ಮನುಷ್ಯನಾದವನು ಪ್ರತಿದಿನ ಎದ್ದ ತಕ್ಷಣ ತನ್ನ ದಿನಚರ್ಯವನ್ನು ಪ್ರಾರಂಭಿಸುತ್ತಾನೆ ದಿನಚರ್ಯದ ಎರಡನೇ ಭಾಗ ಎಂದರೆ ದಂತದಾವನ ಅಂದರೆ ಹಲ್ಲುಜ್ಜುವುದು. ಇದನ್ನ ಯಾವ ನಿಯಮದಿಂದ ಹೇಗೆ ಪಾಲಿಸಬೇಕು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಎಲ್ಲರಿಗೂ ಹಲ್ಲುಜ್ಜುವುದು ತಿಳಿದಿರುತ್ತದೆ ಎದ್ದ ತಕ್ಷಣ ನೀವು ಮೊದಲನೆಯ ಕೆಲಸವಾಗಿ ಹಲ್ಲುಜ್ಜುವುದನ್ನು ಮಾಡಬೇಕು.
ಹಲ್ಲುಗಳನ್ನು ಉಜ್ಜುವುದಕ್ಕೆ ಕೆಲವೊಂದು ಔಷಧೀಯ ಸಸ್ಯಗಳು ಲಭ್ಯವಿದೆ ಅಥವಾ ಆಯುರ್ವೇದದಲ್ಲಿ ಅವುಗಳನ್ನು ಬಳಸಿಕೊಂಡು ಮಾಡಲಾದ ಚೂರ್ಣ ಸಿಗುತ್ತದೆ ಇವುಗಳನ್ನ ಬಳಸಿಕೊಂಡು ಹಲ್ಲುಜ್ಜಬೇಕು. ಇತ್ತೀಚಿನ ದಿನಗಳಲ್ಲಿ ಆಯುರ್ವೇದೀಯ ಔಷಧಿಗಳನ್ನು ಬಳಸಿಕೊಂಡು ತಯಾರಿಸುವಂತಹ ಪೇಸ್ಟ್ ಕೂಡ ಲಭ್ಯವಿದೆ ಅವುಗಳನ್ನು ಕೂಡ ಬಳಸಬಹುದು.
ಎದ್ದ ತಕ್ಷಣ ಕಾಫಿ ಟೀ ಕುಡಿದು ನಂತರ ಹಲ್ಲುಜ್ಜುವುದು ಅಷ್ಟು ಒಳ್ಳೆಯದಲ್ಲ ಎದ್ದ ತಕ್ಷಣ ದಂತದಾವನವನ್ನು ಮಾಡಿ ಉಳಿದ ಕೆಲಸವನ್ನ ಪ್ರಾರಂಭಿಸಬೇಕು. ಆಯುರ್ವೇದದ ಮೂಲಿಕೆಗಳನ್ನು ಬಳಸಿ ಹಲ್ಲುಜ್ಜುವುದನ್ನು ರೂಢಿ ಮಾಡಿಕೊಳ್ಳುವುದರಿಂದ ಹಲ್ಲುಗಳನ್ನು ರಕ್ಷಿಸಿಕೊಳ್ಳಬಹುದು.
ಖಾರ ಒಗರು ಮತ್ತು ಕಹಿ ಇರುವಂತಹ ಔಷಧೀಯ ಕಡ್ಡಿಗಳನ್ನು ಬಳಸಿ ಹಲ್ಲುಜ್ಜುವುದರಿಂದ ಹಲ್ಲುಗಳ ರಕ್ಷಣೆಯಾಗುತ್ತದೆ ಜೊತೆಗೆ ಬಾಯಿಯಿಂದ ಕೆಟ್ಟ ವಾಸನೆ ಬರುವುದಿಲ್ಲ. ಈ ರೀತಿ ಹಲ್ಲುಜ್ಜುವುದರಿಂದ ನಿಮ್ಮ ನಾಲಿಗೆಯ ರುಚಿ ಗ್ರಹಿಕೆಯು ಕೂಡ ಹೆಚ್ಚುತ್ತದೆ. ಆಯುರ್ವೇದದ ಮೂಲಿಕೆಗಳನ್ನು ಬಳಸಿ ನೀವು ಹಲ್ಲುಜ್ಜುವುದನ್ನು ರೂಡಿಸಿಕೊಂಡರೆ ನಿಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು
ಬಾಯಿಯಿಂದ ಯಾವುದೇ ರೀತಿಯ ಕೆಟ್ಟ ಬ್ಯಾಕ್ಟೀರಿಯಾ ವೈರಸ್ಗಳು ನಿಮ್ಮ ದೇಹವನ್ನು ಸೇರದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ ದಿನದಲ್ಲಿ ಎರಡು ಬಾರಿ ಹಲ್ಲುಜ್ಜುವುದನ್ನು ರೂಢಿ ಮಾಡಿಕೊಂಡರೆ ಅದು ಬಹಳ ಉತ್ತಮವಾದುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.