WhatsApp Group Join Now
Telegram Group Join Now

ಪ್ರತಿಯೊಬ್ಬರ ಮನೆಯಲ್ಲಿ ಪ್ರತಿದಿನ ಬಳಸುವ ಹಾಲು ಹಾಗೂ ಬೆಳ್ಳುಳ್ಳಿಯಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಹಾಗಾದರೆ ಹಾಲು ಹಾಗೂ ಬೆಳ್ಳುಳ್ಳಿಯನ್ನು ಯಾವ ರೀತಿ ಉಪಯೋಗಿಸಿದರೆ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಒಂದು ಗ್ಲಾಸ್ ಹಾಲಿಗೆ ಬೆಳ್ಳುಳ್ಳಿ ಬೆರೆಸಿ ಕುಡಿದರೆ ಆಗುವ ಪ್ರಯೋಜನಗಳ ಬಗ್ಗೆ ನಮಗೆ ತಿಳಿದಿಲ್ಲ. ಹಾಲು ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿದೆ. ಮಕ್ಕಳಿಂದ ಹಿಡಿದು ವೃದ್ದರವರೆಗೆ ಎಲ್ಲಾ ವಯೋಮಾನದವರಿಗೆ ಹಾಲು ಬಹಳ ಆರೋಗ್ಯಕರ ಪಾನೀಯವಾಗಿದೆ. ಹಾಲಿನ ಪೌಷ್ಟಿಕಾಂಶದ ಮೌಲ್ಯದ ಬಗ್ಗೆ ಎಲ್ಲರಿಗೂ ತಿಳಿದಿದೆ. ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಇನ್ನೊಂದೆಡೆ ಬೆಳ್ಳುಳ್ಳಿ ಬಗ್ಗೆ ಮಾತನಾಡುವುದಾದರೆ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಅಡುಗೆಗೆ ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಬಳಸುತ್ತೇವೆ.

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ, ತಜ್ಞರ ಪ್ರಕಾರ ಹಸಿ ಬೆಳ್ಳುಳ್ಳಿ ಅಧಿಕ ರಕ್ತದ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಂದರೆ ಬೆಳ್ಳುಳ್ಳಿಯನ್ನು ಹಾಲಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಲ್ಲದೆ ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಹಾಲಿಗೆ ಬೆಳ್ಳುಳ್ಳಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ರಾತ್ರಿ ಮಲಗುವಾಗ ಹಾಲಿನಲ್ಲಿ ಬೆಳ್ಳುಳ್ಳಿ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆಸ್ತಮಾ, ಕೆಮ್ಮು, ನ್ಯುಮೋನಿಯಾ ಸಮಸ್ಯೆ ಇರುವವರು ಪ್ರತಿದಿನ ರಾತ್ರಿ ಮಲಗುವಾಗ ಹಾಲಿಗೆ ಬೆಳ್ಳುಳ್ಳಿ ಬೆರೆಸಿ ಕುಡಿಯಬೇಕು. ಬೆಳ್ಳುಳ್ಳಿ ಬೆರೆಸಿದ ಹಾಲನ್ನು ಕುಡಿದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಅಲ್ಲದೆ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾಮಾಲೆ ರೋಗಕ್ಕೆ ಬೆಳ್ಳುಳ್ಳಿ ಬೆರೆಸಿದ ಹಾಲು ಒಂದು ಒಳ್ಳೆಯ ಮನೆಮದ್ದು ಹೀಗಾಗಿ ಕಾಮಾಲೆ ಇದ್ದವರು ಬೆಳ್ಳುಳ್ಳಿ ಬೆರೆಸಿದ ಹಾಲನ್ನು ಕುಡಿಯಬೇಕು. ರಾತ್ರಿ ಮಲಗುವಾಗ ಬಿಸಿ ಹಾಲಿಗೆ ಬೆಳ್ಳುಳ್ಳಿ ಬೆರೆಸಿ ಕುಡಿದರೆ ಕೀಲು ನೋವು ಕಡಿಮೆ ಆಗುತ್ತದೆ, ಬಿಸಿ ಹಾಲು ನೋವನ್ನು ನಿವಾರಿಸುತ್ತದೆ ಹಾಗೂ ಬೆಳ್ಳುಳ್ಳಿ ಉರಿಯೂತದಿಂದ ರಕ್ಷಿಸುತ್ತದೆ ಒಟ್ಟಾರೆಯಾಗಿ ಹಾಲು ಹಾಗೂ ಬೆಳ್ಳುಳ್ಳಿ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

ರಾತ್ರಿ ನಿದ್ರೆ ಮಾಡಲು ಪ್ರಯತ್ನ ಮಾಡಿದರು ನಿದ್ರೆ ಬಾರದೆ ಇದ್ದರೆ ಹಾಲಿಗೆ ಬೆಳ್ಳುಳ್ಳಿ ಬೆರೆಸಿ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ. ಬೆಳ್ಳುಳ್ಳಿ ಬೆರೆಸಿದ ಹಾಲು ಸ್ತೂಲಕಾಯುತೆಯನ್ನು ಕಡಿಮೆ ಮಾಡುತ್ತದೆ. ಹೃದಯದ ಸಮಸ್ಯೆಯನ್ನು ಬೆಳ್ಳುಳ್ಳಿ ಹಾಲು ನಿವಾರಿಸುತ್ತದೆ ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ಬೆರೆಸಿದ ಹಾಲು ಕುಡಿದರೆ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಸಮತೋಲನ ಸ್ಥಿತಿಯಲ್ಲಿ ಇಡುತ್ತದೆ. ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ಸಮಸ್ಯೆಯನ್ನು ಬೆಳ್ಳುಳ್ಳಿ ಬೆರೆಸಿದ ಹಾಲು ಕುಡಿಯುವುದರಿಂದ ನಿವಾರಣೆ ಮಾಡಿಕೊಳ್ಳಬಹುದು.

ಹಾಲುಣಿಸುವ ತಾಯಂದಿರು ಬೆಳ್ಳುಳ್ಳಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಎದೆ ಹಾಲು ಹೆಚ್ಚಾಗುತ್ತದೆ ಹಾಗೂ ಮಕ್ಕಳ ಆರೋಗ್ಯ ಉತ್ತಮವಾಗುತ್ತದೆ. ಬೆಳ್ಳುಳ್ಳಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಮಲೇರಿಯಾ, ಕ್ಷಯ ಪ್ಲೇಗ್ ನಂತಹ ಭಯಾನಕ ಖಾಯಿಲೆಗಳನ್ನು ಗುಣಪಡಿಸಲು ಸಹಕಾರಿಯಾಗುತ್ತದೆ. ನ್ಯೂಮೋನಿಯಾದಿಂದ ಬಳಲುತ್ತಿರುವವರು ತಪ್ಪದೆ ಬೆಳ್ಳುಳ್ಳಿ ಬೆರೆಸಿದ ಹಾಲನ್ನು ಕುಡಿಯಬೇಕು. ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡಿದರೆ ಬೆಳ್ಳುಳ್ಳಿ ಬೆರೆಸಿದ ಹಾಲನ್ನು ಕುಡಿದರೆ ಅಜೀರ್ಣ ಸಮಸ್ಯೆ ಬರುವುದಿಲ್ಲ.

ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಬೆಳ್ಳುಳ್ಳಿ ಚೆನ್ನಾಗಿ ಬೆಂದಾಗ ಅದಕ್ಕೆ ಖರ್ಜೂರದ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ ಪುಡಿ ಹಾಕಿ ಕುದಿಸಿ ನಂತರ ಬೆಳ್ಳುಳ್ಳಿಯನ್ನು ಮ್ಯಾಶ್ ಮಾಡಿದರೆ ಬೆಳ್ಳುಳ್ಳಿ ಹಾಲು ಕುಡಿಯಲು ಸಿದ್ಧ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: