WhatsApp Group Join Now
Telegram Group Join Now

ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಮೊಸರು ಕೂಡ ಒಂದು. ಇದು ಕೊನೆಯದಾಗಿ ಸಿಗದಿದ್ದರೆ ಊಟ ಅಪೂರ್ಣ ಎಂದೇ ಅರ್ಥ. ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ ಮೊಸರು ಸೇವಿಸಿ ಅಥವಾ ಲಸ್ಸಿ ಅಥವಾ ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು. ಮೊಸರಿನಲ್ಲಿ ಕ್ಯಾಲ್ಸಿಯಂ, ರಿಬೋಫ್ಲಾವಿನ್, ಪ್ರೋಟೀನ್, ವಿಟಮಿನ್ ಬಿ ಇತ್ಯಾದಿ ಪೋಷಕಾಂಶಗಳಿವೆ. ಆದ್ದರಿಂದ ನಾವು ಇಲ್ಲಿ ಮೊಸರನ್ನು ರಾತ್ರಿ ಸೇವನೆ ಏಕೆ ಮಾಡಬಾರದು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ದೀರ್ಘಕಾಲದವರೆಗೆ ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢವಾಗಿಡಲು ಬಯಸಿದರೆ ಖಂಡಿತವಾಗಿಯೂ ಮೊಸರು ಅವಶ್ಯಕ ಆಗಿರುತ್ತದೆ. ಮೊಸರು ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿರುತ್ತದೆ. ದೇಹದಲ್ಲಿ ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ. ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆಯ ಶಕ್ತಿ ಬಲಗೊಳ್ಳುತ್ತದೆ. ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಇದು ಸಹಾಯಕ. ಕಡಿಮೆ ಹಸಿವನ್ನು ಅನುಭವಿಸಿದರೂ ಅದನ್ನು ಸೇವಿಸಬಹುದು.

ಸಾಕಷ್ಟು ಜನರು ಮೊಸರಿನಿಂದ ಒಳ್ಳೆಯ ಪೋಷಣೆ ದೊರೆಯುವುದು ಎಂದು ಅನುಚಿತವಾಗಿ ಸೇವಿಸುತ್ತಾರೆ. ಇದರಿಂದ ಆರೋಗ್ಯಕ್ಕೆ ಒಳ್ಳೆಯದಾಗುವ ಬದಲು ಕೆಟ್ಟ ಪರಿಣಾಮಗಳೇ ಹೆಚ್ಚು ಎಂದು ತಿಳಿದಿರುವುದಿಲ್ಲ. ಅಧ್ಯಯನಗಳ ಪ್ರಕಾರ ಶೇ. 95ರಷ್ಟು ಜನರು ಮೊಸರನ್ನು ಅನುಚಿತ ರೀತಿಯಲ್ಲಿ ಸೇವಿಸುತ್ತಾರೆ. ಇದರಿಂದ ನೆಗಡಿ, ಜ್ವರ, ಅಸ್ತಮ, ತ್ವಚೆಯಲ್ಲಿ ಕಿರಿಕಿರಿ, ಕೂದಲು ಉದುರುವ ಸಮಸ್ಯೆ, ಮಲಬದ್ಧತೆ, ಹೊಟ್ಟೆ ಉಬ್ಬರ, ಪಿತ್ತ, ಕಫದಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಭಾರತೀಯ ಭೋಜನ ಅಥವಾ ಊಟದ ವಿಧಾನದಲ್ಲಿ ಊಟದ ಕೊನೆಗೆ ಸ್ವಲ್ಪ ಮೊಸರನ್ನು ಸೇವಿಸುವುದು ಪದ್ಧತಿ. ತಜ್ಞರು ಹೇಳುವ ಪ್ರಕಾರ ರಾತ್ರಿಯ ಸಮಯದಲ್ಲಿ ಮೊಸರನ್ನು ಸೇವಿಸಬಾರದು. ಆಯುರ್ವೇದದ ಪ್ರಕಾರ ಸೂರ್ಯಾಸ್ತದ ನಂತರ ವಾತಾವರಣದಲ್ಲಿ ಹಾಗೂ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಇಳಿಮುಖವಾಗುತ್ತದೆ. ಅಂತಹ ಸಮಯದಲ್ಲಿ ಮೊಸರನ್ನು ಸೇವಿಸಿದರೆ ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ಶ್ವಾಸಕೋಶದಲ್ಲಿ ಅಡೆತಡೆ, ಅಸ್ತಮ, ಹೊಟ್ಟೆಯಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಿಗೆ ಪ್ರೇರಣೆ ನೀಡುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: