ಸಕ್ಕರೆಕಾಯಿಲೆ ಭ’ಯದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಈ ಮಾಹಿತಿ ತಿಳಿದುಕೊಳ್ಳಿ

0

ಕೆಲವು ಆಹಾರದ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ ಇನ್ನು ಕೆಲವು ಆಹಾರ ನೋಡಲು ದೊಡ್ಡ ಪ್ರಮಾಣದ ಆಹಾರದಂತೆ ಅನಿಸದಿದ್ದರೂ ಆರೋಗ್ಯಕರವಾಗಿ ಹೆಚ್ಚಿನ ಪ್ರಯೋಜನಗಳನ್ನು ಹೊಂದಿರುತ್ತದೆ. ಅಂತಹ ಆಹಾರದಲ್ಲಿ ಓಟ್ಸ್ ಒಂದು ಪ್ರಮುಖ ಆಹಾರವಾಗಿದೆ. ಹಾಗಾದರೆ ಓಟ್ಸ್ ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ.

ಕೆಲವು ಆಹಾರದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಆಹಾರವನ್ನು ಸೇವಿಸುವುದಿಲ್ಲ. ಹುರುಳಿ ಕಾಳುಗಳನ್ನು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಬೇಯಿಸಿ ಹಸುಗಳಿಗೆ ಕೊಡುತ್ತಾರೆ. ಹಸುಗಳಿಗೆ ಮಾತ್ರ ಈ ಹುರುಳಿಕಾಳು ಸೀಮಿತ ಎಂದು ಯಾರೂ ಇದನ್ನು ಸೇವಿಸುವುದಿಲ್ಲ. ಹುರುಳಿಕಾಳಿನಷ್ಟು ಪೌಷ್ಟಿಕತೆ ಹಾಗೂ ಅಗ್ಗದ ದ್ವಿದಳಧಾನ್ಯ ಇನ್ನೊಂದಿಲ್ಲ. ಅದರಂತೆ ಓಟ್ಸ್ ಕೂಡ ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಓಟ್ಸ್ ನ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಜಗತ್ತಿಗೆ ತಿಳಿದ ತಕ್ಷಣ ಕೆಲವು ದೇಶಗಳು ಓಟ್ಸ್ ಅನ್ನು ತಮ್ಮ ದಿನನಿತ್ಯದ ಆಹಾರ ಕ್ರಮಗಳಲ್ಲಿ ಸೇರಿಸಿಕೊಂಡರು.

ಸಿದ್ಧ ರೂಪದ ರವೆಯನ್ನು ನೇರವಾಗಿ ಬಿಸಿ ಹಾಲಿನಲ್ಲಿ ಮಿಶ್ರಣ ಮಾಡಿ ಬೇಕಾದರೆ ಸ್ವಲ್ಪ ಜೇನುತುಪ್ಪ ಸೇರಿಸಿ ಉಪಹಾರದ ರೂಪದಲ್ಲಿ ಸೇವಿಸಿದರೆ ಹೊಟ್ಟೆ ತುಂಬುತ್ತದೆ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಿದೆ. ದೇಹದ ತೂಕವನ್ನು ಇಳಿಸಿಕೊಂಡು ಫಿಟ್ನೆಸ್ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಓಟ್ಸ್ ಸೇವಿಸಬೇಕು. ಓಟ್ಸ್ ತೂಕ ಇಳಿಸುವವರಿಗೆ ಬೆಸ್ಟ್ ಆಹಾರವಾಗಿದೆ. ಓಟ್ಸ್ ನಲ್ಲಿ ಅಧಿಕ ಪ್ರಮಾಣದ ಕರಗದ ನಾರಿನಂಶವಿದೆ ಇದರಿಂದ ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯನ್ನು ತಡೆಯುತ್ತದೆ. ಕರಗದ ನಾರಿನಂಶವನ್ನು ಜೀರ್ಣಿಸಿಕೊಳ್ಳಲು ದೇಹ ಕೊಬ್ಬಿನಂಶವನ್ನು ಉಪಯೋಗಿಸಿಕೊಳ್ಳುತ್ತದೆ.

ಹಿಂದಿನ ಕಾಲದಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಕೊಲೆಸ್ಟ್ರಾಲ್ ಕಂಡುಬರುತ್ತಿತ್ತು ಆದರೆ ಈಗಿನ ಯುವ ಜನರ ಜೀವನ ಶೈಲಿಯಿಂದಾಗಿ, ಆಹಾರ ಪದ್ಧತಿಯಿಂದಾಗಿ ಕೊಲೆಸ್ಟ್ರಾಲ್ ಸಮಸ್ಯೆ ಯುವಜನರಲ್ಲಿ ಕಂಡುಬರುತ್ತದೆ. ಪ್ರತಿದಿನ ಬೆಳಗ್ಗೆ ಓಟ್ಸ್ ನ ಖಾದ್ಯವನ್ನು ತಯಾರಿಸಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ನಿವಾರಣೆಯಾಗುತ್ತದೆ ಅಲ್ಲದೆ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಓಟ್ಸ್ ನಲ್ಲಿ ಅಧಿಕ ಪ್ರಮಾಣದ ನಾರಿನಂಶವಿದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಣೆ ಮಾಡುತ್ತದೆ. ಈ ಮಾಹಿತಿ ಆರೋಗ್ಯಕರ ಮಾಹಿತಿ ಆಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ ಓಟ್ಸ್ ಸೇವನೆಯನ್ನು ಮಾಡುವುದರಿಂದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

Leave A Reply

Your email address will not be published.

error: Content is protected !!