ಕೆಲವೊಮ್ಮೆ ಕೈ ಕಾಲುಗಳಲ್ಲಿ ನೋವು, ವಿಪರೀತ ಸೆಳೆತ ಕಾಣಿಸಿಕೊಂಡ ಸಂದರ್ಭಗಳಲ್ಲಿ ನಮ್ಮೊಳಗಿರೋ ವೈದ್ಯ ಎಚ್ಚರಗೊಳ್ಳುತ್ತಾನೆ. ನನ್ನ ದೇಹಕ್ಕೆ ಕ್ಯಾಲ್ಸಿಯಂ ಕೊರತೆಯಾಗಿ ಹೀಗೆಲ್ಲ ಆಗುತ್ತಿರಬಹುದಾ? ಎಂಬ ಸಣ್ಣ ಅನುಮಾನವೊಂದು ಮೂಡಬಹುದು. ಆದರೆ ಈ ರೀತಿ ಅನುಮಾನ ಮೂಡಿದ ತಕ್ಷಣಕ್ಕೆ ನಿಮಗೆ ನೀವೇ ವೈದ್ಯರಾಗಿ ಕ್ಯಾಲ್ಸಿಯಂ ಮಾತ್ರೆಯನ್ನು ತೆಗೆದುಕೊಳ್ಳೋ ನಿರ್ಧಾರಕ್ಕೆ ಬಂರುವುದು ಅಷ್ಟು ಒಳ್ಳೆಯದಲ್ಲ. ಯಾವುದೇ ಮಾತ್ರೆಯನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯ.
ಇಲ್ಲವಾದರೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೇ. ಆದರೆ ಎಷ್ಟೋ ಬಾರಿ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಕೊರತೆಯಾಗಿದೆ ಎಂಬುದು ನಮಗೆ ತಿಳಿಯುವುದೇ ಇಲ್ಲ. ಆದರೆ ದೇಹ ಮಾತ್ರ ಈ ಬಗ್ಗೆ ಪ್ರತಿದಿನ ಒಂದಲ್ಲ ಒಂದು ಸೂಚನೆಯನ್ನು ನೀಡುತ್ತಲೇ ಇರುತ್ತೆ. ಹಾಗದರೆ ನಾವು ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಬರದೇ ಇರುವ ಹಾಗೆ ಹೇಗೆ ನೋಡಿಕೊಳ್ಳಬಹುದು? ಹಾಗೂ ಆಯುರ್ವೇದದ ಪ್ರಕಾರ ಇದಕ್ಕೆ ಯಾವ ಔಷಧ ಇದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.
ಮೊದಲಿಗೆ ನಾವು ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು ಹೇಗಿರುತ್ತವೆ ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ. ಪ್ರತಿದಿನ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸಿಗದಿದ್ರೆ ನಿಧಾನವಾಗಿ ಒಂದೊಂದೇ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಆದರೂ ಕ್ಯಾಲ್ಸಿಯಂ ಕೊರತೆಯಿಂದಲೇ ಈ ಸಮಸ್ಯೆ ಉದ್ಭವಿಸಿದೆ ಎಂದು ಅಂದಾಜಿಸೋದು ತುಸು ಕಷ್ಟದ ಕೆಲಸವೇ ಸರಿ. ಆದರೂ ವಿಪರೀತ ಆಯಾಸ, ಕೂದಲು ಉದುರುವಿಕೆಯಲ್ಲಿ ಹೆಚ್ಚಳ, ಬೆರಳುಗಳು ಮರಗಟ್ಟುವುದು, ಉಗುರುಗಳು ಸ್ವಲ್ಪ ಒತ್ತಡಕ್ಕೆ ಮುರಿತುವುದು, ಸ್ನಾಯು ಸೆಳೆತ, ಹಸಿವಾಗದಿರೋದು, ಹಲ್ಲುಗಳು ಹುಳುಕಾಗೋದು ಮುಂತಾದವು ಕ್ಯಾಲ್ಸಿಯಂ ಕೊರತೆ ಲಕ್ಷಣಗಳು.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಿದ್ದರೆ ಖಿನ್ನತೆ, ಉದ್ವೇಗ, ಮೂಳೆ ಸವೆತ ಅಥವಾ ಮುರಿತ, ಮೂಳೆಗೆ ಸಂಬಂಧಿಸಿದ ಕಾಯಿಲೆಗಳು, ರಕ್ತ ಹಿಪ್ಪುಗಟ್ಟದಿರುವಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗಾದರೆ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಏಕೆ ಅಗತ್ಯ? ಎಂದು ನೋಡುವುದಾದರೆ, ನಮ್ಮ ಶರೀರಕ್ಕೆ ಅಗತ್ಯವಾದ ಖನಿಜಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು.
ಆರೋಗ್ಯಯುತ ಮೂಳೆ ಹಾಗೂ ಹಲ್ಲುಗಳಿಗೆ, ಸ್ನಾಯುಗಳ ಸಮರ್ಪಕ ಕಾರ್ಯನಿರ್ವಹಣೆ, ರಕ್ತ ಹೆಪ್ಪುಗಟ್ಟೋದು ಸೇರಿದಂತೆ ಶರೀರದ ಅನೇಕ ಕಾರ್ಯನಿರ್ವಹಣೆಗೆ ಕ್ಯಾಲ್ಸಿಯಂ ಅಗತ್ಯ. ಹೀಗಾಗಿ ಪ್ರತಿದಿನ ನಾವು ಸೇವಿಸೋ ಆಹಾರದಲ್ಲಿ ಕ್ಯಾಲ್ಸಿಯಂ ಇರುವುದು ಕಡ್ಡಾಯ. ಕ್ಯಾಲ್ಸಿಯಂ ಜೊತೆ ವಿಟಮಿನ್ ಡಿ ಕೂಡ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗೋದು ಅಗತ್ಯ. ಏಕೆಂದರೆ ದೇಹ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ನೆರವು ನೀಡುತ್ತದೆ. ಹೀಗಾಗಿ ವಿಟಮಿನ್ ಡಿ ಕೊರತೆ ಉಂಟಾದರೂ ಸಹ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಲಭಿಸದಿರುವ ಸಾಧ್ಯತೆ ಇರುತ್ತದೆ.
ಹಾಗಾದರೆ ನಮ್ಮ ಆಹಾರದಲ್ಲಿ ನಾವು ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಿಕೊಳ್ಳುವುದು ಹೇಗೆ? ಸಾಮಾನ್ಯವಾಗಿ ನಾವು ಹಾಲನ್ನು ಕುಡಿಯುತ್ತೇವೆ ಮತ್ತು ಹಾಲಿನ ಉತ್ಪನ್ನಗಳನ್ನು ಸಹ ಹೆಚ್ಚಾಗಿ ಬಳಕೆ ಮಾಡುತ್ತೇವೆ ಇದರಿಂದ ನಮಗೆ ಹೆಚ್ಚು ಕ್ಯಾಲ್ಸಿಯಂ ದೊರೆಯುತ್ತದೆ. ಇದನ್ನು ಹೊರತುಪಡಿಸಿ ಬೇರೆ ಕೆಲವು ತರಕಾರಿಗಳಿಂದ ಸಹ ನಮಗೆ ಕ್ಯಾಲ್ಸಿಯಂ ದೊರೆಯುತ್ತದೆ. ಆದರೆ ಹೆಚ್ಚಾಗಿ ಕ್ಯಾಲ್ಸಿಯಂ ಇರುವ ಹಾಲು ಎಲ್ಲರಿಗೂ ದೊರೆಯುವುದಿಲ್ಲ, ಒಂದುವೇಳೆ ಹಾಲು ದೊರೆತರೂ ಸಹ ಅದು ಪ್ಯಾಕೆಟ್ ಹಾಲು. ಅದರಲ್ಲಿ ಎಷ್ಟರ ಮಟ್ಟಿಗೆ ಕ್ಯಾಲ್ಸಿಯಂ ಇರುತ್ತದೆ ಎಂದು ಗೊತ್ತಿರುವುದಿಲ್ಲ.
ಇನ್ನೂ ಇವನ್ನೆಲ್ಲ ಹೊರತುಪಡಿಸಿ ನಮಗೆ ನೇರವಾಗಿ ದೇಹಕ್ಕೆ ಕ್ಯಾಲ್ಸಿಯಂ ಸಿಗಬೇಕು ಎಂದರೆ ಊಟದ ನಂತರ ತಾಂಬೂಲ ಅಂದರೆ , ಎಲೆ ಅಡಿಕೆಯನ್ನು ಸುಣ್ಣದ ಜೊತೆ ಸೇವನೆ ಮಾಡಬೇಕು. ಸುಣ್ಣದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇರುತ್ತದೆ ಇದರಲ್ಲಿ ಭೂಮಿಯಿಂದ ನೇರವಾಗಿ ನೈಸರ್ಗಿಕವಾಗಿ ನಮಗೆ ಕ್ಯಾಲ್ಸಿಯಂ ದೊರೆಯುತ್ತದೆ. ಊಟದ ನಂತರ ತಾಂಬೂಲ ಸೇವನೆ ಅಂದರೆ ಎಲೆ ಅಡಿಕೆ ಹಾಗೂ ಸುಣ್ಣ ಹಾಕಿ ತಾಂಬೂಲ ಸೇವನೆ ಮಾಡುವುದರಿಂದ ನಮಗೆ ತಿಂದ ಆಹಾರ ಜೀರ್ಣ ಆಗುವುದರ ಜೊತೆಗೆ ಕ್ಯಾಲ್ಸಿಯಂ ಕೂಡಾ ಸಿಗುತ್ತದೆ ಹಾಗೂ ನಾಲಿಗೆಯನ್ನು ಸ್ವಚ್ಚಗೊಳಿಸಿ ಆಹಾರ ರುಚಿಸುವ ಹಾಗೆ ಕೂಡಾ ಮಾಡುತ್ತದೆ.
ಆದರೆ ಮುಖ್ಯವಾಗಿ ಇದರಲ್ಲಿ ಯಾವುದೇ ರೀತಿಯ ತಂಬಾಕುಗಳನ್ನು ಮಾತ್ರ ಸೇರಿಸಬಾರದು. ತಂಬಾಕಿನ ಬದಲು ಎಲೆ ಅಡಿಕೆ ಸುಣ್ಣ ಸ್ವಲ್ಪ ಜೇನು, ಒಣ ಕೊಬ್ಬರಿ ತುರಿ, ಸೋಂಪು , ಅಜವಾನ ಇವುಗಳನ್ನು ಹಾಕಿ ಮಕ್ಕಳಿಗೂ ಸಹ ನೀಡಬಹುದು. ಹೀಗೆ ಮಾಡಿಕೊಂಡು ಗರ್ಭಿಣಿಯರು, ಶುಗರ್, ಬಿಪಿ ಇರುವವರು, ಮಕ್ಕಳು ವಯಸ್ಕರು ಮಹಿಳೆಯರು ಪುರುಷರು ಯಾರು ಬೇಕಿದ್ದರೂ ಯಾವ ಕಾಲದಲ್ಲಿ ಬೇಕಿದ್ದರೂ ಸೇವಿಸಬಹುದು.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430