ಎಂತಹ ಒಣಕೆಮ್ಮು ಸಮಸ್ಯೆ ಇರಲಿ ಈ ಮನೆಮದ್ದು ಮಾಡಿ ತಕ್ಷಣ ರಿಲೀಫ್

0

ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮು ಎಲ್ಲರಿಗೂ ಆಗುತ್ತದೆ. ಅದರಲ್ಲಿ ನೆಗಡಿ ಕೆಲವರಿಗೆ ಆಗುವುದೇ ಇಲ್ಲ. ಹಾಗೆಯೇ ಕೆಲವರಿಗೆ ವಾತಾವರಣಕ್ಕೆ ಆಗುತ್ತದೆ. ನೆಗಡಿಯ ಹಾಗೆ ಒಣಕೆಮ್ಮು ಆಗುತ್ತದೆ. ಇದು ಅತಿಯಾಗಿ ಮುಂದುವರೆದರೆ ಸುಮಾರು ಧಮ್ಮಿನ ಲಕ್ಷಣಕ್ಕೆ ಹೋಗುತ್ತದೆ. ನಾವು ಇಲ್ಲಿ ಒಣನೆಗಡಿ ಮತ್ತು ಕೆಮ್ಮನ್ನು ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇದಕ್ಕೆ ಹಲವಾರು ಸಾಮಗ್ರಿಗಳು ಬೇಕಾಗುತ್ತವೆ. ಅವುಗಳೆಂದರೆ ಮೂರು ಲೋಟ ನೀರನ್ನು ತೆಗೆದುಕೊಳ್ಳಬೇಕು. ಹಾಗೆಯೇ ಅದಕ್ಕೆ ಅರ್ಧ ಚಮಚ ಕಾಲುಮೆಣಸನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಅರ್ಧ ಚಮಚ ಜೀರಿಗೆ ಯನ್ನು ತೆಗೆದುಕೊಳ್ಳಬೇಕು. ಒಂದು ಇಂಚಿನಷ್ಟು ಶುಂಠಿಯನ್ನು ತೆಗೆದುಕೊಳ್ಳಬೇಕು. ಅರ್ಧ ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು. ಹಾಗೆಯೇ ರುಚಿಗೆ ತಕ್ಕಷ್ಟು ಉಪ್ಪನ್ನು ತೆಗದುಕೊಳ್ಳಬೇಕು. ಆದ್ದರಿಂದ ಇವೆಲ್ಲವೂ ಮನೆಯಲ್ಲಿ ಇರುವುದರಿಂದ ಯಾವುದನ್ನೂ ಹೊರಗಡೆಯಿಂದ ತರುವ ಅವಶ್ಯಕತೆ ಇರುವುದಿಲ್ಲ.

ಇನ್ನು ಇದನ್ನು ಮಾಡುವ ವಿಧಾನ ಎಂದರೆ ಎಲ್ಲಾ ಸಾಮಗ್ರಿಗಳನ್ನು ಒಂದೇ ಕಡೆ ಇಟ್ಟುಕೊಳ್ಳಬೇಕು. ನಂತರದಲ್ಲಿ ಒಂದು ಪಾತ್ರೆಗೆ 3ಲೋಟ ನೀರನ್ನು ಹಾಕಿ ಕುದಿಯಲು ಇಡಬೇಕು. ನಂತರದಲ್ಲಿ ಅದಕ್ಕೆ ಶುಂಠಿ ಮತ್ತು ಜೀರಿಗೆಯನ್ನು ಹಾಕಬೇಕು. ಅದಕ್ಕೆ ಕಾಲುಮೆಣಸನ್ನು ಹಾಕಬೇಕು. ಇದು ನೆಗಡಿಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅದಕ್ಕೆ ಉಪ್ಪನ್ನು ಹಾಕಬೇಕು. ಇವಿಷ್ಟು ಚೆನ್ನಾಗಿ ಸುಮಾರು 20ನಿಮಿಷಗಳ ಕಾಲ ಕುದಿಯಬೇಕು.

ನಂತರದಲ್ಲಿ ಆಫ್ ಮಾಡಿ ಪಾತ್ರೆಯನ್ನು ಉರಿಯಿಂದ ತೆಗೆಯಬೇಕು. ನಂತರದಲ್ಲಿ ಅದನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಸೋಸಿಕೊಳ್ಳಬೇಕು. ಇದು ಹತ್ತು ನಿಮಿಷಗಳ ಕಾಲ ತಣ್ಣಗಾದ ಮೇಲೆ ನಿಂಬೆರಸವನ್ನು ಹಾಕಬೇಕು. ಕುದಿಯುತ್ತಿರುವ ನಿಂಬೆಹಣ್ಣಿನ ರಸವನ್ನು ಹಾಕಬಾರದು. ಏಕೆಂದರೆ ಇದರಿಂದ ವಿಟಮಿನ್ ಸಿ ಹೋಗುತ್ತದೆ. ನಂತರ ಅದನ್ನು ಒಂದು ಲೋಟಕ್ಕೆ ಹಾಕಿಕೊಂಡು ಕುಡಿಯಬೇಕು. ಇದರಿಂದ ಒಣಕೆಮ್ಮು ಮತ್ತು ನೆಗಡಿಯನ್ನು ಕಡಿಮೆ ಮಾಡಿಕೊಳ್ಳಬಹುದು.

Leave A Reply

Your email address will not be published.

error: Content is protected !!