ಅಡುಗೆಗೆ ಅಷ್ಟೇ ಅಲ್ಲ ಆರೋಗ್ಯಕ್ಕೆ ಹುಣಸೆಹಣ್ಣು ಎಷ್ಟೊಂದು ಲಾಭ ನೀಡುತ್ತೆ ತಿಳಿಯಿರಿ

0

ಶಾಲೆಗೆ ಹೋಗುವ ದಿನಗಳಲ್ಲಿ ಹುಣಸೆ ಮರ ಹತ್ತಿ ಹುಣಸೆ ಹಣ್ಣನ್ನು ಕಿತ್ತು ತಿಂದ ನೆನಪು ಹೆಚ್ಚಿನ ಜನರಿಗೆ ಇರಬಹುದು. ಹುಣಸೆಹಣ್ಣನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುವುದಂತು ನಿಜ. ಇಂತಹ ಹುಣಸೆಹಣ್ಣು ನಮ್ಮ ಆರೋಗ್ಯಕ್ಕೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಹಾಗಾದರೆ ಹುಣಸೆಹಣ್ಣಿನ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹುಣಸೆಹಣ್ಣನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತದೆ, ಕೆಲವರಿಗಂತೂ ಹುಣಸೆಹಣ್ಣು ಎಂದು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಹುಣಸೆ ಮರ ಮುಪ್ಪಾದರೂ ಅದರ ಹುಳಿ ಮಾತ್ರ ಕಡಿಮೆಯಾಗುವುದಿಲ್ಲ ಎಂದು ಹೇಳುತ್ತಾರೆ. ಹುಣಸೆಹಣ್ಣಿನ ಸೇವನೆಯಿಂದ ಆರೋಗ್ಯದ ಪ್ರಯೋಜನಗಳು ಕೂಡ ಹೆಚ್ಚಾಗಿವೆ. ಸಾಂಬಾರ್, ರಸಂ, ಚಟ್ನಿ, ಬಜ್ಜಿ ಮುಂತಾದ ಅಡುಗೆಗೆ ಬಳಸುತ್ತಾರೆ ಏಕೆಂದರೆ ಹುಣಸೆಹಣ್ಣು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ ಅಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಜೊತೆಗೆ ಹೃದಯ ಮತ್ತು ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ತಿಂದ ಆಹಾರ ಅಜೀರ್ಣವಾದರೆ ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ ಇಂಥಹ ಸಮಯದಲ್ಲಿ ನಾರಿನಂಶ ಇರುವ ಆಹಾರವನ್ನು ಸೇವಿಸಬೇಕು ಹಾಗೂ ಕ್ರಮಬದ್ಧ ಆಹಾರವನ್ನು ಸೇವಿಸಬೇಕು.

ದಿನದ ಆಹಾರದಲ್ಲಿ ಹುಣಸೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಲಭವಾಗಿ ನಡೆಯುತ್ತದೆ. ದೇಹದೊಳಗಿನ ಕರುಳಿನ ಚಲನೆ ಉತ್ತಮಗೊಂಡು ದೇಹದಿಂದ ವಿಷ ತ್ಯಾಜ್ಯವನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ. ಹೊಟ್ಟೆಯ ಪದರದ ಮೇಲೆ ಅಲ್ಲಲ್ಲಿ ಉಂಟಾಗುವ ಅಲ್ಸರ್ ಸಮಸ್ಯೆಯನ್ನು ದೂರ ಮಾಡಿ ಇನ್ನಿತರ ಉರಿಯೂತ ಸಮಸ್ಯೆಯನ್ನು ನಿವಾರಿಸುತ್ತದೆ. ಹಣ್ಣಿನಲ್ಲಿ ಅಧಿಕ ನಾರಿನಂಶ ಇರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ರಕ್ತ ಸಂಚಾರವನ್ನು ಸುಗಮಗೊಳಿಸಿ ಹೃದಯ ಬಡಿತ ಸುಗಮಗೊಳಿಸುತ್ತದೆ. ಚರ್ಮದಲ್ಲಿನ ಕಲ್ಮಶ, ಕೊಳೆಯನ್ನು ತೆಗೆಯಲು ಹುಣಸೆ ಹುಳಿಯನ್ನು ಸೇವಿಸಬೇಕು.

ಒಂದು ಚಮಚ ಹುಣಸೆ ಹುಳಿ ಕಲ್ಲುಪ್ಪು ಸೇರಿಸಿ ಅದಕ್ಕೆ ಒಂದು ಚಮಚ ಮೊಸರು ಅಥವಾ ಹಾಲಿನ ಕೆನೆ ಹಾಕಿ ಪೇಸ್ಟ್ ಮಾಡಬೇಕು ಎಣ್ಣೆಯುಕ್ತ ಚರ್ಮದವರು ಮೊಸರು ಬಳಸಬೇಕು, ಒಣ ಚರ್ಮದವರು ಹಾಲಿನ ಕೆನೆ ಬಳಸಬೇಕು. ಈ ಪೇಸ್ಟ್ ಇಂದ ಮುಖವನ್ನು ಸ್ಕ್ರಬ್ ಮಾಡಿ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಬೇಕು. ಹುಣಸೆ ಹುಳಿಯಲ್ಲರುವ ವಿಟಮಿನ್ ಸಿ, ವಿಟಮಿನ್ ಬಿ ಚರ್ಮದಲ್ಲಿರುವ ಸತ್ತ ಕೋಶಗಳನ್ನು ತೆಗೆಯುವುದರೊಂದಿಗೆ ಚರ್ಮವನ್ನು ಕಾಂತಿಯುಕ್ತವಾಗಿಸುತ್ತದೆ.

ದೇಹದ ಪ್ರಮುಖ ಅಂಗಗಳಲ್ಲಿ ಪ್ರಮುಖವಾದ ಅಂಗ ಎಂದರೆ ಕಣ್ಣುಗಳು ಇತರೆ ಅಂಗಗಳಿಗೆ ಹೋಲಿಸಿದರೆ ಕಣ್ಣುಗಳು ಸೂಕ್ಷ್ಮ ಅಂಗವಾಗಿದೆ. ಮುಖದ ಸೌಂದರ್ಯದಲ್ಲಿ ಕಣ್ಣುಗಳ ಪಾತ್ರ ದೊಡ್ಡದು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಕಣ್ಣು ನಿರಂತರವಾಗಿ ಕೆಲಸ ಮಾಡುತ್ತದೆ. ಹುಣಸೆಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಹುಣಸೆಹಣ್ಣನ್ನು ಅತಿಯಾಗಿ ಸೇವಿಸಬಾರದು. ಈ ಮಾಹಿತಿ ಆರೋಗ್ಯಕ್ಕೆ ಉತ್ತಮ ಸಲಹೆಯಾಗಿದ್ದು ನೀವು ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿ.

Leave A Reply

Your email address will not be published.

error: Content is protected !!