿಗಳು ಸಾಬೀತುಪಡಿಸಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ (social media) ಇವರಿಬ್ಬರ ಫೋಟೋಗಳು ಭಾರಿ ವೈರಲ್ ಆಗುತ್ತಿದ್ದು, ಹಲವರು ಸಕಾರಾತ್ಮಕವಾಗಿ ಕಮೆಂಟ್ ಮಾಡುತ್ತ ನೂರಾರು ಕಾಲ ಹೀಗೆ ಸಂತೋಷದಿಂದಿರಿ ಎಂದು ಹಾರೈಸಿದ್ದಾರೆ.

Leave A Reply

Your email address will not be published.

error: Content is protected !!