ಇತ್ತಿಚಿನ ದಿನಗಳಲ್ಲಿ ಬಹುತೇಕ ಜನರಿಗೆ ಕಾಡುವ ಒಂದು ಪ್ರಮುಖ ಸಮಸ್ಯೆ ಎ೦ದರೆ ದೇಹದ ತೂಕ ಹೆಚ್ಚಳ. ಕಳೆದ ಕೆಲವು ವರ್ಷಗಳಲ್ಲಿ, ಕಳಪೆ ಜೀವನಶೈಲಿ, ಒತ್ತಡ, ಅನಾರೋಗ್ಯಕರ ಆಹಾರಗಳು, ದೈಹಿಕ ನಿಷ್ಕ್ರಿಯತೆ ಮತ್ತು ನಿದ್ರೆಯ ಕೊರತೆಯಿಂದಾಗಿ ಬೊಜ್ಜು ಒಂದು ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ.

ಬಳುಕುವ ಬಳ್ಳಿಯಂತಾಗಲೂ ಸಾಧ್ಯವಾಗದಿದ್ದರೂ ಸೊಂಟದ ಸುತ್ತಲಿನ ಬೊಜ್ಜು ಕರಗಬೇಕು, ಆರಾಮಾಗಿ ಎದ್ದು ಕೂತು ಓಡಾಡಲು ಸಾಧ್ಯವಾಗಬೇಕು  ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಅದರಲ್ಲೂ 40 ವರ್ಷವಾದ ನಂತರ ಮಹಿಳೆಯರ ಹಾರ್ಮೋನ್ ಗಳಲ್ಲಿಯೂ ವ್ಯತ್ಯಾಸ ಆಗುವುದರಿಂದ ಸೊಂಟದ ಸುತ್ತಲೂ ಬೊಜ್ಜು ಹೆಚ್ಚಾಗುತ್ತದೆ. ಬೊಜ್ಜಿನಿಂದ ಡಯಾಬಿಟೀಸ್, ಕೆಲವು ರೀತಿಯ ಕ್ಯಾನ್ಸರ್ ನಂತಹ ಸಮಸ್ಯೆಗಳು ಶುರುವಾಗುತ್ತವೆ.

ತೂಕ ಕಳೆದುಕೊಳ್ಳಲು ನೀವು ಬಹಳಷ್ಟು ಸಲ ಪ್ರಯತ್ನಿಸಿರಬಹುದು, ಆದರೆ ತೂಕ ಕಳೆದುಕೊಳ್ಳಬೇಕೆಂದು ವ್ಯಾಯಾಮ ಔಷಧಿ ಸೇರಿಸಿದರೂ ನಿಮ್ಮ ತೂಕ ಕಡಿಮೆಯಾಗುತ್ತಿಲ್ಲವೆಂದಾದರೆ ನೀವು ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿಲ್ಲವೆಂದು ಹೇಳಬಹುದು. ಹೌದು ಹೆಚ್ಚಿನವರಿಗೆ ಕಡಿಮೆ ಕ್ಯಾಲೋರಿ ಇರುವಂತಹ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ. ಇಂತಹ ಸಮಯದಲ್ಲಿ ಎಷ್ಟೇ ವ್ಯಾಯಾಮ ಮಾಡಿದರೂ ತೂಕ ಇಳಿಯುವುದಿಲ್ಲಾ

ಇದಕ್ಕಾಗಿ ಮನೆಯಲ್ಲಿ ತಯಾರಿಸಬಹುದಾದ ಕೆಲವೊಂದು ಪಾನೀಯಗಳು ಇವೆ. ಇದು ದೇಹವನ್ನು ನಿರ್ವಿಣಷಗೊಳಿಸುವುದು. ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುವುದು. ಇದಕ್ಕೆ ನೀವು ಹೆಚ್ಚು ಶ್ರಮಪಡೆಬೇಕಿಲ್ಲ. ಮನೆಯಲ್ಲಿ ಪಾನೀಯಗಳನ್ನು ತಯಾರಿಸುವುದು ಹೇಗೆ ಎನ್ನುವುದು ತಿಳಿಯೋಣ.

ಒಂದು ಬೌಲ್ ಗೆ ಎರಡು ಚಮಚ ಇಸಬಗೋಲ್  ಪೌಡರ್ ಅನ್ನು ಹಾಕಿಕೊಳ್ಳಬೇಕು.(ಪತಂಜಲಿ ಕಂಪನಿಯ ಇಸಬಗೋಲ್) ಇದಕ್ಕೆ ಎರಡು ಚಮಚ ಜೀರಿಗೆ ಪುಡಿ ಹಾಕಿಕೊಂಡು ನಂತರ ಮಿಕ್ಸಿಗೆ ಹಾಕಿದ ಮೆಂತೆ ಪೌಡರ್ ಅನ್ನು ಒಂದು ಚಮಚ ಹಾಕಿಕೊಳ್ಳಬೇಕು. ಇದಾದ ಮೇಲೆ ಮಿಕ್ಸಿಗೆ ಹಾಕಿದ ಸೋಂಪು ಕಾಳಿನ ಪೌಡರ್ ಅನ್ನು ಎರಡು ಚಮಚ ಹಾಕಿ ನಂತರ ಎರಡು ಚಮಚ ತ್ರಿಫಲಚೂರ್ಣವನ್ನು ಹಾಕಿ ಪೌಡರ್ ಅನ್ನು ತಯಾರಿ ಮಾಡಿಕೊಳ್ಳಬೇಕು.

ತಯಾರಿಸಿದ ಪೌಡರ್ ನ ಗಾಜಿನ ಬಾಟಲಿ ಗೆ ಹಾಕಿಟ್ಟು ಕೊಳ್ಳಬಹುದು. ಬೆಳಿಗ್ಗೆ ತಿಂಡಿಯ ನಂತರ ಮತ್ತು ಊಟದ ನಂತರ 8-10 ನಿಮಿಷಗಳ ಬಳಿಕ ಈ ಪೌಡರ್ ಅನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯಬೇಕು. ಹೀಗೆ ಮಾಡಿದರೆ ನಿಮ್ಮ ದೇಹದ ತೂಕವನ್ನು ಬೇಗನೇ ಕಡಿಮೆ ಮಾಡಿಕೊಳ್ಳಬಹುದು

By admin

Leave a Reply

Your email address will not be published. Required fields are marked *

error: Content is protected !!
Footer code: