ಎರಡೇ ಎರಡು ಲವಂಗ ಜಗಿದು ಬಿಸಿನೀರು ಕುಡಿಯುವುದರಿಂದ ನಿಮ್ಮ ಅರೋಗ್ಯ ಹೇಗಿರತ್ತೆ ನೋಡಿ

0

ಲವಂಗ (clove) ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು. ಅನೇಕ ವಿಧದಲ್ಲಿ ಉಪಯುಕ್ತ. ಮೂಲತ: ಇಂಡೋನೇಷ್ಯಾದ್ದಾಗಿದ್ದು ಅಲ್ಲಿ ಈಗಲೂ ಕಾಡುಮರವಾಗಿ ಕಂಡುಬರುತ್ತದೆ. ಹಲ್ಲು ನೋವಿಗೆ ಉತ್ತಮ ಔಷಧಿ. ಕೆಮ್ಮಿಗು ತೆಗೆದುಕೊಳ್ಳಬಹುದು. ಸಾಂಬಾರ್ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಲವಂಗಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಕಾರಣ ಇದನ್ನು ಆಯುರ್ವೇದ ಔಷಧ, ಟೂಥ್ ಪೌಡರ್, ಪೇಸ್ಟ್ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಲವಂಗವನ್ನು ಕರ್ನಾಟಕದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತಾರೆ. ಲವಂಗ ಸಾಮಾನ್ಯವಾಗಿ ಪ್ರತಿಯೊಬ್ಬ ಭಾರತೀಯರು ಬಳಸುವ ಮಸಾಲೆ. ಇದು ಕೇವಲ ಖಾದ್ಯದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದರ ಪೌಷ್ಟಿಕಾಂಶ ಮೌಲ್ಯದಿಂದಲೂ ಜನಪ್ರಿಯತೆ ಪಡೆದಿದೆ. ವೈಜ್ಞಾನಿಕವಾಗಿ ‘ಸಿಜೈಜಿಯಂ ಅಮಾಟಿಕಮ್’ ಎಂದು ಕರೆಯಲ್ಪಡುವ ಲವಂಗ, ತನ್ನ ಅದ್ಭುತ ಔಷಧೀಯ ಗುಣಗಳಿಗಾಗಿ ಆಯುರ್ವೇದದಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದು, ಇದನ್ನು ತಲೆತಲಾಂತರಗಳಿಂದ ಬಳಸಲಾಗುತ್ತಿದೆ. ರುಚಿಕರವಾದ ಲವಂಗವನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆಯಾದರೂ, ಹೆಚ್ಚಾಗಿ ಮಸಾಲಾ ಆಹಾರದಲ್ಲಿ ಬಳಸಲಾಗುತ್ತದೆ. ​ಇದರ ಪ್ರಯೋಜನ ತಿಳಿದರೆ ಆಶ್ಚರ್ಯವಾಗುತ್ತದೆ ಹಾಗಿದ್ದರೆ ಪ್ರತೀ ದಿನ ಮಲಗುವ ಮುನ್ನ ಎರಡು ಲವಂಗ ಅಗೆದು ಬಿಸಿ ನೀರು ಕುಡಿದರೆ ಏನೆಲ್ಲಾ ಉಪಯೋಗವಿದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಲವಂಗವನ್ನು ನಿಯಮಿತವಾಗಿ ಬಳಸುವುದರಿಂದ ಹೊಟ್ಟೆ ಸಂಬಂಧಿತ ಕಾಯಿಲೆ ಮತ್ತು ಹಲ್ಲು ಮತ್ತು ಗಂಟಲಿನ ನೋವಿನಿಂದ ಪರಿಹಾರ ಸಿಗುತ್ತದೆ. ಹೌದು, ಲವಂಗದಲ್ಲಿ ಇರುವ ಯುಜೆನಾಲ್, ಒತ್ತಡ ಮತ್ತು ಸಾಮಾನ್ಯ ಹೊಟ್ಟೆಯ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಕ್ಕರೆ ರೋಗಿಗಳಿಗೂ ಇದು ತುಂಬಾ ಪ್ರಯೋಜನಕಾರಿಯಾಗಿದ್ದು, ಲವಂಗವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುವುದು. ಲವಂಗದಲ್ಲಿ ಮೆಗ್ನೀಷಿಯಮ್, ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಷಿಯಮ್, ಸೋಡಿಯಂ, ಸತು ಇತ್ಯಾದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿವೆ. ಲವಂಗ ಮಾತ್ರವಲ್ಲ, ಅದರ ಎಣ್ಣೆಯೂ ಅನೇಕ ರೋಗಗಳನ್ನು ತಡೆಯುತ್ತದೆ. ಲವಂಗ ಮತ್ತು ಲವಂಗ ಎಣ್ಣೆ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಲವಂಗವು ವಿಟಮಿನ್ ಇ, ವಿಟಮಿನ್ ಸಿ, ಫೋಲೇಟ್, ರಿಬೋಫ್ಲಾವಿನ್, ವಿಟಮಿನ್ ಎ, ಥಯಾಮಿನ್, ವಿಟಮಿನ್ ಡಿ, ಒಮೆಗಾ 3 ಕೊಬ್ಬಿನಾಮ್ಲಗಳ ಜೊತೆಗೆ ಇತರ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಎರಡು ಲವಂಗ ಅಗೆದು ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯುವುದು ಈ ಕೆಳಗಿನ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಏನಾದರೂ ನಿಮಗೆ ಹೊಟ್ಟೆಯ ಸಮಸ್ಯೆಗಳಿದ್ದರೆ ಅಡುಗೆ ಮನೆಯಲ್ಲಿರುವ ಈ ಲವಂಗವನ್ನು ರಾತ್ರಿ ಸೇವಿಸುವುದರಿಂದ ಮಲಬದ್ಧತೆ, ಅತಿಸಾರ, ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೇ ಇದು ನಿಮ್ಮ ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಕೆಲವರಿಗೆ ಪ್ರಯಾಣ ಮಾಡುವಾಗ ವಾಂತಿ ಮಾಡುವ ಸಮಸ್ಯೆ. ಇಲ್ಲದಿದ್ದರೆ ತಿಂದ ಆಹಾರ ಜೀರ್ಣವಾಗದೇ ಪಿತ್ತದಿಂದಾಗಿ ವಾಂತಿ ಬರುವಂತಾಗುತ್ತದೆ. ಇದಕ್ಕೆ ಲವಂಗವನ್ನು ಸೇವಿಸುವುದು ಉತ್ತಮ ಪರಿಹಾರ.

ಲವಂಗವು ಆಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿದೆ. ಆದ್ದರಿಂದ ಇದು ದೇಹದ ಅಂಗಗಳನ್ನು ವಿಶೇಷವಾಗಿ ಯಕೃತ್ತನ್ನು ರಕ್ಷಿಸಿ, ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುವ ಸೂಕ್ತವಾದ ಔಷಧವಾಗಿದೆ. ಇದು ಮೊಡವೆಗಳನ್ನು ತಡೆಯಲು ಸಹಾಯ ಮಾಡುವ ಒಂದು ರೀತಿಯ ಸ್ಯಾಲಿಸಿಲೇಟ್ ಅನ್ನು ಹಹೊಂದಿದೆ ಲವಂಗ ಬಾಯಿಯ ಆರೋಗ್ಯಕ್ಕೆ ಸಹ ಒಳ್ಳೆಯದು. ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಸೇವಿಸುವುದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ. ಹಲ್ಲು ನೋವಿನಿಂದ ಪರಿಹಾರ ಪಡೆಯಲು ನಿಮಗೆ ಎಲ್ಲಿ ನೋವು ಬರುತ್ತದೆಯೋ ಆ ಜಾಗದಲ್ಲಿ ನೀವು ಲವಂಗ ಇರಿಸಿಕೊಳ್ಳಬಹುದು. ಬಾಯಿಯಲ್ಲಿ ಇಡುವುದರಿಂದ ದುರ್ವಾಸನೆ ಸಹ ಹೋಗುತ್ತದೆ. ಇದರಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಗಳಿಂದಾಗಿ ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹ ಸಹಾಯ ಮಮಾಡುತ್ತದೆ. ಮಲಗುವ ಮುನ್ನ 1-2 ಲವಂಗವನ್ನು ಸೇವಿಸಿದರೆ ಕೈ ಕಾಲುಗಳನ್ನು ನಡುಗಿಸುವ ಸಮಸ್ಯೆಯಿಂದ ಬಳಲುತ್ತಿರುವ ಜನರು ಪರಿಹಾರ ಪಡೆಯಬಹುದು.

ಲವಂಗವು ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಆಗಾಗ ಶೀತ ಅಥವಾ ಜ್ವರದಿಂದ ಬಳಲುತ್ತಿರುವ ಜನರ ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು. ಆದರೆ ಲವಂಗವು ಅನೇಕ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಲವಂಗವನ್ನು ಬಳಸುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೋಂಕು ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಸಹ ಇದು ಸಹಾಯ ಮಾಡುತ್ತದೆ. ಕೆಮ್ಮು, ಶೀತ, ವೈರಲ್ ಸೋಂಕು, ಬ್ರಾಂಕೈಟಿಸ್, ಸೈನಸ್ ಮತ್ತು ಅಸ್ತಮಾವನ್ನು ತೊಡೆದುಹಾಕಲು ಲವಂಗ ಸಹಾಯ ಮಾಡುತ್ತದೆ. ಹಾಗೆಯೇ ಲವಂಗವನ್ನು ನಿಯಮಿತವಾಗಿ ಸೇವಿಸುವುದರಿಂದ ಅಶಕ್ತತೆಯನ್ನು ಸಹ ನಿವಾರಿಸಿಕೊಳ್ಳಬಹದೂ.

Leave A Reply

Your email address will not be published.

error: Content is protected !!