WhatsApp Group Join Now
Telegram Group Join Now

ಕಣ್ಣು ಬೆಳಕಿಗೆ ಪ್ರತಿಕ್ರಿಯಿಸುವ ವಿವಿಧೋದ್ದೇಶಗಳುಳ್ಳ ಅತ್ಯಮೂಲ್ಯ ಅಂಗವಾಗಿದೆ. ಪ್ರಜ್ಞಾತ್ಮಕ ಜ್ಞಾನೇಂದ್ರಿಯವಾಗಿರುವ ಕಣ್ಣು ದೃಷ್ಟಿಗೆ ಅವಕಾಶ ನೀಡುತ್ತದೆ. ಅಕ್ಷಿಪಟದಲ್ಲಿರುವ ರಾಡ್ ಅಂದರೆ ಕಣ್ಣಿನ ಪಾಪೆಯ ದಂಡ ಮತ್ತು ಕೋನ್ ಅಂದರೆ ಅಕ್ಷಿಪಟದಲ್ಲಿರುವ ಶಂಕುವಿನಾಕಾರದ ರಚನೆ, ಕೋಶಗಳು, ವಿವಿಧ ಬಣ್ಣಗಳು ಮತ್ತು ಅವುಗಳ ಗಾಢತೆಯನ್ನು ಗ್ರಹಿಸುವುದು ಸೇರಿದಂತೆ ಜಾಗೃತ ಬೆಳಕಿನ ಗ್ರಹಿಕೆ ಮತ್ತು ದೃಷ್ಟಿಗೆ ಅವಕಾಶ ಕಲ್ಪಿಸುತ್ತದೆ. ಮಾನವನ ಕಣ್ಣು ಸುಮಾರು 10 ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು. ಆದ್ದರಿಂದ ನಾವು ಇಲ್ಲಿ ಕಣ್ಣಿನ ದೃಷ್ಟಿ ಕೊರತೆಗೆ ಸರಳವಾಗಿ ಮನೆಮದ್ದನ್ನು ಮಾಡಿಕೊಳ್ಳುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಾಮಾನ್ಯವಾಗಿ ಇತರ ಸಸ್ತನಿಗಳ ಕಣ್ಣುಗಳ ರೀತಿಯಲ್ಲಿ ಮಾನವನ ಕಣ್ಣಿನ ಅಕ್ಷಿಪಟದಲ್ಲಿರುವ ಚಿತ್ರವನ್ನು ಮೂಡಿಸದ ದ್ಯುತಿಸಂವೇದಿ ನರಗ್ರಂಥಿ ಕೋಶಗಳು, ಬೆಳಕಿನ ಸಂಕೇತಗಳನ್ನು ಸ್ವೀಕರಿಸುತ್ತದೆ. ಇದು ಪಾಪೆಯ ಗಾತ್ರದ ಹೊಂದಾಣಿಕೆ, ಮೆಲಟೊನಿನ್ ಎಂಬ ಹಾರ್ಮೋನ್ ನ ನಿಯಂತ್ರಣ ಮತ್ತು ನಿಗ್ರಹ ಹಾಗೂ ಜೈವಿಕ ಗಡಿಯಾರದ ಹೊಂದಾಣಿಕೆ ಮೇಲೆ ಪ್ರಭಾವ ಬೀರುತ್ತದೆ. ಕಣ್ಣು ಮನುಷ್ಯನ ಸೂಕ್ಷ್ಮ ಅಂಗವಾಗಿದೆ.

ಕಣ್ಣಿನ ದೃಷ್ಟಿ ದೋಷ ಸಮಸ್ಯೆಗಳು ಮನುಷ್ಯನ ಜೀವನಕ್ಕೆ ತುಂಬಾ ಸಮಸ್ಯೆಯನ್ನು ಉಂಟುಮಾಡುತ್ತದೆ. ಈಗಿನ ಜನಸಮೂಹದಲ್ಲಿ ಪ್ರತಿಯೊಬ್ಬರಿಗೂ ಕಣ್ಣಿನ ದೃಷ್ಟಿ ಕೊರತೆಯ ಸಮಸ್ಯೆಯು ಕಂಡುಬರುತ್ತದೆ. ಕಣ್ಣಿನ ದೃಷ್ಟಿ ಕೊರತೆಗೆ ಸರಳವಾಗಿ ಮನೆಮದ್ದನ್ನು ಮಾಡಿಕೊಳ್ಳಬಹುದು. ಇದಕ್ಕೆ ಮೊದಲನೆಯದಾಗಿ 50 ಗ್ರಾಂ ಗೋಡಂಬಿ, 50 ಗ್ರಾಂ ಬಡೆಸೊಪ್ಪು ಮತ್ತು 50 ಗ್ರಾಂ ಸಕ್ಕರೆಯನ್ನು ತೆಗೆದುಕೊಳ್ಳಬೇಕು. ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸರ್ ಜಾರಿಗೆ ಹಾಕಿ ಅದನ್ನು ಪುಡಿ ಮಾಡಿಕೊಳ್ಳಬೇಕು.

ಈ ಪುಡಿಯನ್ನು ಪ್ರತಿನಿತ್ಯ ರಾತ್ರಿ ಮಲಗುವ ಮುಂಚೆ ಹಾಲಿಗೆ ಒಂದು ಚಮಚ ಹಾಕಿ ಸೇವಿಸಬೇಕು. ಮಕ್ಕಳಿಗೆ ಕೊಡುವುದಾದರೆ ಅರ್ಧ ಚಮಚವನ್ನು ಹಾಕಿ ಕೊಡಬೇಕು.ಇದನ್ನು ಸೇವಿಸಿದ 2 ಗಂಟೆಯವರೆಗೆ ಏನನ್ನೂ ಸೇವಿಸಬಾರದು. ಐದು ದಿನಗಳವರೆಗೆ ಇದನ್ನು ಸೇವಿಸಿದರೆ ಒಳ್ಳೆಯ ಪರಿಣಾಮ ತಿಳಿಯುತ್ತದೆ. ಇದರಿಂದ ದೃಷ್ಟಿ ಇರೋ ಕ್ಷಮತೆಯು ಹೆಚ್ಚಾಗುತ್ತದೆ. ಇದನ್ನು ಯಾರು ಬೇಕಾದರೂ ಮನೆಯಲ್ಲಿಯೇ ತಯಾರಿಸಿಕೊಂಡು ಕಣ್ಣಿನ ದೃಷ್ಟಿ ಕೊರತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: