ಸಿಂಹ ರಾಶಿಯವರಿಗೆ ಈ ತಿಂಗಳ ಕೊನೆಯ ದಿನಗಳು ಹೇಗಿರಲಿದೆ ನೋಡಿ

0

ನಾವಿಂದು ನಿಮಗೆ ಸಿಂಹ ರಾಶಿಯವರಿಗೆ ಫೆಬ್ರುವರಿ ಕೊನೆಯ ಸಪ್ತಾಹ ಅಂದರೆ ಇಪ್ಪತ್ಮೂರನೇ ತಾರೀಖಿನಿಂದ ಇಪ್ಪತ್ತೆಂಟನೆ ತಾರೀಖಿನವರೆಗೆ ಯಾವ ರೀತಿಯಾದಂತಹ ಫಲ ಲಭ್ಯವಿದೆ ಅವರು ಯಾವ ವಿಷಯದ ಕುರಿತು ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಫೆಬ್ರುವರಿ ಕೊನೆಯ ಸಪ್ತಾಹ ಒಂದಿಷ್ಟು ಏರಿಳಿತಗಳಿಂದ ಕೂಡಿದ್ದು ಒಂದು ಕಡೆ ಉತ್ತಮ ಲಾಭದ ಪ್ರಾಪ್ತಿಯಾದರೆ ಇನ್ನೊಂದು ಕಡೆ ನೀವು ಒಂದಿಷ್ಟು ಎಚ್ಚರಿಕೆಯನ್ನು ವಹಿಸಬೇಕು. ಫೆಬ್ರುವರಿ ತಿಂಗಳ 24 ಮತ್ತು 25 ನೇ ತಾರೀಖಿನ ಹನ್ನೆರಡು ಗಂಟೆ ಏಳು ನಿಮಿಷ ದವರೆಗಿನ ಸಮಯದಲ್ಲಿ ಪರಿಸ್ಥಿತಿ ಬದಲಾಗಲಿದ್ದು ನೀವು ಇಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು. ಈ ಸಮಯದಲ್ಲಿ ಚಂದ್ರದೇವನು ಕೇತುಗ್ರಹದೊಂದಿಗೆ ಯುತಿ ಹೊಂದಿರಲಿದ್ದು ಇಲ್ಲಿ ಚಂದ್ರ ಕೇತುವಿನ ಗ್ರಹಣ ದೋಷದ ನಿರ್ಮಾಣವಾಗಲಿದೆ ಇಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಪರಿಶ್ರಮ ಮಾಡಬೇಕಾಗುವ ಸನ್ನಿವೇಶ ಬರಲಿದೆ.

ಯಶಸ್ಸು ಬೇಕು ಎನ್ನುವುದಾದರೆ ಭಾಗ್ಯದ ಭರವಸೆಯ ಮೇಲೆ ನಿರ್ಭಲವಾಗಿ ಉಳಿಯದೆ ನಿಮ್ಮ ಕರ್ಮದ ಮೇಲೆ ನಂಬಿಕೆ ಇಟ್ಟು ನಡೆಯಬೇಕು. ಈ ವಿಶೇಷ ಸಮಯದಲ್ಲಿ ನಿಮಗೆ ಅನಾವಶ್ಯಕ ಖರ್ಚುಗಳು ಕೂಡ ವೃದ್ಧಿ ಆಗಬಹುದು ಇಲ್ಲಿನ ಹಣಕಾಸಿನ ಲೆಕ್ಕಚಾರದಲ್ಲಿ ಏರುಪೇರು ಉಂಟಾಗಲಿದೆ. ಹಾಗಾಗಿ ನಿಮಗೆ ಮಾನಸಿಕ ಚಿಂತೆ ಒತ್ತಡವುಂಟಾಗಬಹುದು ಜೊತೆಗೆ ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಕಲಹದ ಪರಿಸ್ಥಿತಿ ನಿರ್ಮಾಣವಾಗುವ ಸಂಭವವಿದ್ದು ಈ ಸಮಯದಲ್ಲಿ ನೀವು ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಜೊತೆಗೆ ನಿಮ್ಮ ಕೋಪವನ್ನು ಸಂಪೂರ್ಣವಾಗಿ ತ್ಯಾಗ ಮಾಡಬೇಕು ನಿಮ್ಮವರು ಕೂಡ ನಿಮ್ಮ ಜೊತೆ ಮುನಿಸಿಕೊಳ್ಳುವ ಸಾಧ್ಯತೆ ಇದ್ದು ಸಂಬಂಧದಲ್ಲಿ ವಿಷಮತೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಈ ಸಮಯವನ್ನು ಬಹಳ ಎಚ್ಚರಿಕೆಯಿಂದ ಕಳೆಯಬೇಕು.

ಫೆಬ್ರವರಿ ತಿಂಗಳಿನ 25ನೇ ತಾರೀಖಿನ ಮಧ್ಯಾಹ್ನದ ಹನ್ನೆರಡು ಗಂಟೆ ಏಳು ನಿಮಿಷ ನಂತರದ ಸಮಯ ಹಾಗೂ 26 ಮತ್ತು 27 ನೇ ತಾರೀಖಿನ ಮಧ್ಯಾಹ್ನದ ಎರಡು ಗಂಟೆ ಇಪ್ಪತ್ತೇಳು ನಿಮಿಷ ದವರೆಗಿನ ಸಮಯದ ಕುರಿತು ನೋಡುವುದಾದರೆ ಈ ದಿನಗಳು ನಿಮ್ಮ ಪಾಲಿಗೆ ಭಾಗ್ಯಶಾಲಿ ದಿನಗಳಾಗಿ ಸಾಬೀತಾಗಲಿದೆ. ಮಹಾಲಕ್ಷ್ಮಿ ಮಾತೆಯ ಕೃಪೆ ನಿಮ್ಮ ಮೇಲೆ ಬೀಳಲಿದೆ ಇಲ್ಲಿ ನಿಮಗೆ ಗುಪ್ತಧನದ ಪ್ರಾಪ್ತಿ ಉಂಟಾಗಲಿದೆ ಇಲ್ಲಿ ನಿಮ್ಮಿಂದ ಕಳೆದುಕೊಂಡಂತಹ ಹಣ ಮರಳಿ ನಿಮ್ಮ ಕೈಗೆ ಸೇರಬಹುದಾಗಿದೆ.

ಇಲ್ಲಿ ಯಾವುದಾದರೂ ಹಳೆಯ ವಿವಾದ ಅಂತ್ಯವಾಗುವುದರೊಂದಿಗೆ ಆಸ್ತಿಯೊಂದು ನಿಮ್ಮ ಹೆಸರಿಗೆ ವರ್ಗವಾಗಬಹುದಾದ ಪ್ರಬಲ ಯೋಗವಿರಲಿದೆ. ಇಲ್ಲಿ ಎಲ್ಲಿ ನಿಮ್ಮ ಕಳೆದುಹೋದ ಪ್ರೇಮದ ಪ್ರಾಪ್ತಿ ಕೂಡ ಉಂಟಾಗಲಿದೆ ಜೊತೆಗೆ ಸಂಬಂಧದಲ್ಲಿ ಪ್ರೇಮ ಮತ್ತು ವಿಶ್ವಾಸದ ವೃದ್ಧಿ ಉಂಟಾಗಲಿದೆ ವೈವಾಹಿಕ ಜೀವನದಲ್ಲಿ ಕೂಡ ಉತ್ತಮ ಫಲಗಳು ಲಭಿಸಲಿದ್ದು ಈ ವಿಶೇಷ ಸಮಯದಲ್ಲಿ ನೀವು ವರ ಅಥವಾ ಕನ್ಯೆಯನ್ನು ತೋರಿಸುವಂತಹ ಶುಭ ಕೆಲಸವನ್ನು ಮಾಡಬಹುದಾಗಿದೆ.

ಈ ದಿನಗಳಲ್ಲಿ ನೀವು ನಿಮ್ಮ ಮಿತ್ರರನ್ನು ಭೇಟಿಯಾಗಲಿದ್ದು ಅವರೊಂದಿಗೆ ನಿಮ್ಮ ಉತ್ತಮ ಸಮಯವನ್ನ ಕಳೆಯಲಿದ್ದೀರಿ. ನಿಮ್ಮ ಭೌತಿಕ ವೃದ್ಧಿ ಆಗುವುದರೊಂದಿಗೆ ನಿಮ್ಮ ಯಾತ್ರೆ ಗಳು ನಿರ್ವಿಘ್ನವಾಗಿ ಮುಂದುವರೆಯಲಿದೆ. ನಿಮ್ಮ ವ್ಯಾಪಾರದಲ್ಲಿಯೂ ಲಾಭದ ಸುರಿಮಳೆ ಉಂಟಾಗಲಿದ್ದು ದೈನಂದಿನ ಆದಾಯದಲ್ಲಿಯೂ ಭರಪೂರ ವೃದ್ಧಿ ಕಂಡುಬರಲಿದೆ. ಆಮದು-ರಫ್ತು ಕ್ಷೇತ್ರದಲ್ಲಿ ಲಾಭ ಕಂಡುಬರಲಿದೆ ಈ ದಿನಗಳಲ್ಲಿ ನೀವು ಶಾರೀರಿಕವಾಗಿ ಸದೃಢವಾಗಿರಲಿದ್ದು ಯಾವ ಆರೋಗ್ಯದ ಸಮಸ್ಯೆಗಳು ಕೂಡ ನಿಮ್ಮನ್ನು ಭಾವಿಸುವುದಿಲ್ಲ. ಪರಿವಾರದ ದೃಷ್ಟಿಕೋನದಿಂದಲೂ ಕೂಡ ಈ ಸಮಯ ಉತ್ತಮವಾಗಿರಲಿದ್ದು ಪರಿವಾರದಲ್ಲಿ ಸಂತಸದ ಕ್ಷಣಗಳು ನಿಮ್ಮದಾಗಲಿದೆ. ಇದರ ನಂತರ ಫೆಬ್ರವರಿ 27ರ ಮಧ್ಯಾಹ್ನದ ಎರಡು ಗಂಟೆ ಇಪ್ಪತ್ತೇಳು ನಿಮಿಷ ನಂತರದ ಸಮಯ ಹಾಗೂ 28 ನೇ ತಾರೀಖಿನ ದಿನದ ಕುರಿತು ನೋಡುವುದಾದರೆ ಈ ದಿನಗಳಲ್ಲಿ ನಿಮಗೆ ವಿದೇಶಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಸಫಲತೆ ಲಭಿಸಲಿದೆ.

ಜೊತೆಗೆ ಈ ದಿನಗಳಲ್ಲಿ ನಿಮಗೆ ಯಾತ್ರೆಯ ಯೋಗ ನಿರ್ಮಾಣವಾಗಲಿದೆ. ಈ ದಿನಗಳಲ್ಲಿ ಯಾತ್ರೆಯನ್ನು ಅತ್ಯಂತ ಜಾಗರೂಕತೆಯಿಂದ ಕೈಗೊಳ್ಳಬೇಕು ಇಲ್ಲಿ ಮಕರ ರಾಶಿಯಲ್ಲಿ ಗೋಚರಿಸಲಿರುವ ಚಂದ್ರದೇವನು ಈಗಾಗಲೇ ಮಕರ ರಾಶಿಯಲ್ಲಿ ಸ್ಥಿತವಾಗಿರುವ ಶನಿದೇವ ನೊಂದಿಗೆ ಯುತಿ ಹೊಂದಲಿದ್ದಾನೆ ಹಾಗಾಗಿ ಇಲ್ಲಿ ಚಂದ್ರ ಶನಿಯ ವಿಷ ದೋಷದ ಉತ್ಪತ್ತಿ ಆಗಲಿದೆ. ಹಾಗಾಗಿ ಇಲ್ಲಿ ಒಂದಿಷ್ಟು ವಿರೋಧಾಭಾಸದ ಸ್ಥಿತಿಗಳು ಎದುರಾಗಲಿದೆ

ಈ ವಿಶೇಷ ಸಮಯದಲ್ಲಿ ನೀವು ನಿಮ್ಮ ಬೆಲೆಬಾಳುವ ವಸ್ತುಗಳ ಕುರಿತಾಗಿ ಒಂದಿಷ್ಟು ಜಾಗರೂಕತೆಯನ್ನು ವಹಿಸಬೇಕು. ನಿಮ್ಮಲ್ಲಿ ಇರುವಂತಹ ಕಿರಿಕಿರಿಯ ಸ್ವಭಾವವು ಈ ಸಮಯದಲ್ಲಿ ನಿಮಗೆ ಸಮಸ್ಯೆಗಳನ್ನು ತಂದೊಡ್ಡಬಹುದಾಗಿದೆ. ಈ ದಿನಗಳಲ್ಲಿ ನೀವು ವಾದ-ವಿವಾದ ಗಳಿಂದಲೂ ದೂರ ಇರಬೇಕು. ಈ ಸಮಯದಲ್ಲಿ ನೀವು ಹೂಡಿಕೆ ಯಿಂದಲೂ ಕೂಡ ದೂರ ಇರಬೇಕು.

ಈ ದಿನಗಳಲ್ಲಿ ನೀವು ಭಾವನಾತ್ಮಕವಾಗಿ ದುರ್ಬಲರಾಗಿರಲಿದ್ದು ನೀವು ಇಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಿರುವುದು ಒಳ್ಳೆಯದು. ಈ ವಿಶೇಷ ಸಮಯದಲ್ಲಿ ವಿದ್ಯಾರ್ಥಿಗಳಿಗೂ ಕೂಡ ಏಕಾಗ್ರತೆಯನ್ನು ಹೊಂದುವುದಕ್ಕೆ ಸಾಧ್ಯವಾಗುವುದಿಲ್ಲ. ಇಲ್ಲಿ ನೌಕರಿ ವಂಚಿತ ಜಾತಕದವರು ಪ್ರಯತ್ನದ ಮೂಲಕ ತಮ್ಮ ಇಚ್ಛೆಯ ನೌಕರಿಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿ ಜಾತಕದವರಿಗೆ ವಿಶೇಷ ಫಲಗಳು ಲಭಿಸಬಹುದಾಗಿದೆ. ಇನ್ನು ಒಳ್ಳೆಯ ಫಲವನ್ನು ಪಡೆಯುವುದಕ್ಕೆ ನೀವು ಈ ಸಪ್ತಾಹದಲ್ಲಿ ಇಪ್ಪತ್ನಾಲ್ಕು ಇಪ್ಪತ್ತೈದು ಮತ್ತು ಇಪ್ಪತ್ತಾರನೇ ತಾರೀಖಿನ ಬೆಳಿಗ್ಗೆ ಎದ್ದು ಸೂರ್ಯದೇವನಿಗೆ ನಮಿಸುವುದು ಹಾಗೂ ಬೆಲ್ಲವನ್ನು ತಿನ್ನುವುದರ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಬೇಕು.

ಇಪ್ಪತ್ತೇಳು ಇಪ್ಪತ್ತೆಂಟನೇ ತಾರೀಖಿನಂದು ಸಂಜೆಯ ನಂತರದಲ್ಲಿ ನೀವು ಹಾಲನ್ನು ಸೇವಿಸಬಾರದು ಜೊತೆಗೆ ಬಡವರಿಗೆ ಹಸಿರು ತರಕಾರಿಗಳನ್ನು ದಾನವಾಗಿ ನೀಡುವುದು ಮತ್ತು ಗಣಪತಿಯ ಆರಾಧನೆಯನ್ನು ಮಾಡುವುದರಿಂದ ಶುಭಫಲಗಳು ದೊರೆಯುತ್ತವೆ. ಇದಿಷ್ಟು ಫೆಬ್ರವರಿ ತಿಂಗಳ ಕೊನೆಯ ಸಪ್ತಾಹದಲ್ಲಿ ಸಿಂಹ ರಾಶಿಯವರಿಗೆ ಯಾವ ರೀತಿಯ ಫಲಗಳು ಉಂಟಾಗಲಿದೆ ಎಂಬುದರ ಕುರಿತಾದ ಮಾಹಿತಿಯಾಗಿದೆ.

Leave A Reply

Your email address will not be published.

error: Content is protected !!
Footer code: