ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತಿ ಯಾರು ಗೊತ್ತೇ?

0

ಹೆಣ್ಣುಮಕ್ಕಳು ನಾವೇನು ಕಡಿಮೆ ಇಲ್ಲ ಎಂದು ಅನೇಕ ಉನ್ನತ ಮಟ್ಟದ ಹುದ್ದೆಗಳಿಗೆ ನೇಮಕ ಆಗಿದ್ದಾರೆ. ಅವರಲ್ಲಿ ದಕ್ಷ ಐಎಎಸ್ ಅಧಿಕಾರಿಯಾಗಿ ರೋಹಿಣಿ ಸಿಂದೂರಿ ಅವರು ಅನೇಕ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಜನಪರ ಕೆಲಸ ಮಾಡಿದ್ದಾರೆ. ಅವರ ಆಡಳಿತದ ಬಗ್ಗೆ ಹಾಗೂ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ನಮ್ಮ ಕರ್ನಾಟಕ ರಾಜ್ಯಕ್ಕೆ ಅಧಿಕಾರಿಗಳಾಗಿ ಕೆಲಸ ಮಾಡಲು ಬೇರೆ ರಾಜ್ಯಗಳಿಂದ ಅನೇಕರು ಈಗಾಗಲೆ ಬಂದಿದ್ದಾರೆ. ಅವರಲ್ಲಿ ಕೆಲವರು ಒಳ್ಳೆಯ ಕೆಲಸಗಳಿಂದ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇಂದಿನ ಪೀಳಿಗೆಯಲ್ಲಿ ಹೊರರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದ ರೋಹಿಣಿ ಸಿಂದೂರಿ ಅವರು ಕರ್ನಾಟಕದ ಜನತೆಗೆ ಹತ್ತಿರವಾಗಿದ್ದಾರೆ. ಜಿಲ್ಲಾಧಿಕಾರಿಯಾದವರು ಹೀಗಿರಬೇಕು ಎಂಬ ಭಾವನೆ ಮೂಡಿಸಿದ್ದಾರೆ. ಅವರು ಪ್ರಸ್ತುತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಹಿಣಿ ಸಿಂದೂರಿ ಅವರು ಜಿಲ್ಲಾಧಿಕಾರಿಯಾಗಿ ಮುಂದುವರೆಯಲು ಅಡಚಣೆಗಳಿವೆ ಆದರೆ ಅವರು ಒಬ್ಬ ದಕ್ಷ ಆಡಳಿತಗಾರ್ತಿ ಎನ್ನುವುದರಲ್ಲಿ ಯಾವುದೆ ಸಂಶಯವಿಲ್ಲ.

ರೋಹಿಣಿ ಸಿಂದೂರಿ ಅವರು ಮೂಲತಃ ತೆಲಂಗಾಣ ರಾಜ್ಯದವರು ಅವರು 1984, ಮೇ 30 ರಂದು ಹುಟ್ಟಿದ್ದಾರೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಬಹಳ ಚೆನ್ನಾಗಿ ಕನ್ನಡವನ್ನು ಮಾತನಾಡುತ್ತಾರೆ. ಓದಿನಲ್ಲಿ ಆಸಕ್ತಿ ಇರುವ ಇವರು ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಜನಸೇವೆ ಮಾಡಬೇಕು ಸಿವಿಲ್ ಸರ್ವಂಟ್ ಆಗಬೇಕು ಎಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು. ಬಹಳ ಶ್ರಮಪಟ್ಟು 2009ರಲ್ಲಿ 42ನೆ ರ್ಯಾಂಕ್ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕರ್ನಾಟಕದ ಭಾರತೀಯ ಸೇವಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ ರೋಹಿಣಿ ಅವರು ಮಾಡಿರುವ ಕೆಲಸಗಳನ್ನು ಅಲ್ಲಿರುವ ಜನರು ಮರೆಯುವಂತಿಲ್ಲ. ಮಂಡ್ಯದಲ್ಲಿ ಪ್ರತಿಯೊಂದು ಮನೆಗೂ ಶೌಚಾಲಯ ಇರಬೇಕೆಂದು, ಸ್ವಚ್ಛಭಾರತ್ ಯೋಜನೆ ಕುರಿತು ರೋಹಿಣಿ ಸಿಂದೂರಿ ಅವರು ಮಾಡಿರುವ ಕೆಲಸವನ್ನು ಮೆಚ್ಚಿ ಭಾರತ ಸರ್ಕಾರ ಅವರನ್ನು ಗೌರವಿಸಿತು. ಹತ್ತನೇ ತರಗತಿಯ ರಿಸಲ್ಟ್ ನಲ್ಲಿ ಹಿಂದಿದ್ದ ಹಾಸನವನ್ನು ಮೊದಲನೇ ಸ್ಥಾನಕ್ಕೆ ತಂದ ಕೀರ್ತಿ ರೋಹಿಣಿ ಸಿಂದೂರಿ ಅವರಿಗೆ ಸಲ್ಲಬೇಕು.

ಹಾಸನ ಮಾತ್ರವಲ್ಲದೆ ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಜಿಲ್ಲೆಗಳ ಜನರು ಮತ್ತೊಮ್ಮೆ ರೋಹಿಣಿ ಅವರು ಜಿಲ್ಲಾಧಿಕಾರಿಯಾಗಿ ಬರಲಿ ಎಂದು ಆಶಿಸುತ್ತಾರೆ. ಇಂದಿಗೂ ಅವರು ರೋಹಿಣಿಯವರನ್ನು ನೆನೆಸುತ್ತಾರೆ. ಯಾವುದೆ ಪೊಲಿಟಿಕಲ್ ಪ್ರೆಷರ್ ಬಂದರು ರೋಹಿಣಿ ಅವರು ಧೈರ್ಯಗೆಡದೆ ಕೆಲಸ ಮಾಡಿ ಜಿಲ್ಲೆಗೆ ಒಳ್ಳೆಯದನ್ನೇ ಮಾಡಿದ್ದಾರೆ. ಮೈಸೂರಿನಲ್ಲಿ ಕೊರೋನ ವೈರಸ್ ಸಂದರ್ಭದಲ್ಲಿ ಯಾವುದೆ ಅಡೆತಡೆಯಾಗದಂತೆ ದಸರಾ ಹಬ್ಬವನ್ನು ನಡೆಸಿಕೊಟ್ಟರು. ರೋಹಿಣಿ ಅವರಿಗೆ ಬಹಳಷ್ಟು ಜನರು ಅಭಿಮಾನಿಗಳಿದ್ದಾರೆ. ರೋಹಿಣಿ ಅವರು ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಮ್ಮ ಜೀವನದ ಕಥೆಯನ್ನು ಹೇಳಿಕೊಂಡಿದ್ದಾರೆ. ರೋಹಿಣಿ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಸುದೀರ್ ಅವರನ್ನು ವಿವಾಹವಾಗಿದ್ದಾರೆ. ಸುದೀರ್ ಅವರು ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜನಿಯರ್. ರೋಹಿಣಿ ಹಾಗೂ ಸುದೀರ್ ದಂಪತಿಗಳಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ರೋಹಿಣಿ ಅವರಿಗೆ ಒಬ್ಬಳು ತಂಗಿ ಇದ್ದಾಳೆ ಅವರು ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಣ್ಣು ಅಬಲೆಯಲ್ಲ ಕ್ರೂರ ಸಮಾಜದಲ್ಲಿ ಯಾರನ್ನು ನಂಬಬಾರದು, ಪುಸ್ತಕವನ್ನು ನಂಬಿದರೆ ರೋಹಿಣಿ ಸಿಂದೂರಿ ಅವರಂತೆ ದಕ್ಷ ಆಡಳಿತಗಾರ್ತಿಯಾಗಬಹುದು. ಒಟ್ಟಿನಲ್ಲಿ ರೋಹಿಣಿ ಸಿಂದೂರಿ ಅವರ ಜೀವನ ಇಂದಿನ ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿದೆ. ಹೆಣ್ಣು ಯಾವುದಕ್ಕೂ ಹೆದರದೆ ತಾನು ಧೈರ್ಯದಿಂದ ಸಮಾಜವನ್ನು ಎದುರಿಸಿ ನಿಲ್ಲಬೇಕು.

Leave A Reply

Your email address will not be published.

error: Content is protected !!
Footer code: