7 ದಿನ ಬಳಸಿ ಕೈಕಾಲು ನರಗಳ ವಿಕೇನ್ಸ್ ಮುಂತಾದ ಸಮಸ್ಯೆ ಕಡಿಮೆಯಾಗುತ್ತೆ

0

ಖರ್ಜೂರವನ್ನು ಸೇವಿಸಲು ಇಂತಹುದೇ ಸಮಯ ಎಂದೇನಿಲ್ಲ. ಯಾವುದೇ ಸಮಯದಲ್ಲಿ ಯಾವ ವಯಸ್ಸಿನವರೂ ಸಹ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಖರ್ಜೂರದ ತಿನಿಸುಗಳು ಸಿಹಿಯೇ ಆಗಿರಲಿ ಅಥವಾ ಒಣಗಿರುವ ಖರ್ಜೂರವೇ ಆಗಿರಲಿ ಖರ್ಜೂರವಂತೂ ಎಲ್ಲರಿಗೂ ಅಚ್ಚುಮೆಚ್ಚು. ಇದನ್ನು ದಿನನಿತ್ಯ ಒಂದು ಖರ್ಜೂರವನ್ನಾದರೂ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಿದ್ದರೆ ನಾವು ಕರ್ಜುರವನ್ನು ತಿನ್ನುವುದರಿಂದ ಯಾವ ರೀತಿಯಲ್ಲಿ ಕಾಲು ಸೋತು ಬರುವುದು , ನರಗಳ ಬಲಹೀನತೆ ಇವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇವತ್ತಿನ ಕಾಲದಲ್ಲಿ ನಮಗೆ ಎಷ್ಟೇ ಶಕ್ತಿ ಇದ್ದರೂ ಅದು ಸಾಕಾಗುವುದಿಲ್ಲ ಕಡಿಮೆ ಎಂದೇ ಎನಿಸುತ್ತದೆ. ನಾವು ನಮ್ಮಲ್ಲಿ ಉತ್ಸಾಹ ಹುಮ್ಮಸ್ಸು ಇದೆ ಎಂದು ತಿಳಿಯುತ್ತೇವೆ ಆದರೂ ಸಹ ಆಗಾಗ ಸುಸ್ತಾಗುವುದು ಸ್ವಲ್ಪ ದೂರ ನಡೆದರೂ ಸಹ ಕಾಲು ನೋವು ಬರುವುದು , ಕ್ಯಾಲ್ಷಿಯಂ ಹಾಗೂ ರಕ್ತದ ಕೊರತೆ ಇದೆ ಎಂದು ಎನಿಸುವುದು. ಕೈ ಕಾಲುಗಳಲ್ಲಿ ಶಕ್ತಿಯೇ ಇಲ್ಲದಂತೆ ಆಗುವುದು ಯಾವುದೇ ಕೆಲಸ ಮಾಡಲೂ ಆಸಕ್ತಿ ಇಲ್ಲದೆ ಆಲಸ್ಯ ಆಗುವುದು ದೇಹದಲ್ಲಿ ಆಲಸ್ಯ ಹೀಗೇ ಮನಸ್ಸಿಗೆ ಸಮಾಧಾನ ಇರುವುದೇ ಇಲ್ಲ. ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಆದರೂ ಸಹ ಅದು ನಮ್ಮ ದೇಹಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೆ. ಇದಕ್ಕೆಲ್ಲ ಮುಖ್ಯ ಕಾರಣ ಎಂದರೆ ನಮ್ಮ ದೇಹದಲ್ಲಿ ಕಡಿಮೆ ಆಗಿರುವ ರೋಗ ನಿರೋಧಕ ಶಕ್ತಿ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಸಲುವಾಗಿ ನಾವು ಈ ಲೇಖನದಲ್ಲಿ ಖರ್ಜೂರದಿಂದ ತಯಾರಿಸುವ ಒಂದು ಆರೋಗ್ಯಕರವಾದ ಡ್ರಿಂಕ್ ಬಗ್ಗೆ ತಿಳಿದುಕೊಳ್ಳೋಣ.

ಖರ್ಜೂರದಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು ಇದು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಖರ್ಜೂರ ಸುಮಾರು 167 ಮಿಗ್ರಾಂ ಪೊಟ್ಯಾಶಿಯಂ ಹೊಂದಿರುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಪೊಟ್ಯಾಶಿಯಂ ಹೆಚ್ಚು. ಸಾಕಷ್ಟು ಪೊಟ್ಯಾಶಿಯಮ್ ತೆಗೆದುಕೊಳ್ಳದಿದ್ದರೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಖರ್ಜೂರದಲ್ಲಿರುವ ಮೆಗ್ನೀಶಿಯಮ್ ನಮ್ಮ ಹೃದಯ ಮತ್ತು ರಕ್ತನಾಳಗಳಲ್ಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರ ಪರಿಣಾಮವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಖರ್ಜೂರದಲ್ಲಿ ಐಸೊಫ್ಲೇವನ್ ಇರುತ್ತದೆ. ಇದು ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಯುಕೆ ಅಧ್ಯಯನದ ಪ್ರಕಾರ ಖರ್ಜೂರ ನಿಯಮಿತವಾಗಿ ಸೇವಿಸುವುದರಿಂದ ಪರಿಧಮನಿಯ ಹೃದಯ ಕಾಯಿಲೆ ಬರದಂತೆ ತಡೆಗಟ್ಟಿದೆ. ಫೈಬರ್ ತೂಕ ನಿರ್ವಹಣೆಗೆ ಸಹ ಸಹಾಯ ಮಾಡುತ್ತದೆ.

ಇಸ್ರೇಲಿ ಅಧ್ಯಯನದ ಪ್ರಕಾರ ಆರೋಗ್ಯಕರ ವ್ಯಕ್ತಿಗಳು ಸಹ ಖರ್ಜೂರ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಮತ್ತು ಆಕ್ಸಿಡೇಟಿವ್ ಒತ್ತಡದ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುತ್ತದೆ. ಖರ್ಜೂರದಲ್ಲಿ ಯಾವುದೇ ಕೊಲೆಸ್ಟ್ರಾಲ್ ಇರುವುದಿಲ್ಲ. ಅವು ಕಬ್ಬಿಣದಿಂದ ಕೂಡಿದ್ದು, ಬಾಳೆಹಣ್ಣಿಗಿಂತ ಹೆಚ್ಚು ಫೈಬರ್ ಹೊಂದಿರುತ್ತವೆ. ಖರ್ಜೂರದಲ್ಲಿ ತಾಮ್ರ, ಮೆಗ್ನೀಶಿಯಂ, ಸೆಲೆನಿಯಮ್ , ಮ್ಯಾಂಗನೀಸ್‌ ಸಮೃದ್ಧವಾಗಿದೆ. ಇವೆಲ್ಲವೂ ನಮ್ಮ ಎಲುಬುಗಳನ್ನು ಆರೋಗ್ಯವಾಗಿಡಲು ಮತ್ತು ಆಸ್ಟಿಯೊಪೊರೋಸಿಸ್ ನಂತಹ ಮೂಳೆ ಸಂಬಂಧಿತ ಕಾಯಿಲೆ ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಖರ್ಜೂರ ಮೂಳೆಗಳಿಗೆ ಆರೋಗ್ಯಕರವಾದ ಬೋರಾನ್ ಸಹ ಒಳಗೊಂಡಿದೆ. ಹಾಗಿದ್ದರೆ ಈ ಖರ್ಜೂರದ ಡ್ರಿಂಕ್ ಮಾಡುವುದು ಹೇಗೆ ಎಂದು ನೋಡೋಣ.

ಇದನ್ನು ಮಾಡಲು ಬೇಕಾಗಿರುವುದು ಮುಖ್ಯವಾಗಿ ಖರ್ಜೂರ , ಬಾದಾಮಿ
ಇನ್ನು ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ , ರಾತ್ರಿ ಐದು ಖರ್ಜೂರವನ್ನು ಬೀಜ ತೆಗೆದು ನೆನೆಸಿ ಇಡಬೇಕು ಹಾಗೂ ಹತ್ತು ಬಾದಾಮಿಯನ್ನು ಸಹ ನೆನೆಸಿ ಇಡಬೇಕು. ಬೆಳಿಗ್ಗೆ ಇದನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಬಾದಾಮಿ ಸಿಪ್ಪೆ ತೆಗೆದು ಹಾಕಿಕೊಳ್ಳಬೇಕು ಹಾಗೂ ಇದಕ್ಕೆ ಒಂದೆರಡು ಚಿಟಕಿ ಅರಿಶಿನದ ಪುಡಿ , ಒಂದು ಚಮಚ ಆಕಳ ತುಪ್ಪ , ಎರಡು ಚಿಟಕಿ ಏಲಕ್ಕಿ ಪುಡಿ ಹಾಗೂ ಸ್ವಲ್ಪ ಹಾಲನ್ನು ಹಾಕಿ ಪೇಸ್ಟ್ ಮಾಡಿಕೊಂಡು ನಂತರ ಎರಡು ಗ್ಲಾಸ್ ಹಾಲನ್ನು ಸೇರಿಸಿಕೊಳ್ಳಬೇಕು. ಕುಡಿಯುವಾಗ ಬೇಕಿದ್ದರೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಳ್ಳಬಹುದು ಸಕ್ಕರೆ ಬಳಕೆ ಮಾಡಲೇ ಬಾರದು. ಹಾಗೆಯೇ ಇದನ್ನು ದಿನದ ಯಾವ ಸಮಯದಲ್ಲಿ ಬೇಕಿದ್ದರೂ ಕುಡಿಯಬಹುದು. ಇದನ್ನು ಏಳು ದಿನಗಳ ಕಾಲ ಮಾಡಿ ಕುಡಿದರೆ ನೀವೇ ಪರಿಣಾಮವನ್ನು ಕಾಣಬಹುದು.

ಈ ಖರ್ಜೂರದ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಪ್ರತೀ ದಿನ ಕಾಡುವ ಕಾಲು ನೋವು , ಸುಸ್ತು ಮಾಯವಾಗುತ್ತದೆ. ದೇಹಕ್ಕೆ ಬೇಕಾದ ಕಬ್ಬಿಣದ ಅಂಶ , ರಕ್ತ ಇವೆಲ್ಲವೂ ಸಿಗುತ್ತದೆ. ನರಗಳ ದೌರ್ಬಲ್ಯ ಇರುವವರಿಗೆ ಕೂಡಾ ಇದು ಉತ್ತಮ ಔಷಧ ಎಂದೇ ಹೇಳಬಹುದು. ಮೂಳೆಗಳ ನೋವು ಕೂಡಾ ಕಡಿಮೆ ಆಗಿ ಬಲ ಬರುತ್ತದೆ.

Leave A Reply

Your email address will not be published.

error: Content is protected !!