ಫುಡ್ ಪಾಯ್ಸನ್ ಆದಾಗ ತಕ್ಷಣ ಏನ್ ಮಾಡಬೇಕು ತಿಳಿದುಕೊಳ್ಳಿ

0

ಫುಡ್ ಪಾಯ್ಸನ್ ಆದಾಗ ಏನು ಮಾಡಬೇಕು ಸಾಮಾನ್ಯವಾಗಿ ಫುಡ್ ಪಾಯ್ಸನ್ ಆದಾಗ ವೈದ್ಯರ ಬಳಿ ಹೋಗುವುದು ಮಾಮೂಲು ಆದರೆ ಫುಡ್ ಪಾಯಿಸನ್ ಆದಾಗ ಮನೆಮದ್ದುಗಳನ್ನು ಬಳಸುವುದರಿಂದ ಒಳ್ಳೆಯ ಪರಿಣಾಮವನ್ನು ಕಾಣಬಹುದಾಗಿದೆ ತಕ್ಷಣವೇ ಪರಿಹಾರ ಕೂಡ ಸಿಗುತ್ತದೆ. ಮಳೆಗಾಲದಲ್ಲಿ ತಂಪಾದ ಹವಾಮಾನ ಮತ್ತು ಮನಸ್ಸಿಗೆ ಮುದ ನೀಡುವ ವಾತಾವರಣ ಇದ್ದಾಗ ಏನೇನೋ ತಿನ್ನಬೇಕೆನಿಸುತ್ತದೆ ಬಿಸಿಬಿಸಿಯಾಗಿ ಪಾನಿಪುರಿ ಮಸಾಲಾಪುರಿ ಸಮೋಸ ಹೀಗೆ ಏನೇನು ತಿನ್ನಬೇಕು ಎಂದು ಆಸೆಯಾಗುತ್ತದೆ ತಿನ್ನುತ್ತಾರೆ. ಇನ್ನು ಮಳೆಗಾಲದಲ್ಲಿ ಸೊಳ್ಳೆ ನೊಣಗಳ ಹಾವಳಿ ಕೂಡ ಹೆಚ್ಚಾಗಿರುತ್ತದೆ ಇವುಗಳು ನೀವು ಸೇವಿಸುವ ಬಿಸಿ ಆಹಾರ ಖಾದ್ಯಗಳ ಮೇಲೆ ಮೇಲೆ ಕುಳಿತುಕೊಳ್ಳುತ್ತವೆ ಇದರಿಂದ ನಿಮಗೆ ನಾನಾ ಬಗೆಯ ಕಾಯಿಲೆಗಳು ಹರಡುತ್ತವೆ.

ಇನ್ನು ತಲೆನೋವು ಶೀತ ಜ್ವರ ಕೆಮ್ಮು ಈ ರೋಗಗಳು ನಿಮ್ಮನ್ನು ಕಾಡುವುದು ಖಂಡಿತ. ಹೀಗಾದಾಗ ಆಗಾಗ ವೈದ್ಯರನ್ನು ಕಾಣುವ ಬದಲು ಮನೆಮದ್ದನ್ನು ಪ್ರಯತ್ನಿಸಬಹುದು ನಿಮ್ಮ ಅಡುಗೆಮನೆಯಲ್ಲಿ ದೊರೆಯುವ ಈ ಸಸ್ಯಗಳನ್ನು ಬಳಸಿಕೊಂಡು ಮನೆಯಲ್ಲಿಯೇ ಸುಲಭವಾಗಿ ಔಷಧಿಗಳನ್ನು ತಯಾರಿಸಿಕೊಳ್ಳಬಹುದು ಇದರಿಂದ ಫುಡ್ ಪಾಯ್ಸನ್ ಗೆ ಔಷಧಿಯನ್ನು ಕಂಡುಕೊಳ್ಳಬಹುದು. ಆ ಮನೆಮದ್ದುಗಳು ಯಾವುದು ಎಂದರೆ ಮೊದಲನೆಯದಾಗಿ ಶುಂಠಿ ಹಲವಾರು ಬಗೆಯ ರೋಗಗಳನ್ನು ಶುಂಠಿ ನಿವಾರಿಸುತ್ತದೆ ಫುಡ್ ಪಾಯ್ಸನ್ ನನ್ನು ತಡೆಗಟ್ಟಲು ಇದು ಪರಿಣಾಮಕಾರಿಯಾಗಿದೆ. ಜೀರ್ಣಕ್ರಿಯೆಯನ್ನು ಇದು ಸುಧಾರಿಸುತ್ತದೆ ನಿಮ್ಮ ಹೊಟ್ಟೆಯನ್ನು ಹಗುರವಾಗಿಸುತ್ತದೆ ಮತ್ತು ವಾಕರಿಕೆ ವಾಂತಿ ಮೋದಲಾದ ಕಾಯಿಲೆಗಳನ್ನು ಗುಣಪಡಿಸುತ್ತದೆ.

ನಿಮ್ಮ ಚಹಾ ಅಥವಾ ಜ್ಯೂಸ್ ನಲ್ಲಿ ಶುಂಠಿಯನ್ನು ಬಳಸಿಕೊಳ್ಳಿ ಶುಂಠಿಯನ್ನು ಜಗಿದು ಅದರ ರಸವನ್ನು ಕುಡಿದರೆ ಸರಿಹೋಗುತ್ತದೆ. ಎರಡನೆಯದಾಗಿ ತುಳಸಿ ಇದು ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೋಗಲಾಡಿಸುವುದರ ಜೊತೆಗೆ ಉತ್ಕರ್ಷಣ ನಿರೋದವಾಗಿ ಕೆಲಸ ಮಾಡುತ್ತದೆ. ಯಾವುದೇ ರೀತಿಯ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ಬೆಳೆಯುವುದನ್ನು ಇದು ತಡೆಯುತ್ತದೆ ಇದನ್ನ ಜ್ಯೂಸ್ ರೂಪದಲ್ಲಿ ಸೇವಿಸಬಹುದಾಗಿದೆ ಅಂತೆಯೇ ಎಣ್ಣೆಯನ್ನಾಗಿ ದಿನಪೂರ್ತಿ ಸೇವಿಸಬಹುದಾಗಿದೆ. ಇನ್ನು ಏಲಕ್ಕಿ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವ ಏಲಕ್ಕಿಯೂ ವಾಕರಿಕೆ ಫುಡ್ ಪಾಯ್ಸನ್ ಮೊದಲಾದ ರೋಗಲಕ್ಷಣವನ್ನು ಹೋಗಲಾಡಿಸುತ್ತದೆ.

ಇನ್ನು ಬೆಳ್ಳುಳ್ಳಿ ರೋಗನಿರೋಧಕ ಆಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿದೆ ಇದು ಫುಡ್ ಪಾಯ್ಸನಿಂಗ್ ಮಾಡುವ ಯಾವುದೇ ರೋಗಲಕ್ಷಣವನ್ನು ಹೋಗಲಾಡಿಸುತ್ತದೆ. ಇನ್ನು ಲಿಂಬೆ ಹಣ್ಣು ಫುಡ್ ಪಾಯ್ಸನ್ ನಿಂದ ಉಂಟಾಗುವ ಯಾವುದೇ ಅಪಾಯವನ್ನು ನಿಂಬೆಯು ನಿವಾರಿಸುತ್ತದೆ. ಇದು ವೈರಸ್ಗಳನ್ನು ಕೊಲ್ಲುತ್ತದೆ ಇದನ್ನ ಜ್ಯೂಸ್ ರೂಪದಲ್ಲಿ ನಿತ್ಯವೂ ಸೇವನೆ ಮಾಡಿದರೆ ಒಳ್ಳೆಯದು ಇನ್ನು ಜೀರಿಗೆ ಹೊಟ್ಟೆಯ ಯಾವುದೇ ನೋವನ್ನು ಇದು ಉಪಚರಿಸುತ್ತದೆ ನಿಮ್ಮ ನಿತ್ಯ ಜೀವನದ ಆಹಾರದಲ್ಲಿ ಇದನ್ನು ಬಳಸಬಹುದು ಒಂದು ಕಪ್ ನೀರಿನಲ್ಲಿ ಇದನ್ನು ಕೂದಿಸಿಕೊಂಡು ಕುಡಿಯಬಹುದು.

ಇನ್ನು ಕೊತ್ತಂಬರಿ ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಫುಡ್ ಪಾಯ್ಸನ್ ಉಂಟು ಮಾಡುವ ಯಾವುದೇ ತೊಂದರೆಯನ್ನು ಇದು ನಿವಾರಿಸುತ್ತದೆ. ಇದನ್ನು ದೈನಂದಿನ ಆಹಾರದಲ್ಲಿ ಬಳಸುವುದು ಉತ್ತಮ ಉಪಾಯವಾಗಿದೆ. ಇದನ್ನು ಎಣ್ಣೆಯ ರೂಪದಲ್ಲಿ ನಿಮ್ಮ ಖಾದ್ಯ ತಯಾರಿಕೆಯಲ್ಲಿಯೂ ಕೂಡ ಬಳಸಿಕೊಳ್ಳಬಹುದು. ಇನ್ನು ಮೆಂತೆ ಮತ್ತು ಮೊಸರು ಇವು ಬ್ಯಾಕ್ಟೀರಿಯವನ್ನು ಹೊಡೆದು ಹಾಕುವುದಲ್ಲದೆ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ. ಒಂದು ಚಮಚ ಮೆಂತ್ಯೆಯನ್ನು ಮೊಸರಿನಲ್ಲಿ ಹಾಕಿಕೊಂಡು ಸೇವಿಸುವುದರಿಂದ ಹೊಟ್ಟೆ ನೋವು ಶೀಘ್ರವಾಗಿ ಪರಿಹಾರವಾಗುತ್ತದೆ. ಈ ರೀತಿಯಾಗಿ ಫುಡ್ ಪಾಯ್ಸನ್ ಆದಾಗ ಹೊಟ್ಟೆ ನೋವು ಕಾಣಿಸಿಕೊಂಡಾಗ ಈ ರೀತಿಯ ಮನೆಮದ್ದುಗಳನ್ನು ಬಳಸುವುದರಿಂದ ಒಳ್ಳೆಯ ಪರಿಣಾಮವನ್ನು ಕಂಡುಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!