ಪ್ರೀತಿಯ ಮಗನೊಂದಿಗೆ ಕಾಲ ಕಳೆಯುತ್ತಿರುವ ಹಿರಿಯ ಪೋಷಕ ನಟ ಅವಿನಾಶ್! ಅಷ್ಟಕ್ಕೂ ಮಗನಿಗೆ ಏನಾಗಿದೆ ಗೊತ್ತಾ

0

Actor Avinash with son: ಸ್ನೇಹಿತರೆ, ಕಲಾವಿದರ ಬದುಕು ನಾವು ಹೊರನೋಟದಿಂದ ನೋಡುವಷ್ಟು ಸುಂದರವಾಗಿಲ್ಲ, ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ, ಒಳ್ಳೊಳ್ಳೆ ಪಾತ್ರಗಳಲ್ಲಿ ಅಭಿನಯಿಸಿ ಹೆಚ್ಚಿನ ಹಣ ಸಂಪಾದನೆ ಮಾಡಿ ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ ಎಂಬ ಭಾವನೆ ಸೆಲೆಬ್ರಿಟಿಗಳನ್ನು (celebrities) ದೂರದಿಂದ ನೋಡುವವರ ತಲೆಯಲ್ಲಿ ಸಹಜವಾಗಿ ಇರುತ್ತದೆ. ಆದರೆ ಅದೆಷ್ಟೋ ಕಲಾವಿದರು ಯಶಸ್ಸನ್ನು ಸಾಧಿಸಿ,

ತಮ್ಮ ವೈಯಕ್ತಿಕ ಜೀವನದಿಂದಾಗಿ ನೋವು ಹತಾಶೆ ಸಂಕಟ ಹಾಗೂ ವೇದನೆಯನ್ನು ಅನುಭವಿಸುತ್ತಿರುವವರ ಸಂಖ್ಯೆ ಅಪಾರ. ಅವರಲ್ಲಿ ಡಾಕ್ಟರ್ ವಿಷ್ಣುವರ್ಧನ್(Vishnu Vardhan) ಅವರ ಕಾಲದಿಂದಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವಂತಹ ಕನ್ನಡ ಚಿತ್ರರಂಗದ ಆದರ್ಶ ದಂಪತಿಗಳೆನಿಸಿಕೊಂಡಿರುವ ಅವಿನಾಶ್(Avinash) ಹಾಗೂ ಮಾಳವಿಕಾ(Malavika) ಕೂಡ ಒಬ್ಬರು.

ಹೌದು ಸ್ನೇಹಿತರೆ, ಹಲವಾರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವಂತಹ ಈ ದಂಪತಿಗಳು ಇಂದಿಗೂ ಯಶಸ್ವಿ ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸುತ್ತ ಬಹು ದೊಡ್ಡ ಮಟ್ಟದ ಬೇಡಿಕೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹೀಗೆ ವೃತ್ತಿ ಬದುಕಿನಲ್ಲಿ ಅಗಾಧವಾದ ಯಶಸ್ಸನ್ನು ಕಂಡಿರುವಂತಹ ಈ ಕಲಾವಿದರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ದುಃಖವನ್ನು ಅನುಭವಿಸುತ್ತಿದ್ದಾರೆ.

ಅವಿನಾಶ್ ಹಾಗೂ ಮಾಳವಿಕಾ(Malavika) ದಂಪತಿಗೆ ಜನಿಸಿದ ಮುದ್ದಿನ ಮಗ ಗಾಲವ್(Galav) ಜನಿಸಿದ ದಿನದಿಂದ ಇಂದಿನವರೆಗೂ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಇಲ್ಲದಿರುವ ಕಾರಣ ತಮ್ಮ ಮಗನನ್ನು ಕಣ್ಣಂಚಿನಲ್ಲಿ ನೋಡಿಕೊಳ್ಳುತ್ತಾ ಆತನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಮೇಲೆ ಪ್ರೀತಿ ಕಡಿಮೆಯಾಗಬಹುದು ಎಂಬ ಭಯದಿಂದ ಮತ್ತೊಂದು

ಮಗು ಮಾಡಿಕೊಳ್ಳುವ ನಿರ್ಧಾರ ಮಾಡಲಿಲ್ಲ ಎಂದು ಕಳೆದ ಕೆಲ ದಿನಗಳ ಹಿಂದಷ್ಟೇ ಟಿವಿ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ಮಾಹಿತಿ ಹಂಚಿಕೊಂಡರು. ಹೀಗೆ ಮಗ Wolf hirschhorn syndrome ಎಂಬ ಬುದ್ಧಿಮಾಂದ್ಯ ಕಾಯಿಲೆಯಿಂದ ಬಳಲುತ್ತಿದ್ದು, ಮಗನ ಆರೈಕೆಯಲ್ಲಿ ಪೋಷಕರು ಬಹಳ ಜಾಗರೂಕತೆಯನ್ನು ವಹಿಸಿ ನೋಡಿಕೊಳ್ಳುತ್ತಿದ್ದಾರೆ. ಹೀಗೆ ಕಳೆದ ಕೆಲವು ದಿನಗಳ ಹಿಂದೆ ಅವಿನಾಶ್(Avinash) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಗನೊಂದಿಗೆ ಅಪರೂಪದ ಸಮಯವನ್ನು ಕಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು.

Leave A Reply

Your email address will not be published.

error: Content is protected !!