WhatsApp Group Join Now
Telegram Group Join Now

ಬೇಧಿ ಸಮಸ್ಯೆ ಕಾಡಿದರೆ ಅದರಿಂದ ಹೊರಬರುವುದು ಯಾವಾಗಪ್ಪ ಎಂದು ಮನದಲ್ಲಿ ಯೋಚಿಸುತ್ತಿರುತ್ತೆವೆ, ಪದೇ ಪದೇ ಶೌಚಾಲಯಕ್ಕೆ ಹೋಗುವುದು, ಹೋದರೂ ಮತ್ತೆ ಮತ್ತೆ ಬರುತ್ತಿದೆಯಾ ಎನ್ನುವಂತೆ ಆಗುವುದು ಭೇದಿ ಉಂಟು ಮಾಡುವ ಸಮಸ್ಯೆಗಳು.. ಭೇದಿಗೆ ಮುಖ್ಯ ಕಾರಣ ಅತಿಸಾರ. ಬೇಧಿ ಶುರುವಾದರೆ ಆಗ ಶೌಚಾಲಯಕ್ಕೆ ಐದಾರು ಸಲವಾದರು ಹೋಗಬೇಕಾಗುತ್ತದೆ. ಮಲಾವು ತುಂಬಾ ನೀರಾಗಿ ಹೋಗುವುದು ಮಾತ್ರವಲ್ಲದೆ ಕೆಲವೊಂದು ಸಲ ಹೊಟ್ಟೆಯಲ್ಲಿ ನೋವು ಉಬ್ಬರ, ಜ್ವರ ಮತ್ತು ನಿಶ್ಯಕ್ತಿ ಕಾಡಬಹುದು. ಭೇದಿ ಅಥಾವ ಲೂಸ್ ಮೋಷನ್ ಎಂದು ಹೆಚ್ಚಾಗಿ ಜನರು ಗುರುತಿಸುವ ಅತಿಸಾರ ಹೆಸರೇ ಸೂಚಿಸುವಂತೆ ದೇಹದಿಂದ ಸಾರವನ್ನು ಹೊರ ಹಾಕುವ ಕಾಯಿಲೆಯಾಗಿದೆ.

ನಾವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಅತಿಸಾರದ  ಅನುಭವಕ್ಕೆ ಒಳಗಾಗಿಯೇ ಇದ್ದೇವೆ. ಹಾಗೂ ಇದರಿಂದಾಗಿ ಎದುರಾಗುವ ಸುಸ್ತು ಮತ್ತು ನೋವು ಒಂದೆಡೆಯಾದರೆ ಇದರಿಂದಾಗಿ ಬಾಧೆಗೊಳ್ಳುವ ಅಥವಾ ಸೂಕ್ತ ಸಮಯದಲ್ಲಿ ಶೌಚಾಲಯ ಸಿಗದೆ ಹೋಗುವ ಸಂದರ್ಭದಲ್ಲಿ ಎದುರಾಗುವ ಮಾನಸಿಕ ಮತ್ತು ದೈಹಿಕ ಪೀಡೆಯನ್ನು ಮರೆಯಲಾಗದು. ಸತತವಾಗಿ ನೀರಿನಿಂದ ಕೂಡಿದ ಮಲ ವಿಸರ್ಜನೆ, ಹೊಟ್ಟೆ ಉಬ್ಬರಿಕೆ, ವಾಕರಿಕೆ ಹಾಗೂ ಕೆಳಹೊಟ್ಟೆಯಲ್ಲಿ ಸೆಡೆತ ಮತ್ತು ನೋವು ಕಾಣಿಸಿಕೊಳ್ಳುವುದು, ಇದರೊಂದಿಗೆ ತಲೆ ಸುತ್ತುವುದು, ಸುಸ್ತು ಕೂಡ ಆವರಿಸಬಹುದು, ಸಾಮನ್ಯ ಕಾರಣದಿಂದ ಎದುರಾಗುವ ಅತಿಸಾರ ಕಡಿಮೆಗೊಳಿಸಲು ಈ ಕೆಳಗೆ ತಿಳಿಸಿದ ಮನೆ ಮದ್ದುಗಳನ್ನು ಬಳಸಿ.

ಮೊಸರು – ಒಂದು ಬೌಲ್ ಮೊಸರಿಗೆ ಎರಡು ಚಮಚ ಮೆಂತೆ ಪುಡಿಯನ್ನು ಮತ್ತು ಎರಡು ಚಮಚ ಜೀರಿಗೆ ಪುಡಿಯನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ತಿಂದರೆ ಬೇಗ ಕಮ್ಮಿ ಆಗುತ್ತದೆ.   ಲಿಂಬೆ – ಲಿಂಬೆ ರಸವೂ ಅತಿ ಸಾರವನ್ನು ನಿಲ್ಲಿಸುವ ಗುಣ ಹೊಂದಿದೆ. ಒಂದು ಲೋಟ ನೀರಿಗೆ ಅರ್ಧ ಲಿಂಬೆ ಹೊಳಿನ ರಸವನ್ನು ಹಾಕಿ ಸ್ವಲ್ಪ ಸಕ್ಕರೆ ಸ್ವಲ್ಪ ಉಪ್ಪು ಬೆರೆಸಿ  ಎರಡು ಬಾರಿ ಕುಡಿದರೆ ಬೇಧಿ ಬೇಗ ಕಡಿಮೆ ಆಗುತ್ತದೆ.

ಎಳನೀರು – ನವಿರಾದ ಸಿಹಿ, ನೀರಿನಷ್ಟೆ ಗಾಢವಾದ ಎಳನೀರೂ ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಮೂತ್ರ ವನ್ನು ಸ್ವಚ್ಛ ಗೊಳಿಸಲು ಮತ್ತು ದೇಹದಲ್ಲಿ ನೀರು ಮತ್ತು ಶಕ್ತಿಯ ಕೊರತೆಯಾದಾಗ ಕುಡಿಯಬಹುದಾದ ಅತ್ಯುತ್ತಮ ದ್ರವ ಎಂದರೆ ಎಳನೀರು. ಕಳೆದು ಕೊಂಡಿರುವ ವಿದ್ಯುದ್ವಿಚ್ಛೇದ್ಯಗಳನ್ನು ಮರು ಹೊಂದಿಸುವುದು ಮಾತ್ರವಲ್ಲದೆ ಹೊಟ್ಟೆಯಲ್ಲಿ  ಪಿ ಎಚ್ ಮಟ್ಟವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಶಾಂತವಾಗಿಡುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: