ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ನೇಮಕಾತಿ ಕುರಿತು ಮಾಹಿತಿ

0

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು ಯಾವೆಲ್ಲಾ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಎಷ್ಟು ಹುದ್ದೆಗಳು ಖಾಲಿ ಇದೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಯಾವ ರೀತಿಯಾಗಿರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಆ ಕುರಿತಾದಂತಹ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎನ್ನುವುದನ್ನು ನೋಡುವುದಾದರೆ ಫಾರೆಸ್ಟ್ ಗಾರ್ಡ್ ಮತ್ತು ಡಿ ಎಫ್ ಆರ್ ಒ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಒಟ್ಟು ಮೂರು ಸಾವಿರದ ಎಂಟು ನೂರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದ ಅಂತಹ ಅಭ್ಯರ್ಥಿಗಳಿಗೆ ವೇತನ ಯಾವ ರೀತಿಯಾಗಿ ಇರುತ್ತದೆ ಎಂದರೆ ಫಾರೆಸ್ಟ್ ಗಾರ್ಡ್ ಮತ್ತು ಡಿ ಎಫ್ ಆರ್ ಒ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಇಪ್ಪತ್ತೊಂದು ಸಾವಿರದ ನಾಲ್ಕುನೂರು ರೂಪಾಯಿಂದ ನಲವತ್ತೆರಡು ಸಾವಿರ ರೂಪಾಯಿವರೆಗೆ ವೇತನ ಇರುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಿದ್ಯಾರ್ಹತೆಯನ್ನು ಪಡೆದಿರಬೇಕು ಎಂಬುದನ್ನು ನೋಡುವುದಾದರೆ ಫಾರೆಸ್ಟ್ ಗಾರ್ಡ್ ಹುದ್ದೆಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸ್ ಆಗಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಡಿ ಎಫ್ ಆರ್ ಒ ಹುದ್ದೆಗೆ ಪದವಿ ಪಡೆದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ನೋಡುವುದಾದರೆ ಹದಿನೆಂಟು ವರ್ಷದಿಂದ ಇಪ್ಪತ್ತೈದು ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಜೊತೆಗೆ ವಯೋಮಿತಿ ಸಡಿಲಿಕೆ ಇದ್ದು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಎಂದರೆ ಮೊದಲಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ನಂತರ ದೈಹಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ ನಂತರ ವೈದ್ಯಕೀಯ ತಪಾಸಣೆಯನ್ನು ಮಾಡಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ.

ಪರೀಕ್ಷೆಯಲ್ಲಿ ಗಣಿತ ಶಾಸ್ತ್ರಕ್ಕೆ ಸಂಬಂಧಿಸಿದಂತೆ ನಲವತ್ತು ಪ್ರಶ್ನೆಗಳಿಗೆ ನಲವತ್ತು ಅಂಕಗಳು ಇರುತ್ತವೆ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಅರವತ್ತು ಪ್ರಶ್ನೆಗಳಿಗೆ ಅರವತ್ತು ಅಂಕಗಳಿದ್ದು ಒಟ್ಟು ನೂರು ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ ಪರೀಕ್ಷಾ ಕಾಲಾವಧಿ ಎರಡು ಗಂಟೆಗಳು. ಇನ್ನು ದೈಹಿಕ ಪರೀಕ್ಷೆ ಯಾವ ರೀತಿ ನಡೆಸಲಾಗುತ್ತದೆ ಎಂದರೆ ಗಂಡು ಮಕ್ಕಳು ಒಂದು ಸಾವಿರದ ಆರು ನೂರು ಮೀಟರ್ ಅನ್ನು ಏಳು ನಿಮಿಷದಲ್ಲಿ ಹಾಗೂ ಹೆಣ್ಣುಮಕ್ಕಳು ಸಾವಿರ ಮೀಟರನ್ನು ಆರು ನಿಷದಲ್ಲಿ ಓಡಬೇಕು.

ಎತ್ತರ ಜಿಗಿತದಲ್ಲಿ ಗಂಡುಮಕ್ಕಳಿಗೆ 1.2 ಮೀಟರ್ ಹೆಣ್ಣುಮಕ್ಕಳಿಗೆ 0.9 ಮೀಟರ್ ಇರುತ್ತದೆ. ಉದ್ದ ಜಿಗಿತ ಗಂಡುಮಕ್ಕಳಿಗೆ 3.8 ಮೀಟರ್ ಹೆಣ್ಣುಮಕ್ಕಳಿಗೆ 2.5 ಮೀಟರ್ ಇರುತ್ತದೆ. ಗುಂಡು ಎಸೆತ ಗಂಡು ಮಕ್ಕಳಿಗೆ 5.6 ಮೀಟರ್ ಹೆಣ್ಣುಮಕ್ಕಳಿಗೆ 3.76 ಮೀಟರ್ ಇರುತ್ತದೆ. ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿಗೆ ಸಂಬಂಧಿಸಿದಂತೆ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಎಂಬ ಅಧಿಸೂಚನೆಯನ್ನು ಹೊರಡಿಸಿದ್ದು ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದನ್ನ ಮುಂದಿನ ದಿನಗಳಲ್ಲಿ ಇಲಾಖೆ ತಿಳಿಸುತ್ತದೆ.

ನೀವು ಈಗಲೇ ಈ ಒಂದು ಹುದ್ದೆಗೆ ಬೇಕಾದಂತಹ ಪೂರ್ವ ತಯಾರಿಯನ್ನು ನಡೆಸಿಕೊಂಡು ಅರ್ಜಿ ಕರೆದ ತಕ್ಷಣ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿರಿ.

Leave A Reply

Your email address will not be published.

error: Content is protected !!