ಆಸ್ತಿ ಮಾರಾಟ ಮಾಡುವಾಗ ಇದರ ಬಗ್ಗೆ ಗಮನವಿರಲಿ.. ಮೋಸ ಹೋಗದಿರಿ

0

ನಾವು ನಮ್ಮ ಜೀವನದಲ್ಲಿ ಒಂದಲ್ಲ ಒಂದು ಆಸ್ತಿಯನ್ನು ಖರೀದಿಸುವ ಸಮಯದಲ್ಲಿ ಅದು ಸೈಟ್ ಇರಬಹುದು ಮನೆ ಇರಬಹುದು ಯಾವುದೇ ಆಸ್ತಿ ಇರಬಹುದು ನಾವು ಅದನ್ನು ಖರಿಧಿಸುವ ಸಮಯದಲ್ಲಿ ಸೆಲ್ ಅಗ್ರಿಮೆಂಟ್ ಮಾಡಿಕೊಳ್ಳುತ್ತೇವೆ. ನಮಗೆ ಯಾವುದೇ ಒಂದು ಆಸ್ತಿಯನ್ನು ಕೊಂಡುಕೊಳ್ಳುವುದಕ್ಕೆ ಇಷ್ಟ ಆದರೆ ಆ ಆಸ್ತಿಯನ್ನು ರಿಜಿಸ್ಟರ್ ಮಾಡಿಕೊಳ್ಳುವುದಕ್ಕೆ ಮೊದಲು ಆ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಮೊದಲು ಸ್ವಲ್ಪ ಮೊತ್ತದ ಹಣವನ್ನು ಕೊಟ್ಟು ಅದನ್ನು ಬುಕಿಂಗ್ ಮಾಡಿಕೊಂಡು ಒಂದು ಅಗ್ರಿಮೆಂಟ್ ಫಾರ್ ಸೇಲ್ ಎನ್ನುವುದನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅಗ್ರಿಮೆಂಟ್ ಫಾರ್ ಸೇಲ್ ಮಾಡಿಸಿಕೊಳ್ಳುವಾಗ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅಂದರೆ ನಾವು ಅಗ್ರಿಮೆಂಟ್ ಫಾರ್ ಸೇಲ್ ಮಾಡಿಸಿಕೊಳ್ಳುವಾಗ ದೊಡ್ಡ ಮಟ್ಟದ ಹಣವನ್ನು ಹೂಡಿಕೆ ಮಾಡುತ್ತಿದ್ದೇವೆ ಎಂದಾಗ ಅನೇಕ ಟರ್ಮ್ಸ್ ಆಂಡ್ ಕಂಡೀಷನ್ ಗಳನ್ನ ಮೆನ್ಷನ್ ಮಾಡಬೇಕಾಗುತ್ತದೆ. ಕ್ಲಾಸಸ್ ಗಳನ್ನು ಮೆನ್ಷನ್ ಮಾಡಬೇಕಾಗುತ್ತದೆ. ನಮ್ಮನ್ನು ನಾವು ಸೇಫ್ ಗಾರ್ಡ್ ಮಾಡಬೇಕು ಎಂದಾಗ ಸಾಕಷ್ಟು ಮುಂಜಾಗ್ರತೆ ಅನುಸರಿಸಬೇಕು ಸಾಕಷ್ಟು ಕ್ಲಾಸಸ್ ಗಳನ್ನು ಹಾಕಬೇಕಾಗುತ್ತದೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು. ಹಾಗಾಗಿ ನಾವಿಂದು ನಿಮಗೆ ಅಗ್ರಿಮೆಂಟ್ ಫಾರ್ ಸೇಲ್ ನಲ್ಲಿ ಯಾವೆಲ್ಲ ವಿಷಯಗಳನ್ನು ಹಾಕಬೇಕು ಎಂಬುದನ್ನು ತಿಳಿಸಿಕೊಡುತ್ತೆವೆ.

ನೀವು ಒಂದು ಪ್ರಾಪರ್ಟಿ ನೋಡಿದ ಮೇಲೆ ಅದು ನಿಮಗೆ ಇಷ್ಟ ಆದರೆ ಆಗ ನೀವು ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತದೆ. ಕೊಂಡುಕೊಳ್ಳುವವರು ಮತ್ತು ಮಾರುವವರ ನಡುವೆ ಒಂದು ಮ್ಯೂಚುವಲ್ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತದೆ ಅದೇ ಅಗ್ರಿಮೆಂಟ್ ಫಾರ್ ಸೇಲ್. ಇದನ್ನು ಮಾಡುವಾಗ ಯಾವೆಲ್ಲ ಮಾಹಿತಿಯನ್ನು ಮೆನ್ಷನ್ ಮಾಡಬೇಕು ಎಂದರೆ ಮೊದಲನೆಯದಾಗಿ ಯಾವುದೇ ಆಸ್ತಿಯನ್ನು ಖರೀದಿಸುವಾಗ ಅಲ್ಲಿ ಎರಡು ಪಾರ್ಟಿಗಳು ಇರುತ್ತವೆ ಮಾರುವವರು ಮತ್ತು ತೆಗೆದುಕೊಳ್ಳುವವರು ಇವರ ಮಾಹಿತಿ ಅಡ್ರೆಸ್ ಮತ್ತು ವಯಸ್ಸನ್ನು ಅಗ್ರಿಮೆಂಟ್ ನಲ್ಲಿ ನಮೂದಿಸಬೇಕು. ಎರಡನೇ ಮಾಹಿತಿ ಯಾವುದನ್ನು ಮೆನ್ಷನ್ ಮಾಡಬೇಕು ಎಂದರೆ ನೀವು ಖರೀದಿಸುತ್ತಿರುವ ಪ್ರಾಪರ್ಟಿಯ ಸಂಪೂರ್ಣವಾದ ಮಾಹಿತಿಯನ್ನು ಅಲ್ಲಿ ನಮೂದಿಸಬೇಕು ಆಸ್ತಿಯನ್ನ ನೀವು ಎಲ್ಲಿ ಖರೀದಿಸುತ್ತಿದ್ದಿರಿ ಆಸ್ತಿಯ ಜಾಗ ಎಲ್ಲಿ ಬರುತ್ತದೆ ಆಸ್ತಿಯನ್ನು ಮಾಡುತ್ತಿರುವವರಿಗೆ ಆ ಆಸ್ತಿ ಯಾರಿಂದ ಬಂತು ಎಲ್ಲ ಸಂಪೂರ್ಣವಾದ ಮಾಹಿತಿಯನ್ನು ನೀವು ಮೆನ್ಷನ್ ಮಾಡಬೇಕಾಗುತ್ತದೆ. ಮದರ್ ಡಿಡಿನಿಂದ ಟ್ರಾಂಜಾಕ್ಷನ್ ಹೇಗೆ ಆಯಿತು ಅಪ್ರುವಲ್ ಸಿದ್ದರೆ ಅಪ್ರೋವಲ್ಸ್ ನ ರೆಫರೆನ್ಸ್ ನಂಬರ್ ಏನು ಪ್ರತಿಯೊಂದನ್ನೂ ನೀವು ಅಗ್ರಿಮೆಂಟ್ ನಲ್ಲಿ ಮೆನ್ಷನ್ ಮಾಡಬೇಕಾಗುತ್ತದೆ.

ಮೂರನೆಯ ಮಾಹಿತಿ ಯಾವುದನ್ನ ಮೆನ್ಷನ್ ಮಾಡಬೇಕು ಎಂದರೆ ನೀವು ಎಷ್ಟು ಹಣಕ್ಕೆ ಆಸ್ತಿಯನ್ನು ಖರೀದಿಸುವುದಕ್ಕೆ ಆಸೆ ಪಟ್ಟಿದ್ದೀರಿ ಉದಾಹರಣೆಗೆ ನೀವು 50 ಲಕ್ಷದ ಆಸ್ತಿಯನ್ನು ತೆಗೆದುಕೊಳ್ಳಲು ಆಸೆ ಪಟ್ಟಿದ್ದರೆ ಅದಕ್ಕೆ ಹತ್ತು ಅಥವಾ ಇಪ್ಪತ್ತು ಲಕ್ಷ ರುಪಾಯಿ ಅಡ್ವಾನ್ಸ್ ಅನ್ನು ಕೊಟ್ಟು ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದಿರಿ ಎಂಬುದನ್ನು ಅಲ್ಲಿ ಮೆನ್ಷನ್ ಮಾಡಬೇಕು. ನಾಲ್ಕನೆಯ ಮಾಹಿತಿ ಯಾವುದನ್ನು ಮೆನ್ಷನ್ ಮಾಡಬೇಕು ಎಂದರೆ ನೀವು ಪ್ರಾಪರ್ಟಿ ಲೊಕೇಶನ್ ಪ್ರಾಪರ್ಟಿ ಡೀಟೇಲ್ಸ್ ಕೊಟ್ಟಿರುತ್ತೀರಿ ಈಗ ಪ್ರಾಪರ್ಟಿ ಲೈನ್ಸ್ ಏನಿದೆ ಬಾರ್ಡರ್ ಯಾವ ಫೇಸಿಂಗ್ ಎದೆ ಈಸ್ಟ್ ಫೇಸಿಂಗ್ ವೆಸ್ಟ್ ಫೇಸಿಂಗ್ ಇದೆಯಾ ಅಕ್ಕಪಕ್ಕದ ಜಾಗಗಳ ಬೌಂಡರಿ ಏನಿದೆ ಅದರ ರೆಫ್ರೆನ್ಸ್ ಏನಿದೆ ಪ್ರೋಪರ್ಟಿ ಪಕ್ಕದಲ್ಲಿ ಏನಿದೆ ಹಿಂದುಗಡೆ ಏನಿದೆ ಮುಂದುಗಡೆ ಏನಿದೆ ಹೀಗೆ ಪ್ರತಿಯೊಂದನ್ನು ಮಾಹಿತಿಯನ್ನು ನೀವು ಪ್ರಾಪರ್ಟಿ ಬೌಂಡರೀಸ್ ನಲ್ಲಿ ಮೆನ್ಷನ್ ಮಾಡಬೇಕಾಗುತ್ತದೆ. ನೀವು ಕೊಂಡುಕೊಳ್ಳುತ್ತಿರುವ ಪ್ರಾಪರ್ಟಿ ಯಾವ ಜಮೀನಿನಲ್ಲಿ ಯಾವ ಜಾಗದಲ್ಲಿ ಯಾವ ಸರ್ವೇ ನಂಬರ್ ನಲ್ಲಿ ಜಾಗವನ್ನು ದೆವಲಪ್ ಮಾಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ಅಲ್ಲಿ ರೆಫರೆನ್ಸ್ ಕೊಡಬೇಕಾಗುತ್ತದೆ

ಇನ್ನು ನೀವು ಮೆನ್ಶನ್ ಮಾಡಬೇಕಾದ ಐದನೇ ಮಾಹಿತಿ ಏನೆಂದರೆ ನೀವು ಅಗ್ರಿಮೆಂಟ್ ಅನ್ನ ಮಾಡಿಕೊಳ್ಳುವಾಗ ಇಂಡಮಿನಿಟಿ ಕಂಡೀಶನ್ ಗಳನ್ನು ಹಾಕಿಕೊಳ್ಳಬೇಕು ಯಾಕೆಂದರೆ ನೀವು ತೆಗೆದುಕೊಳ್ಳುವ ಆಸ್ತಿ ಯಾವುದೇ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬಹುದು ಕೋರ್ಟ್ ಕೇಸ್ ಗೆ ಸಿಕ್ಕಿಹಾಕಿಕೊಳ್ಳಬಹುದು ಈ ರೀತಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ನೀವು ಯಾರಿಂದ ಆಸ್ತಿಯನ್ನು ಖರೀದಿಸುತ್ತಿದ್ದೇವೆ ಮುಂದೆ ಏನಾದರೂ ಸಮಸ್ಯೆ ಬಂದಾಗ ಅವರು ಅದನ್ನು ಮುಂದೆ ನಿಂತು ಬಗೆಹರಿಸುವಂತೆ ಕಂಡಿಶನನ್ನು ಮೆನ್ಷನ್ ಮಾಡಬೇಕು. ಇನ್ನು ಆರನೇ ಮಾಹಿತಿ ಯಾವುದೆಂದರೆ ಆ ಆಸ್ತಿಯನ್ನು ಸಂಪೂರ್ಣವಾಗಿ ನಿಮ್ಮ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಎರಡು ತಿಂಗಳ ಸಮಯವನ್ನು ತೆಗೆದುಕೊಳ್ಳಬಹುದು

ಮೂರು ತಿಂಗಳ ಸಮಯವನ್ನು ತೆಗೆದುಕೊಳ್ಳಬಹುದು ಆರು ತಿಂಗಳ ಸಮಯ ತೆಗೆದುಕೊಳ್ಳಬಹುದು ಯಾಕೆಂದರೆ ಇಲ್ಲಿ ತೆಗೆದುಕೊಳ್ಳುವವರು ಮತ್ತು ಮಾರುವವರ ಯಾವುದೇ ಸಮಸ್ಯೆ ಇರುವುದಿಲ್ಲ ಆದರೆ ಕೆಲವೊಂದು ಸಾರಿ ಸರ್ಕಾರದ ನಿಯಮಗಳೇ ರಿಜಿಸ್ಟ್ರೇಷನ್ ಮಾಡುವುದನ್ನು ತಡೆಯಬಹುದು ಸರ್ಕಾರದಿಂದಲೇ ಕೆಲವು ಆಸ್ತಿಗಳಿಗೆ ಅಪ್ರೂವ್ ಮಾಡದೇ ಇರಬಹುದು ಇಂತಹ ಸಮಯದಲ್ಲಿ ರಿಜಿಸ್ಟ್ರೇಷನ್ ಅನ್ನ ಪೂರ್ತಿ ಗಳಿಸುವುದಕ್ಕೆ ಎಷ್ಟು ಸಮಯ ಬೇಕು ಅದನ್ನು ಹೆಚ್ಚು ಮಾಡುವಂತಿರಬೇಕು.

ಏಳನೇ ನಿಯಮ ಪೆನಾಲ್ಟಿ ಕ್ಲಾಸಸ್. ಅಂದರೆ ಕೆಲವೊಂದು ಸಾರಿ ಆಸ್ತಿಯನ್ನು ಖರೀದಿಸುವವರು ತೊಂದರೆಗಳನ್ನು ಉಂಟುಮಾಡಬಹುದು ಆಸ್ತಿಯನ್ನು ಕೊಡುವವರ ತೊಂದರೆಗಳನ್ನು ಉಂಟುಮಾಡಬಹುದು ಒಂದು ವೇಳೆ ಆಸ್ತಿಯನ್ನು ಖರೀದಿ ಮಾಡುವವರು ಪ್ರಾರಂಭದಲ್ಲಿ ಒಂದಿಷ್ಟು ಹಣವನ್ನು ಕೊಟ್ಟಿರುತ್ತಾರೆ ನಂತರ ಆಸ್ತಿಯನ್ನು ಖರೀದಿಸುವುದಕ್ಕೆ ನಿರಾಕರಿಸುತ್ತಾರೆ ಆ ಸಂದರ್ಭದಲ್ಲಿ ಅವರು ಮುಂಚಿತವಾಗಿ ಕೊಟ್ಟ ಹಣದಲ್ಲಿ ಎಷ್ಟು ಪ್ರಮಾಣದ ಹಣವನ್ನು ತಾವು ಇಟ್ಟುಕೊಳ್ಳುತ್ತೇವೆ ಎಂಬುದರ ಬಗ್ಗೆ ಮೆನ್ಷನ್ ಮಾಡಬೇಕಾಗುತ್ತದೆ. ಒಂದುವೇಳೆ ಆಸ್ತಿಯನ್ನು ಮಾರುವವರೇ ಆಸ್ತಿಯನ್ನು ಮಾರುವುದಿಲ್ಲ ಎಂದಾದಾಗ ಅವರು ಇಷ್ಟು ಪ್ರಮಾಣದ ಹಣವನ್ನು ನಿಮಗೆ ಕೊಡಬೇಕು ಎಂಬುದನ್ನು ಕೂಡ ಒಪ್ಪಂದ ಮಾಡಿಕೊಂಡಿರಬೇಕು.

ಇನ್ನು ಎಂಟನೇ ಮಾಹಿತಿ ಯಾವುದನ್ನು ಮೆನ್ಷನ್ ಮಾಡಬೇಕು ಎಂದರೆ, ನೀವು ಒಂದು ಲೇಔಟಿನಲ್ಲಿ ಸೈಟನ್ನು ಖರೀದಿಸುತ್ತಿದ್ದಿರಿ ಎಂದರೆ ಲೇಔಟ್ನಲ್ಲಿ ಸೆಲ್ಲರ್ ಏನಾದ್ರೂ ಯಾವುದಾದರೂ ಮೆಂಬರ್ಶಿಪ್ ಅನ್ನ ತೆಗೆದುಕೊಂಡಿರಬಹುದು. ಆ ಅಧಿಕಾರಗಳು ಸಂಪೂರ್ಣವಾಗಿ ನಿಮಗೆ ವರ್ಗಾವಣೆ ಆಗುವಂತೆ ಮಾಡಿಕೊಳ್ಳಬೇಕು ಅಧಿಕಾರವನ್ನು ಪಡೆದುಕೊಳ್ಳಲು ನೀವು ಮತ್ತೆ ಪೀಸ್ ತುಂಬಬೇಕು ಎನ್ನುವುದಿರಬಾರದು. ಅವರಿಗಿರುವ ಅಧಿಕಾರ ನಿಮಗೂ ಬರಬೇಕು ಎನ್ನುವುದನ್ನು ಕ್ಲಿಯರ್ ಆಗಿ ಮೆನ್ಷನ್ ಮಾಡಿರಬೇಕು.

ಇನ್ನು ಒಂಬತ್ತನೇ ಮಾಹಿತಿ ಯಾವುದೆಂದರೆ ಆಸ್ತಿಯ ತೆರಿಗೆ ವಿದ್ಯುತ್ ಬಿಲ್ ನೀರಿನ ಟ್ಯಾಕ್ಸ್ ಇವುಗಳು ಪೆಂಡಿಂಗ್ ಇದ್ದರೆ ಆಸ್ತಿಯನ್ನುಮಾರಾಟ ಮಾಡುವವರು ಅದನ್ನು ಕ್ಲಿಯರ್ ಮಾಡಬೇಕು ಎಂಬುದನ್ನು ಮೆನ್ಶನ್ ಮಾಡಬೇಕು. ಇನ್ನು ನೀವು ಹಾಕಬೇಕಾದ ಹತ್ತನೆಯ ಮುಖ್ಯವಾದ ಮಾಹಿತಿ ಯಾವುದು ಎಂದರೆ ಕೆಲವೊಂದು ಸಾರಿ ಮನುಷ್ಯನಿಗೆ ಕಂಟ್ರೋಲ್ ಎನ್ನುವುದು ಇರುವುದಿಲ್ಲ. ಒಂದು ಸಾರಿ ಪ್ರವಾಹ ಅಥವಾಭೂಕುಸಿತ ಉಂಟಾದಾಗ ಮಾಡಿಕೊಂಡಿರುವ ಅಗ್ರಿಮೆಂಟ್ ಗೆ ಅರ್ಥ ಇರುವುದಿಲ್ಲ ಪ್ರವಾಹದ ಭೂಕುಸಿತದಿಂದಾಗಿ ಸೈಟ್ ಹಾಳಾದಾಗ ಆಸ್ತಿಯನ್ನು ಖರೀದಿಸಿರುವರನ್ನು ದೂಷಿಸುವುದಕ್ಕೆ ಆಗುವುದಿಲ್ಲ ಮಾರಿದವರನ್ನು ದೂಷಿಸುವುದಕ್ಕೆ ಆಗುವುದಿಲ್ಲ ಎಂದು ಕಂಡಿಶನ್ ಹಾಕಿಕೊಂಡಾಗ ಮಾರುವವರಿಗೂ ತೊಂದರೆ ಆಗುವುದಿಲ್ಲ ಖರೀದಿಸುವವರಿಗೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ನೋಡಿದಿರಲ್ಲ ಸ್ನೇಹಿತರೆ ಈಗ ನಿಮಗೆ ಆಸ್ತಿಯನ್ನು ಖರೀದಿ ಮಾಡುವಾಗ ಅಗ್ರಿಮೆಂಟ್ ಅನ್ನ ಮಾಡಿಕೊಳ್ಳುವಾಗ ಅಗ್ರಿಮೆಂಟ್ ಫಾರ್ ಸೇಲ್ ನಲ್ಲಿ ಯಾವೆಲ್ಲ ಮಾಹಿತಿಯನ್ನು ಮೆನ್ಷನ್ ಮಾಡಬೇಕು ಎಂಬುದು ಸರಿಯಾಗಿ ತಿಳಿದಿದೆ ಎಂದುಕೊಳ್ಳುತ್ತೇವೆ ಯಾವ ಎಲ್ಲಾ ಮಾಹಿತಿಯನ್ನು ಮೆನ್ಷನ್ ಮಾಡಿದರೆ ನಿಮ್ಮನ್ನು ನೀವು ಸೇವ್ ಮಾಡಿಕೊಳ್ಳ ಬಹುದು ಎಂಬುದು ನಿಮಗೀಗಾಗಲೇ ತಿಳಿದಿದೆ ನೀವು ಈ ರೀತಿ ಟರ್ಮ್ಸ್ ಅಂಡ್ ಕಂಡೀಷನ್ ಗಳನ್ನು ಹಾಕಿಕೊಂಡು ಅಗ್ರಿಮೆಂಟ್ ಮಾಡುವುದರಿಂದ ಕಾನೂನಿನ ಪ್ರಕಾರವಾಗಿಯೂ ನಿಮಗೆ ಪ್ರೋಟೆಕ್ಷನ್ ಸಿಗುತ್ತದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: