Pranitha Subhash: ದೇವಸ್ಥಾನಕ್ಕೆ ತೆರಳಿ ನಾಗರ ಪಂಚಮಿ ಆಚರಿಸಿದ ನಟಿ ಪ್ರಣಿತಾ ಸುಭಾಷ್!

0

Pranitha Subhash ಸ್ನೇಹಿತರೆ ನಿನ್ನೆ ಎಲ್ಲೆಡೆ ನಾಗರ ಪಂಚಮಿ(nagara panchami) ಹಬ್ಬದ ಸಂಭ್ರಮ ಮನೆ ಮಾಡಿತ್ತು, ಸಾಮಾನ್ಯ ಜನದಿಂದ ಹಿಡಿದು ಸ್ಟಾರ್ ಸೆಲೆಬ್ರಿಟಿಗಳವರೆಗೂ ಅದ್ದೂರಿಯಾಗಿ ನಾಗಪ್ಪನಿಗೆ ತನಿ ಎರೆದು ಹಬ್ಬವನ್ನು ಆಚರಿಸಿದರು. ಅದರಂತೆ ನಮ್ಮ ಸ್ಯಾಂಡಲ್ವುಡ್ನ ಸೆಲೆಬ್ರಿಟಿಗಳು ಕೂಡ ವಿಶೇಷವಾದ ದಿನದಂದು ದೇವರಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಅದರ ಕೆಲ ಫೋಟೋಗಳನ್ನು ತಮ್ಮ ತಮ್ಮ ಸಾಮಾಜಿಕ ಜಾಲತಾಣ(Social Media) ದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದರು.

ಹೀಗಿರುವಾಗ ನಟಿ ಪ್ರಣಿತಾ ಸುಭಾಷ್ ಅವರು ಕೂಡ ನಾಗ ದೇವರಿಗೆ ಪೂಜೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಕೆಲ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ instagram ಹಾಗೂ facebook ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು ಸ್ನೇಹಿತರೆ ಯಾವುದೇ ಹಬ್ಬ ಬಂದರು ಅದನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುವಂತಹ ಈ ನಟಿ ತಮ್ಮ ಕುಟುಂಬದೊಂದಿಗೆ ಸೇರಿ ಸಾಂಪ್ರದಾಯಕ ಉಡುಪಿನಲ್ಲಿ ಜಡೆ ಹಾಕಿಕೊಂಡು

ತಲೆಗೆ ಹೂ ಮುಡಿದು ಕೈಗಳಿಗೆ ಬಳೆ ತೊಟ್ಟು ದೇವಸ್ಥಾನಕ್ಕೆ ತೆರಳಿ ನಾಗದೇವತೆಗಳಿಗೆ ಆರತಿ ಬೆಳಗಿ ಪೂಜೆ ನೆರವೇರಿಸಿದ್ದಾರೆ. ತಮ್ಮ ಅತ್ತೆಯೊಂದಿಗೆ ಈ ಒಂದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಪ್ರಣಿತಾ ಸುಭಾಷ್ ಅವರೊಳಗಿರುವಂತಹ ದೈವ ಭಕ್ತಿ ಕಂಡು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಹೌದು ಗೆಳೆಯರೇ ಎಲ್ಲಾ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿಯು ಸಕ್ರಿಯರಾಗಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಣಿತಾ ಸುಭಾಷ್ ಸದ್ಯ ಕುಟುಂಬದ ಜೊತೆಗೆ ತಮ್ಮ ಕರಿಯರ್ ನತ್ತಲೂ ಗಮನಹರಿಸುತ್ತಿದ್ದು,

ಮಗಳ ಲಾಲನೆ ಪಾಲನೆಯಲ್ಲಿ ಎಷ್ಟು ದಿನಗಳ ಕಾಲ ಮನೆಯಲ್ಲಿದ್ದಂತಹ ಪ್ರಣಿತ ಇದೀಗ ಮಲಯಾಳಂನ ಸಿನಿಮಾ ಒಂದರ ಮೂಲಕ ಕಂಬ್ಯಾಕ್(comeback) ಮಾಡ ಹೊರಟಿದ್ದಾರಂತೆ. ಹೌದು ಸ್ನೇಹಿತರೆ ಲಾಕ್ಡೌನ್ ಸಂದರ್ಭದಲ್ಲಿ ಯಾರಿಗೂ ತಿಳಿಸದೆ ಗುಟ್ಟಾಗಿ ನಿತಿನ್ ರಾಜ್(Nithin Raj) ಎಂಬ ಉದ್ಯಮಿಯೊಂದಿಗೆ ಪ್ರಣಿತ ಮದುವೆಯಾಗಿದ್ದರು. ಈ ಒಂದು ಸುದ್ದಿ ಆಗಿನ ಸಮಯದಲ್ಲಿ ಭಾರಿ ಚರ್ಚೆಗೂ ಗ್ರಹಸವಾಗಿತ್ತು. ಅದರೀಗ ಗಂಡನ ಸಪೋರ್ಟ್ನಿಂದಾಗಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಣಿತಾ ಸುಭಾಷ್ (Pranitha Subhash) ನೋಡಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಮಾಲಿವುಡ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಈ ವರ್ಷಾಂತ್ಯದಲ್ಲೇ ಸಿನಿಮಾ ತೆರೆ ಕಾಣುವ ಸೂಚನೆಗಳಿವೆ. ಇದನ್ನೂ ಓದಿ ಮುದ್ದು ಮಕ್ಕಳ ಜೊತೆ ದುಃಖದಲ್ಲೇ ಗಂಡನ ಪುಣ್ಯ ಭೂಮಿಗೆ ಪೂಜೆ ಸಲ್ಲಿಸಿದ ಮಾಲಾಶ್ರೀ!

Leave A Reply

Your email address will not be published.

error: Content is protected !!
Footer code: