ಈ ಕೊ’ರೊನ ಟೈಮ್ ನಲ್ಲಿ ನೈಸರ್ಗಿಕ ಆಕ್ಸಿಜನ್ ಪಡೆಯಲು ಈ ವ್ಯಾಯಾಮದಿಂದ ಸಾಧ್ಯ

0

ಕೊರೋನ ವೈರಸ್ ಹರಡುವುದು ಇನ್ನೇನು ಕಡಿಮೆ ಆಗುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಎರಡನೆ ಅಲೆಯ ಕೊರೋನ ವೈರಸ್ ನಮ್ಮೆಲ್ಲರನ್ನು ಭಯ ಬೀಳಿಸುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ, ಬೆಡ್ ಕೊರತೆಯಿಂದ ಸಾವಿರಾರು ಜನರು ಸಾಯುತ್ತಿದ್ದಾರೆ. ಆದ್ದರಿಂದ ಕೃತಕ ಆಕ್ಸಿಜನ್ ಅವಲಂಬಿಸದೆ ನಮ್ಮ ದೇಹದಲ್ಲಿ ಉತ್ಪಾದನೆಯಾಗುವಂತೆ ಮಾಡಿಕೊಳ್ಳುವ ಉಪಾಯವನ್ನು ಈ ಲೇಖನದಲ್ಲಿ ನೋಡೋಣ.

ಒಂದು ಕಡೆ ಕೊರೋನ ವೈರಸ್ ವೇಗವಾಗಿ ಹರಡುತ್ತಿದೆ. ಇನ್ನೊಂದು ಕಡೆ ಕೊರೋನ ವೈರಸ್ ಬಗ್ಗೆ ಹುಟ್ಟುತ್ತಿರುವ ಭಯ ಹೆಚ್ಚುತ್ತಿದೆ. ಪ್ರತಿದಿನ ನ್ಯೂಸ್ ಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಬಹುದು. ಯೋಗ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿರುವ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಅದರಂತೆ ಮಕರಾಸನ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ನೆಲದ ಮೇಲೆ ಒಂದು ಚಾಪೆಯನ್ನು ಹಾಸಿಕೊಂಡು ಹೊಟ್ಟೆಯ ಭಾಗವನ್ನು ಕೆಳಗೆ ಮಾಡಿ ಮಲಗಿಕೊಂಡು ಕೈಅನ್ನು ಮೇಲಕ್ಕಟ್ಟಿಕೊಂಡು ಹೊಟ್ಟೆಯ ಕೆಳಗೆ ಒಂದು ತಲೆದಿಂಬು, ಹಣೆಯ ಭಾಗಕ್ಕೆ ಒಂದು ತಲೆದಿಂಬು, ತೊಡೆಯ ಭಾಗಕ್ಕೆ ಒಂದು ತಲೆದಿಂಬು ಇಟ್ಟುಕೊಂಡು ಮಲಗಿ ಕುತ್ತಿಗೆಯನ್ನು ಮೇಲಕ್ಕೆತ್ತಿ ಆಳವಾಗಿ ಉಸಿರನ್ನು ತೆಗೆದುಕೊಳ್ಳುವುದು ಮತ್ತು ಉಸಿರನ್ನು ಬಿಡುವುದು ಹೀಗೆ 10 ಬಾರಿ ಮಾಡಬೇಕು. ಈ ಆಸನವನ್ನು ಪ್ರತಿದಿನ 3 ತಾಸಿಗೆ ಒಮ್ಮೆ ಮಾಡುತ್ತಿದ್ದರೆ ಕೃತಕ ಆಕ್ಸಿಜನ್ ಇಲ್ಲದೆ ಇದ್ದರೂ ನಾವೆ ಆಕ್ಸಿಜನ್ ಹೆಚ್ಚಿಸಿಕೊಳ್ಳಲು ಸಾಧ್ಯ.

ಈ ಆಸನ ಮಾಡುವುದರಿಂದ ನಮ್ಮ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ, ಶ್ವಾಸಕೋಶದಲ್ಲಿ ಆಕ್ಸಿಜನ್ ಹೆಚ್ಚು ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾದಾಗ ಕೃತಕ ಆಕ್ಸಿಜನ್ ನ 70% ಆಕ್ಸಿಜನ್ ದೇಹದಲ್ಲಿ ಒದಗುತ್ತದೆ. ಈ ಆಸನವನ್ನು ಪ್ರತಿದಿನ ಎಲ್ಲರೂ ಮಾಡುವುದರಿಂದ ಸರ್ಕಾರ ಅಥವಾ ಆಸ್ಪತ್ರೆಯ ಮೊರೆ ಹೋಗಬೇಕಾಗಿರುವುದಿಲ್ಲ ಅಲ್ಲದೆ ಈ ಆಸನ ಮಾಡುವುದರಿಂದ ಶಾಸಕೋಶ ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗುತ್ತದೆ. ಈ ಆಸನದ ಬಗ್ಗೆ ಯೋಗಪಟುಗಳ ಹತ್ತಿರ ಸರಿಯಾಗಿ ಕಲಿತುಕೊಳ್ಳುವುದು ಒಳ್ಳೆಯದು. ಈ ಆಸನದ ಬಗ್ಗೆ ಎಲ್ಲರಿಗೂ ತಿಳಿಸಿ ಕೊರೋನವೈರಸ್ ಬರುವ ಮೊದಲೆ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಳ್ಳುವುದು ಉತ್ತಮ. ಎರಡನೆ ಅಲೆಯ ಕೊರೋನ ವೈರಸ್ ವೇಗವಾಗಿ ಹರಡುತ್ತಿದ್ದು, ಜನರು ಭಯ ಪಡದೆ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಿ. ಸರ್ಕಾರ, ಆಸ್ಪತ್ರೆಗಳನ್ನು ಅವಲಂಬಿಸದೆ ನಮ್ಮ ಹಾಗೂ ನಮ್ಮವರ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ.

Leave A Reply

Your email address will not be published.

error: Content is protected !!