ಮಲಬದ್ದತೆಗೆ ಹರಳೆಣ್ಣೆ ಹೇಳಿ ಮಾಡಿಸಿದ ಔಷಧಿ

0

ನಮ್ಮ ಸುತ್ತಮುತ್ತ ಅನೇಕ ಔಷಧೀಯ ವಸ್ತುಗಳಿರುತ್ತವೆ ಆದರೆ ಅವುಗಳ ಬಳಕೆಯ ಬಗ್ಗೆ ನಮಗೆ ಸರಿಯಾಗಿ ತಿಳಿದಿರುವುದಿಲ್ಲ. ಕೆಲವೊಮ್ಮೆ ಅವುಗಳಿಂದ ದುಷ್ಪರಿಣಾಮಗಳು ಉಂಟಾಗಬಹುದು ಒಳ್ಳೆಯ ಪರಿಣಾಮಗಳು ಉಂಟಾಗಬಹುದು. ಹಾಗಾಗಿ ನಾವು ಬಳಸುವ ವಸ್ತುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ಬಳಕೆ ಮಾಡಬೇಕು.

ನಾವಿಂದು ನಿಮಗೆ ಹರಳೆಣ್ಣೆಯನ್ನು ಯಾರು ಉಪಯೋಗ ಮಾಡಬಹುದು ಮತ್ತು ಯಾವ ಕಾಯಿಲೆಗಳಿಗೆ ಇದನ್ನು ಉಪಯೋಗಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಹರಳೆಣ್ಣೆ ಉಷ್ಣ ಗುಣಗಳನ್ನು ಹೊಂದಿರುವುದರಿಂದ ಇದನ್ನು ಉಷ್ಣತೈಲ ಎಂದು ಕರೆಯುತ್ತಾರೆ. ಕೆಲವರು ಹರಳೆಣ್ಣೆಯನ್ನು ತಂಪು ಎಂದು ಅದನ್ನು ತಲೆಗೆ ಹಾಕಿ ಮಸಾಜ್ ಮಾಡಿಕೊಳ್ಳುತ್ತಾರೆ ಆದರೆ ಹರಳೆಣ್ಣೆ ಉಷ್ಣ ಅಂಶವನ್ನು ಹೊಂದಿದೆ. ಇದು ದೇಹಕ್ಕೆ ಹಿಟ್ ಅನ್ನು ಉಂಟುಮಾಡುತ್ತದೆ ಆದರೂ ಕೂಡ ಇದಕ್ಕೆ ಔಷಧೀಯ ಗುಣಗಳಿವೆ.

ಹಾಗಾದರೆ ಹರಳೆಣ್ಣೆಯಲ್ಲಿ ಇರುವ ಔಷಧಿ ಗುಣ ಯಾವುದು. ಯಾವುದಕ್ಕೆ ಹರಳೆಣ್ಣೆಯನ್ನು ಮುಖ್ಯವಾಗಿ ಬಳಸುತ್ತಾರೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಹರಳೆಣ್ಣೆಯನ್ನು ಮುಖ್ಯವಾಗಿ ಮಲಬದ್ಧತೆಯನ್ನು ನಿವಾರಿಸುವುದಕ್ಕೆ ಬಳಸುತ್ತಾರೆ. ಕೆಲವರಿಗೆ ಕೆಲವೊಮ್ಮೆ ಕರುಳಿನಲ್ಲಿ ಮಲ ಕಟ್ಟಿಕೊಂಡಿರುತ್ತದೆ.

ಆಗ ಉಷ್ಣ ಗುಣ ಆ ಮಲವನ್ನು ಜೀರ್ಣ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಅಂತಹ ಸಮಯದಲ್ಲಿ ಹರಳೆಣ್ಣೆಯನ್ನು ಬಳಸುವುದರಿಂದ ಮಲವನ್ನು ಕರುಳಿನಿಂದ ಸರಾಗವಾಗಿ ಹೊರಹಾಕುವುದಕ್ಕೆ ಸಹಾಯವಾಗುತ್ತದೆ. ಈ ರೀತಿಯಾಗಿ ಮಲಬದ್ಧತೆಯನ್ನು ನಿವಾರಿಸುವುದಕ್ಕೆ ಹರಳೆಣ್ಣೆಯನ್ನು ರಾಮಬಾಣ ಎಂದು ಹೇಳಬಹುದು.

ಹರಳೆಣ್ಣೆಯಿಂದಾಗುವ ಇತರ ಪ್ರಯೋಜನಗಳೇನು ಎಂಬುದನ್ನು ನೋಡೋಣ ಆಮವಾತ ಅಂದರೆ ಚಿಕ್ಕ ವಯಸ್ಸಿನಲ್ಲಿ ಬರುವಂತಹದ್ದು ಸಂದುಗಳಲ್ಲಿ ನಂಜು ಉಂಟಾಗಿ ಆಮ ಆಗಿರುತ್ತದೆ ಬಾವು ಬಂದಿರುತ್ತದೆ. ಇನ್ನು ಸಂಧಿವಾತ ಅಂದರೆ ವಯಸ್ಸಾದವರಲ್ಲಿ ಸಂದುಗಳಲ್ಲಿ ಕೀಲುಗಳಲ್ಲಿ ಎಣ್ಣೆಯ ಅಂಶ ಕಡಿಮೆಯಾಗಿ ಮೂಳೆಗಳು ಉಜ್ಜಲ್ ಪಟ್ಟು ಆಗುವಂತಹ ಹೇರಳ ತೊಂದರೆಯಾಗಿದೆ. ಹೀಗೆ ಸಂಧಿವಾತ ಅಥವಾ ಆಮವಾತ ಕಾಣಿಸಿಕೊಂಡಾಗ ಸಂಧಿವಾತಕ್ಕೆ ಹರಳೆಣ್ಣೆಯನ್ನು ಬಳಸಬಾರದು. ಆಮವಾತಕ್ಕೆ ಹರಳೆಣ್ಣೆಯನ್ನು ಬಳಸಬಹುದು. ಆಮವಾತ ಉಂಟಾದ ಜಾಗದಲ್ಲಿ ಹರಳೆಣ್ಣೆಯನ್ನು ಹಚ್ಚಿ ಅದಕ್ಕೆ ಸ್ವಲ್ಪ ಉಪ್ಪಿನ ಕಾವನ್ನು ಕೊಡಬೇಕು. ಕಾವು ಕೊಡುವ ಉದ್ದೇಶ ಹಚ್ಚಿದ ಎಣ್ಣೆ ದೇಹದ ಒಳಗೆ ಹೋಗಲಿ ಎನ್ನುವುದು. ಈ ರೀತಿ ಮಾಡುವುದರಿಂದ ಆಮವಾತ ಕಡಿಮೆಯಾಗುತ್ತದೆ.

ಇನ್ನು ಹರಳೆಣ್ಣೆಯನ್ನು ತಲೆಗೆ ಹಚ್ಚಬೇಕು ಎನ್ನುವವರು ಅದನ್ನು ತಲೆಗೆ ಹಚ್ಚಬಹುದು ಜೊತೆಗೆ ಹರಳೆಣ್ಣೆಯನ್ನು ಹಚ್ಚಿ ಸ್ನಾನವನ್ನು ಕೂಡ ಮಾಡಬಹುದು ಕೆಲವರಿಗೆ ಪದೇಪದೇ ಶೀತವಾಗುತ್ತದೆ. ನೆಗಡಿ ಕೆಮ್ಮು ಆಗುತ್ತಿರುತ್ತದೆ ಅಂಥವರು ಈ ತೈಲವನ್ನು ಬಳಸಬಹುದು. ದೇಹದಲ್ಲಿ ಉಷ್ಣ ಪ್ರಕೃತಿ ಇರುವವರು ಹರಳೆಣ್ಣೆಯನ್ನು ಬಳಸಬಾರದು ಅಂಥವರು ಕೊಬ್ಬರಿ ಎಣ್ಣೆಯನ್ನು ಬಳಸಬೇಕು. ಈ ರೀತಿಯಾಗಿ ಹರಳೆಣ್ಣೆ ಔಷಧೀಯ ಗುಣಗಳನ್ನು ಹೊಂದಿದ್ದರೂ ಕೂಡ ನಮ್ಮ ದೇಹದ ಪ್ರಕೃತಿಗೆ ಅದು ಹೊಂದುತ್ತದೆಯೆ ಇಲ್ಲವೇ ಎಂಬುದನ್ನು ಮೊದಲು ಸರಿಯಾಗಿ ತಿಳಿದುಕೊಂಡು ಬಳಕೆ ಮಾಡಬೇಕು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ಹಾಗೂ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!