ನಿದ್ದೆಗೆ ಸಂಬಂಧಿಸಿದಂತೆ ಹಲವಾರು ಜನರು ಹಲವಾರು ರೀತಿಯಲ್ಲಿ ತೊಂದರೆ ಅನುಭವಿಸುತ್ತಿರುತ್ತಾರೆ ಕೆಲವರಿಗೆ ನಿದ್ದೆಯಿಂದ ಆಗುವುದಿಲ್ಲ ಇನ್ನೂ ಕೆಲವರಿಗೆ ನಿದ್ದೆ ಬರುವುದಿಲ್ಲ ನಾವಿಂದು ಕೆಲವರಿಗೆ ನಿದ್ದೆ ಯಾವಗೆಂದರೆ ಆವಾಗ ನಿದ್ದೆ ಬರುತ್ತದೆ ಅದನ್ನ ಕಡಿಮೆ ಮಾಡುವುದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ದಿನದಲ್ಲಿ ನಿಮಗೆ ನಿದ್ದೆ ಯಾವಾಗ ಎಂದರೆ ಅವಾಗ ಆವರಿಸುತ್ತಿದ್ದರೆ ನೀವು ಕೇವಲ ಇಪ್ಪತ್ನಾಲ್ಕು ತುತ್ತು ಮಾತ್ರ ಊಟ ಮಾಡಬೇಕು. ಹಾಗೆ ಮಾಡುವುದರಿಂದ ನಿಮಗೆ ಬೇಗ ಎಚ್ಚರ ಕೂಡ ಆಗುತ್ತದೆ ಪ್ರತಿ ತುತ್ತನ್ನು ಇಪ್ಪತ್ನಾಲ್ಕು ಸಾರಿ ಅಗೆಯಬೇಕು ಆಗ ಆಹಾರ ಜಡತೆಯನ್ನು ಉಂಟುಮಾಡುವುದಿಲ್ಲ ಆ ರೀತಿ ತಿಂದರೆ ನೀವು ಯಾವತ್ತೂ ಕಾಯಿಲೆ ಬೀಳುವುದಿಲ್ಲ.
ಇನ್ನು ಕೆಲವರು ಧ್ಯಾನಕ್ಕೆ ಕುಳಿತಾಗ ನಿದ್ದೆ ಹೋಗುತ್ತಾರೆ ಪ್ರತಿ ಸಾರಿ ಹೀಗೆ ಆಗುತ್ತದೆ ಎಂದರೆ ನೀವು ಅರ್ಥಮಾಡಿಕೊಳ್ಳಬೇಕು. ಕೆಲವು ಜನರಿಗೆ ನಿದ್ದೆ ಮಾಡಬೇಕು ಎಂದರು ನಿದ್ದೆ ಬರುವುದಿಲ್ಲ ಹಲವರು ಮಲಗಿ ನಿದ್ದೆ ಮಾಡಬೇಕು ಎಂದು ಚಡಪಡಿಸಿದರು ನಿದ್ದೆ ಬರುವುದಿಲ್ಲ. ಇನ್ನು ಕೆಲವರು ನಿದ್ದೆ ಮಾಡುವುದಕ್ಕಾಗಿ ಮಾತ್ರೆಯನ್ನು ಸೇವಿಸುತ್ತಾರೆ ಜಗತ್ತಲ್ಲಿ ಲಕ್ಷಾಂತರ ಜನರ ಸ್ಥಿತಿ ಇದು.
ಒಂದು ವೇಳೆ ನಿಮಗೆ ದಿನದಲ್ಲಿ ನಿದ್ದೆ ಯಾವಾಗೆಂದರೆ ಆವಾಗ ಆವರಿಸುತ್ತಿದ್ದರೆ ಮೊದಲನೆಯದಾಗಿ ನಿಮ್ಮ ಆರೋಗ್ಯವನ್ನು ಪರಿಶೀಲಿಸಬೇಕು ಏನಾದ್ರೂ ಸಮಸ್ಯೆ ಇದೆ ದೈಹಿಕ ಸಮಸ್ಯೆ ಇದೆಯೆ ಎಂದು. ನೀವು ಗಮನಿಸಿರಬಹುದು ನಿಮಗೆ ಆರೋಗ್ಯ ಸರಿಯಿಲ್ಲದಿದ್ದಾಗ ಸಾಮಾನ್ಯಕ್ಕಿಂತ ಹೆಚ್ಚು ನಿದ್ದೆಯನ್ನು ಮಾಡುತ್ತೀರಿ. ದೇಹದಲ್ಲಿ ಏನೋ ಆಗುತ್ತಿರುವುದರಿಂದ ಅದು ಬೇರೆ ಕೆಲಸ ಮಾಡುವುದಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುವುದಿಲ್ಲ ದೇಹ ವಿಶ್ರಾಂತಿಯನ್ನು ಬಯಸುತ್ತದೆ ಇದು ಮೊದಲನೇ ವಿಷಯ.
ಎರಡನೆಯದು ನೀವು ತಿನ್ನುವ ಆಹಾರ ಯೋಗ ಸಾಧನೆ ಮಾಡುತ್ತಿರುವವರು ಕೇವಲ ಇಪ್ಪತ್ನಾಲ್ಕು ತುತ್ತು ತಿನ್ನಬೇಕು ಎಂದು ಹೇಳುತ್ತಾರೆ. ನಿಮಗೂ ಕೂಡ ಹಗಲಿನಲ್ಲಿ ನಿದ್ದೆ ಬರುತ್ತಿದ್ದರೆ ಇಪ್ಪತ್ನಾಲ್ಕು ತುತ್ತು ಮಾತ್ರ ಊಟ ಮಾಡಬೇಕು. ನಿಮ್ಮ ಚುರುಕುತನ ಮೂಲಭೂತವಾಗಿ ನೀವು ನಿಮ್ಮ ಶಕ್ತಿಯನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತಿರಿ ಎನ್ನುವುದನ್ನು ಅವಲಂಬಿಸಿರುತ್ತದೆ. ಧ್ಯಾನ ಮಾಡುವಾಗ ಇದು ಬಹಳ ಮುಖ್ಯ ಅದು ಕೇವಲ ಹದಿನೈದು ನಿಮಿಷದ ಶೂನ್ಯ ಧ್ಯಾನ ಆಗಿರಬಾರದು
ಜೀವನವೇ ಒಂದು ಧ್ಯಾನ ಆಗಿರಬೇಕು. ಚುರುಕುತನ ಕೇವಲ ಮನಸ್ಸಿನ ಚುರುಕುತನ ಆಗಿರಬಾರದು ಪ್ರಾಣಶಕ್ತಿಯ ಚುರುಕುತನ ಆಗಿರಬೇಕು. ಪ್ರಾಣಶಕ್ತಿ ಜಾಗೃತವಾಗಿರಬೇಕು ಅದನ್ನು ಜಾಗೃತ ಸ್ಥಿತಿಯಲ್ಲಿರುವುದಕ್ಕೆ ನೀವು ಸಾಧನೆಯನ್ನು ಮಾಡಬೇಕು. ಅದಕ್ಕೆ ನೇರ ವಾಗುವುದಕ್ಕೆ ನೀವು ಕೇವಲ ಇಪ್ಪತ್ನಾಲ್ಕು ತುತ್ತನ್ನು ತಿನ್ನಬೇಕು. ನೀವು ಸಾಮಾನ್ಯ ಗಾತ್ರದ ಇಪ್ಪತ್ನಾಲ್ಕು ತುತ್ತನ್ನು ಸೇವಿಸಿದರೆ ಬೆಳಿಗ್ಗೆ ಬೇಗನೆ ನೀವೇ ಎದ್ದೇಳುತ್ತೀರಿ. ಭಾರತೀಯ ಕಾಲಮಾಪನದಲ್ಲಿ ನಿಮಿಷ ಎನ್ನುವುದು ಇದೆ ಇಪ್ಪತ್ನಾಲ್ಕುಕ್ಕೂ ಅದಕ್ಕೂ ಸಂಬಂಧ ಇದೆ.
ನೀವು ಪ್ರತಿ ತುತ್ತನ್ನು ಇಪ್ಪತ್ನಾಲ್ಕು ಸಾರಿ ಅಗಿದು ತಿನ್ನುವುದರಿಂದ ಅದು ಸರಿಯಾಗಿ ಜೀರ್ಣವಾಗುತ್ತದೆ ಅದು ಜಡತ್ವವನ್ನು ಉಂಟುಮಾಡುವುದಿಲ್ಲ. ಬೆಳಿಗ್ಗೆ ಮೂರುವರೆಗೆ ಎದ್ದ ನಂತರ ಸ್ವಲ್ಪ ನೀರನ್ನು ಕುಡಿಯಬೇಕು ಪ್ರಾರಂಭದಲ್ಲಿ ಸ್ವಲ್ಪ ತೂಕಡಿಸಿದರು ಪರವಾಗಿಲ್ಲ ನಂತರ ಶೌಚ ಕಾರ್ಯಗಳನ್ನು ಮಾಡಬೇಕು ಎಂಟು ಗಂಟೆಯವರೆಗಿನ ಸಾಧನೆಯ ಸಮಯವನ್ನು ನಿದ್ದೆ ಮಾಡದೆ ಕಳೆಯಬೇಕು.
ಬೆಳಿಗ್ಗೆ ಕೂಡ ಇಪ್ಪತ್ನಾಲ್ಕು ತುತ್ತು ತಿಂದರೆ ರಾತ್ರಿ ಊಟದವರೆಗೂ ನಿದ್ದೆ ಬರುವುದಿಲ್ಲ. ಹಸಿವಾದಾಗ ನೀರನ್ನು ಕುಡಿಯಬೇಕು ಇದರಿಂದ ನೀವು ಚೇತನ್ಯ ವಾಗಿರುತ್ತಿರಿ. ದೇಹ ತಿಂದಿರುವ ಆಹಾರವನ್ನು ವ್ಯರ್ಥ ಮಾಡುವ ಬದಲು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿಯುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ನೀವು ಕೂಡ ಈ ನಿಯಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಆರೋಗ್ಯವಂತ ಜೀವನ ನಿಮ್ಮದಾಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರಿಂದ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.