ಸತ್ಯ ಧಾರವಾಹಿ ಸೀರುಂಡೆ ರಘುವರ ಫ್ಯಾಮಿಲಿ ಫೋಟೋಸ್!

0

ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತಮ್ಮ ಅದ್ಭುತ ಹಾಸ್ಯ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ಕನ್ನಡದ ನೆಚ್ಚಿನ ಹಾಸ್ಯ ಕಲಾವಿದನೆಂಬ ಪಟ್ಟ ಗಿಟ್ಟಿಸಿಕೊಂಡು ನಮ್ಮೆಲ್ಲರಿಗೂ ನಗುವಿನ ಕಚಗುಳಿ ಇಟ್ಟಿದ್ದ ಸೇರುಂಡೆ ರಘು (Seerunde Raghu) ಸದ್ಯ ಸತ್ಯ ಸೀರಿಯಲ್ ನಲ್ಲಿ ಮೈದುನನೆಂದೆ ಫೇಮಸ್ ಆಗಿದ್ದು ಇವರ ಅದ್ಭುತ ಅಭಿನಯ, ಕಾಮಿಡಿ ಟೈಮಿಂಗ್ (Comedy timing)

ಎಲ್ಲವನ್ನು ಮೆಚ್ಚಿ ಪ್ರೇಕ್ಷಕ ಪ್ರಭುಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಹೌದು ಸ್ನೇಹಿತರೆ ಸೀರುಂಡೆ ರಘು (Seerunde Raghu)ವರ ತಾಯಿಗೆ ಜಗ್ಗೇಶ್ (Jaggesh)ಅವರೆಂದರೆ ಪ್ರೀತಿ ಹೀಗಾಗಿ ತಮ್ಮ ಮಗ ಕೂಡ ಕಾಮಿಡಿ ಆಕ್ಟರ್ ಆಗಬೇಕೆಂಬ ಆಸೆ ಇರುತ್ತದೆ. ತಾಯಿಯ ಆಸೆಯನ್ನು ಈಡೇರಿಸುತ್ತಾ ಶೂಟಿಂಗ್ ಕೆಲಸಗಳಲ್ಲಿ ತೊಡಗಿಕೊಂಡಿರುವಂತಹ ಸೀರುಂಡೆ ರಘು ಅವರು ಬಿಡುವು ಸಿಕ್ಕಾಗಲಿಲ್ಲ ತಮ್ಮದೇ ಆದ ಟಿ ಅಂಗಡಿ ನೋಡಿಕೊಂಡು ಕಾಲ ಕಳೆಯುತ್ತಿರುತ್ತಾರೆ.

ಹೌದು ಸ್ನೇಹಿತರೆ ಮಿಡಲ್ ಕ್ಲಾಸ್ ಕುಟುಂಬದಿಂದ ಬಂದಿರುವಂತಹ ಸೀರುಂಡೆ ರಘುವರ ತಂದೆ ರಿಯಲ್ ಎಸ್ಟೇಟ್ ಬ್ರೋಕರ್, ತಾಯಿ ಮನೆ ಕೆಲಸ ಮಾಡಿ ತಮ್ಮ ಮಗನನ್ನು ಬೆಳೆಸಿದವರು. ಇನ್ನು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಬಹುಕಾಲದ ಹುಡುಗಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೀರುಂಡೆ ರಘುವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು,

ನಾನು ಕಂಡ ಕನಸು ರಾಯರ ಆಶೀರ್ವಾದದಿಂದ ನನಸು ಎಂಬ ಕ್ಯಾಪ್ಶನ್ ಬರೆದು ತಮ್ಮ ಮದುವೆಯ ಕೆಲ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ, ರಘು ಅವರು ರಂಜಿತ ಎಂಬಾಕೆಯನ್ನು ಪ್ರೀತಿಸಿ ಮನೆಯವರೆಲ್ಲದ ಒಪ್ಪಿಗೆ ಪಡೆದು ಮದುವೆಯಾದರು. ತಾಳಿ ಕಟ್ಟುವ ಸಂದರ್ಭದಲ್ಲಿ ಆನಂದದಿಂದ ರಘುವರ ಕಣ್ಣು ಒದ್ದೆ ಕೂಡ ಆಗಿತ್ತು ಹೀಗೆ ಬಹಳ ಸರಳವಾದ ಸಂಭ್ರಮದಲ್ಲಿ ಮನೆ ಮಾಡಿದ್ದ ರಘು ಹಾಗೂ ರಂಜಿತಾ(Raghu & Ranjitha)

ರಾಘು ಮದುವೆಗೆ ಕಾಮಿಡಿ ಕಿಲಾಡಿಗಳು ಸ್ನೇಹಿತರ ಬಳಗ ಮಡಿನೂರು ಮನು, ಮಂಥನ, ನಿರ್ಮಾಪಕ ಸದಾನಂದ ಸ್ವಾಮಿ, ಮಿಂಚು ಸೇರಿದಂತೆ ಮುಂತಾದವರು ಆಗಮಿಸಿ ಶುಭ ಹಾರೈಸಿದರು. ಸದ್ಯ ಈ ಫೋಟೋಗಳೆಲ್ಲವೂ ನೆಟ್ಟಿಗರ(Netizens) ಗಮನ ಸೆಳೆಯುತ್ತಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ನೂರು ವರ್ಷಗಳ ಕಾಲ ಹೀಗೆ ಬಹಳ ಅನ್ಯೂನ್ಯವಾಗಿ ಜೀವನ ಮಾಡಿ ಎಂದು ಶುಭ ಹಾರೈಸುತ್ತಿದ್ದಾರೆ.

Leave A Reply

Your email address will not be published.

error: Content is protected !!