ರಾತ್ರಿ ಹೊತ್ತು ಬಾಳೆಹಣ್ಣು ತಿಂದ್ರೆ ಪೈಲ್ಸ್ ಅಷ್ಟೇ ಅಲ್ಲ ಯಾವೆಲ್ಲ ಸಮಸ್ಯೆ ನಿವಾರಣೆಯಾಗುತ್ತೆ ನೋಡಿ

0

ಮೂಲವ್ಯಾಧಿ ಗುದನಾಳ ಮತ್ತು ಗುದದ್ವಾರದಲ್ಲಿ ಉರಿಯೂತದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ. ಈ ಸಮಯದಲ್ಲಿ ಮಲ ವಿಸರ್ಜನೆಯು ತುಂಬಾ ನೋವಿನಿಂದ ಕೂಡಿರುತ್ತದೆ. ಕೆಲವೊಮ್ಮೆ ಮಲದ ಜೊತೆಗೆ ರಕ್ತವೂ ಬರುತ್ತದೆ. ಎರಡು ರೀತಿಯ ಪೈಲ್ಸ್ ಅಥವಾ ಮೂಲವ್ಯಾಧಿಗಳಿವೆ. ಆಂತರಿಕ ಮತ್ತು ಬಾಹ್ಯ ಮೂಲವ್ಯಾಧಿ. ಆಂತರಿಕ ಮೂಲವ್ಯಾಧಿಯು ವಿಸರ್ಜನೆಯೊಂದಿಗೆ ರಕ್ತಸ್ರಾವವಾಗುತ್ತದೆ, ಆದರೆ ಬಾಹ್ಯ ಮೂಲವ್ಯಾಧಿಯು ಗುದನಾಳದ ಸುತ್ತಮುತ್ತಲಿನ ಭಾಗದಲ್ಲಿ ಊತವನ್ನು ಉಂಟುಮಾಡುತ್ತದೆ, ಇದು ನೋವು ಮತ್ತು ತುರಿಕೆಗೆ ಕಾರಣವಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಪೈಲ್ಸ್ ಸಮಸ್ಯೆಯನ್ನು ಪರಿಹಾರ ಮಾಡುವ ಅದ್ಭುತ ಟ್ರಿಕ್ ಬಾಳೆಹಣ್ಣಿನಲ್ಲಿದೆ. ಹಾಗಾದ್ರೆ ರಾತ್ರಿ ಹೊತ್ತು ಎರಡು ಬಾಳೆಹಣ್ಣನ್ನು ತಿನ್ನುವುದರಿಂದ ಪೈಲ್ಸ್ ಸಮಸ್ಯೆಯನ್ನು ಹೇಗೆ ಗುಣವಾಗಿಸಿಕೊಳ್ಳಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
 
ಪೈಲ್ಸ್ ಕೆಲವರಿಗೆ ಮಧ್ಯವಯಸ್ಸಿನಲ್ಲಿ ಈ ಸಮಸ್ಯೆ ಪ್ರಾರಂಭ ಆದರೆ ಇನ್ನು ಕೆಲವರಿಗೆ ವಯಸ್ಸಾದ ನಂತರದಲ್ಲಿ ಕಂಡುಬರಲು ಶುರುವಾಗುತ್ತದೆ. ಆದರೆ ಈ ಸಮಸ್ಯೆ ಒಮ್ಮೆ ಬಂದರೆ ನಂತರ ಹೋಗುವುದು ತುಂಬಾ ಕಷ್ಟ. ಕೆಲವರಿಗೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಕೂಡ ಪೈಲ್ಸ್ ಕಂಡುಬರಬಹುದು. ದೀರ್ಘಕಾಲದ ಮಲಬದ್ಧತೆ, ದೇಹದಲ್ಲಿ ಅತಿಯಾದ ಬೊಜ್ಜು, ಅನುವಂಶೀಯ ಕಾರಣಗಳು ಇತ್ಯಾದಿಗಳಿಂದ ಈ ತೊಂದರೆ ಹಲವರಲ್ಲಿರುತ್ತದೆ.

ಇದಕ್ಕೆ ಚಿಕಿತ್ಸೆಯಾಗಿ ಕೆಲವು ಆಹಾರಗಳನ್ನು ತಿನ್ನುವುದು ಮತ್ತು ಕೆಲವು ಆಹಾರಗಳಿಂದ ದೂರವಿರಲು ಆಗಾಗ ಸಲಹೆಗಳನ್ನು ನೀಡಲಾಗುತ್ತದೆ. ಫೈಬರ್ ಸಮೃದ್ಧವಾದ ಆಹಾರಗಳನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಫೈಬರ್ ಸ್ಟೂಲ್ ಅನ್ನು ಮೃದುಗೊಳಿಸುತ್ತದೆ, ಇದರಿಂದ ಅದನ್ನು ಹೊರಹಾಕಲು ಸುಲಭವಾಗುತ್ತದೆ. ನೀವು ಮೂಲವ್ಯಾಧಿಯಿಂದ ಬಳಲುತ್ತಿದ್ದರೆ, ನೀರು ಮತ್ತು ಹಣ್ಣಿನ ರಸಗಳ ರೂಪದಲ್ಲಿ ಸಾಕಷ್ಟು ದ್ರವಗಳನ್ನು ತೆಗೆದುಕೊಳ್ಳಬೇಕು.

ಮಲಬದ್ಧತೆ ಸಮಸ್ಯೆ ಒಂದು ವೇಳೆ ವಿಪರೀತವಾದ ಸಂದರ್ಭದಲ್ಲಿ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಪರಿಹಾರ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಒಂದುವೇಳೆ ಮಲ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಅತಿಯಾದ ತೊಂದರೆ ಎದುರಾದರೆ, ಗುದದ್ವಾರದ ಭಾಗದಲ್ಲಿ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ನೋವು ಮತ್ತು ರಕ್ತಸ್ರಾವ ಉಂಟಾಗಲು ಪ್ರಾರಂಭವಾಗುತ್ತದೆ. ಒಂದು ವೇಳೆ ಇಷ್ಟು ವಿಪರೀತ ಪ್ರಮಾಣಕ್ಕೆ ಹೋಗದೆ ಇರುವಂತಹ ಪೈಲ್ಸ್ ರೋಗಿಗಳು ಇದ್ದಲ್ಲಿ ಅವರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಂಡು ರೋಗಲಕ್ಷಣಗಳನ್ನು ದೂರ ಮಾಡಿಕೊಳ್ಳಬಹುದು.​ಮಲಬದ್ಧತೆ ಸಮಸ್ಯೆಗೆ ಬಾಳೆಹಣ್ಣು ಅತ್ಯುತ್ತಮ. ಸಾಕಷ್ಟು ಜನರು ಈ ವಿಷಯದಲ್ಲಿ ಗಿಡಮೂಲಿಕೆ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗುತ್ತಾರೆ. ಆಯುರ್ವೇದ ಚಿಕಿತ್ಸೆಗಳಲ್ಲಿ ಕೂಡ ಜನರು ಹಿಂದಿನಿಂದ ಪರಿಹಾರಗಳನ್ನು ಕಾಣುತ್ತಾ ಬಂದಿದ್ದಾರೆ.

ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಬಾಳೆಹಣ್ಣು ಸೇವನೆ ಮಾಡುವುದು ಸಾಕಷ್ಟು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಸಾಕಷ್ಟು ಹಣ್ಣು ತಿನ್ನಬೇಕು. ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಹಣ್ಣುಗಳು ಕರುಳಿನ ಚಲನೆಯನ್ನು ನಿಯಂತ್ರಿಸುತ್ತವೆ. ಮೂಲವ್ಯಾಧಿಯಿಂದ ಬಳಲುತ್ತಿರುವವರು ಸೇಬು, ದ್ರಾಕ್ಷಿ, ಪ್ರೂನ್ ಮತ್ತು ಬೆರ್ರಿಗಳಂತಹ ಹಣ್ಣುಗಳನ್ನು ಸಿಪ್ಪೆಗಳೊಂದಿಗೆ ತಿನ್ನುವುದು ತುಂಬಾ ಪ್ರಯೋಜನಕಾರಿ. ಈ ಎಲ್ಲಾ ಹಣ್ಣುಗಳಲ್ಲಿ ಫೈಬರ್, ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು.

ಬಾಳೆಹಣ್ಣಿನಿಂದ ಮಲಬದ್ಧತೆ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂದು ನಿಮಗೆಲ್ಲ ಗೊತ್ತಿದೆ. ಇದೇ ರೀತಿ ಗುದದ್ವಾರದಲ್ಲಿ ಕಂಡುಬರುತ್ತಿರುವ ಅತಿಯಾದ ನೋವು ಮತ್ತು ರಕ್ತಸ್ರಾವವನ್ನು ಕೂಡ ಬಾಳೆಹಣ್ಣು ಕಡಿಮೆ ಮಾಡಬಲ್ಲದು. ಕರುಳಿನ ಭಾಗದಲ್ಲಿ ಉತ್ತಮ ಚಲನೆಯನ್ನು ಉಂಟುಮಾಡುವುದರ ಜೊತೆಗೆ ಸುಲಭವಾದ ಮಲವಿಸರ್ಜನೆ ಉಂಟಾಗುವಂತೆ ಮಾಡಿ ನೋವನ್ನು ಉಪಶಮನ ಮಾಡುತ್ತದೆ. ಬಾಳೆಹಣ್ಣು ದೇಹಕ್ಕೆ ತಂಪು ಪ್ರಭಾವವನ್ನು ನೀಡುವ ಮೂಲಕ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.

​ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ಸೇವಿಸಬೇಕು. ರಾತ್ರಿ ಮಲಗುವ ಮುಂಚೆ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ನಿಮ್ಮ ಆಹಾರ ಪದ್ಧತಿಯಲ್ಲಿ ನಾರಿನ ಅಂಶ ಸೇರ್ಪಡೆಯಾಗಿ ಕರುಳಿನ ಭಾಗದಲ್ಲಿರುವ ನಿಮ್ಮ ಮಲ ಮೆದುವಾಗುತ್ತದೆ. ಏಕೆಂದರೆ ನಿಮಗೆಲ್ಲ ಗೊತ್ತಿರುವ ಹಾಗೆ ಗಟ್ಟಿಯಾದ ಮಲ ರಕ್ತನಾಳಗಳ ಮೇಲೆ ಅತಿಯಾದ ಒತ್ತಡ ಬೀಳುವಂತೆ ಮಾಡುತ್ತದೆ. ಇದು ಅಧಿಕ ರಕ್ತಸ್ರಾವ ಮತ್ತು ನೋವಿಗೆ ಕಾರಣವಾಗುತ್ತದೆ.

ಆದರೆ ​ಬಾಳೆಹಣ್ಣು ಸೇವನೆ ಮಾಡುವಾಗ ಎಚ್ಚರವಿರಬೇಕು. ಯಾರಿಗೆ ಮಲಬದ್ಧತೆ ಸಮಸ್ಯೆ ಅಥವಾ ಪೈಲ್ಸ್ ಸಮಸ್ಯೆ ಕಂಡುಬರುತ್ತದೆ ಅಂತಹವರು ಹಸಿ ಬಾಳೆಕಾಯಿಗಳನ್ನು ತಿನ್ನಬಾರದು. ಏಕೆಂದರೆ ಇವುಗಳು ಮಾಗಿದ ಬಾಳೆಹಣ್ಣುಗಳಿಗೆ ಹೋಲಿಸಿದರೆ ವಿರುದ್ಧ ರೀತಿಯ ಪ್ರಭಾವಗಳನ್ನು ಹೊಂದಿರುತ್ತವೆ. ಸಂಪೂರ್ಣ ಮಾಗಿದ ಬಾಳೆಹಣ್ಣುಗಳನ್ನು ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಪಾರಾಗಬಹುದು.

ಮಲಬದ್ಧತೆ ಸಮಸ್ಯೆ ಕೂಡ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಬಾಳೆಹಣ್ಣು ಹಣ್ಣಾದಂತೆ ಅದರಲ್ಲಿ ಕರಗುವ ನಾರಿನ ಅಂಶ ಮತ್ತು ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದು ಫೈಲ್ಸ್ ಸಮಸ್ಯೆ ಹೊಂದಿದ ಜನರಿಗೆ ಬಹಳ ಅನುಕೂಲಕರ. ಕೇವಲ ಇದೊಂದೇ ಅಲ್ಲದೆ ಪ್ರತಿ ದಿನ ಕೂಡ ಆಗಾಗ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇದರಿಂದ ನಿಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಇರುವುದಿಲ್ಲ. ನೀವು ಸೇವನೆ ಮಾಡಿದ ಚೆನ್ನಾಗಿ ಜೀರ್ಣವಾಗಲು ಇದು ಸಹಕಾರಿ ಮತ್ತು ಮಲಬದ್ಧತೆ ಸಮಸ್ಯೆಯನ್ನು ಇದು ಪರಿಹಾರ ಮಾಡುತ್ತದೆ.

Leave A Reply

Your email address will not be published.

error: Content is protected !!
Footer code: