ಇದರ ಬಗೆಗಿನ ಮಾಹಿತಿ ಈ ಕೆಳಗಿನಂತಿದೆ.ತಿಳಿದ ಮೂಲಗಳ ಪ್ರಕಾರ ಎಲ್ಲಾ ಹಣ್ಣುಗಳಿಗಿಂತ ಹೆಚ್ಚು ಪೋಷಕಾಂಶ ಹಣ್ಣು ಈ ಪೇರಲೆಹಣ್ಣು. ಈ ಪೇರಲೆಹಣ್ಣನ್ನು ಕೆಲವು ಕಡೆಗಳಲ್ಲಿ ಸೀಬೆಹಣ್ಣು ಮತ್ತು ಆಂಗ್ಲಭಾಷೆಯಲ್ಲಿ Guava fruits ಎನ್ನುತ್ತಾರೆ. ಎಲ್ಲಾ ಹಣ್ಣುಗಳಿಗಿಂತ ಪೇರಲೆಹಣ್ಣು ಪ್ರತಿಯೊಬ್ಬರಿಗೂ ಸೂಕ್ತವಾಗಿರುತ್ತದೆ. ಸಕ್ಕರೆ ಖಾಯಿಲೆ ಇರವವರು ಕೂಡ ಈ ಹಣ್ಣನ್ನು ಹೆಚ್ಚಾಗಿ ಸೇವಿಸಬಹುದು, ಇದರಿಂದ ಯಾವ ತೊಂದರೆಗಳಿರುವುದಿಲ್ಲಾ.
ಪೇರಲೆಹಣ್ಣಿನ ತರ ಅದರ ಎಲೆಯು ಕೂಡ ತುಂಬಾ ಉಪಯೋಗಗಳನ್ನು ಹೊಂದಿದೆ. ಈ ಪೇರಲೆ ಎಲೆಯು ನಮ್ಮ ಕೂದಲು ಆರೋಗ್ಯಕ್ಕೆ ಒಳ್ಳೆಯದು. ನಮ್ಮ ಕೂದಲು ಬೆಳವಣಿಗೆಗೆ ಬೇಕಾದ ಎಲ್ಲ ಅಂಶಗಳು ಈ ಸೀಬೆ ಎಳೆಯಲ್ಲಿದೆ,ಇದರಲ್ಲಿ ವಿಟಮಿನ್ B ಮತ್ತು ಸಿ ಅಂಶವಿದೆ. ಈ ಎಲ್ಲಾ ಅಂಶಗಳು ನಮ್ಮ ಕೂದಲನ್ನು ಸದೃಢವನ್ನಾಗಿಸುತ್ತದೆ, ಮತ್ತು ಕೂದಲು ಬೆಳವಣಿಗೆಗೂ ಸಹಾಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕೂದಲು ಉದುರುವಿಕೆ ತಡೆಯುತ್ತದೆ, ಇಂತಹ ಅದ್ಭುತ ಗುಣವನ್ನು ಹೊಂದಿರುವಂತಹ ಈ ಪೇರಲೆ ಎಲೆಯನ್ನು ಉಪಯೋಗಿಸಿಕೊಂಡು ಒಂದು ಹೇರ್ ಟಾನಿಕ್ ಅನ್ನು ತಯಾರಿಸಿಕೊಳ್ಳೊಣ. ಇದಕ್ಕೆ ಬೇಕಾದ ಸಾಮಗ್ರಿಗಳು ಈ ಕೆಳಗಿನಂತಿವೆ.
ಒಂದು ಪಾತ್ರೆಯಲ್ಲಿ ಒಂದು ಲೋಟ ನೀರುನ್ನು ಹಾಕಿ, ಅದಕ್ಕೆ ಸ್ವಚ್ಛವಾಗಿರುವ ಪೇರಲೆ ಎಲೆಯನ್ನು (10 ರಿಂದ 15 ಎಲೆಗಳನ್ನು) ಕತ್ತರಿಸಿ ಹಾಕಿ. ಈ ಪೇರಲೆ ಎಲೆ ಮತ್ತು ನೀರು ಹಾಕಿದ ಪಾತ್ರೆಗೆ ಒಂದು ಚಮಚದಷ್ಟು ಮೆಂತೆ ಕಾಳನ್ನು ಹಾಕಬೇಕು. (ಇದು ಕೇವಲ ಒಬ್ಬರಿಗಾಗುವಷ್ಟು ಮಾತ್ರ,, ನಿಮಗೆ ಅಗತ್ಯವಿರುವಷ್ಟು ನೀವು ತಯಾರಿಸಿಕೊಳ್ಳಿ). ಮೆಂತೆ ಮತ್ತು ಪೇರಲೆ ಎಲೆ ಹಾಕಿದ ನೀರನ್ನು ಕಡಿಮೆ ಉರಿಯಲ್ಲಿಟ್ಟು ಚನ್ನಾಗಿ ಕುದಿಸಬೇಕು, ಕುದಿದ ನಂತರ ಅದನ್ನು ಒಂದು ಪಾತ್ರೆಯಲ್ಲಿ ಶೋಧಿಸಿಕೊಳ್ಳಬೇಕು.
ನಾವು ಉಪಯೋಗಿಸಿದ ಈ ಎರಡು ಪದಾರ್ಥಗಳು ಕೂದಲಿನ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಪೇರಲೆ ಎಲೆಯಿಂದ ಕುದಿಸಿದ ನೀರನ್ನು ತಲೆಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗಿ ಇನ್ನಷ್ಟು ಕೂದಲು ಬೆಳೆವಣಿಗೆಗೆ ಸಹಾಯಕವಾಗುತ್ತದೆ.
ಇದಕ್ಕೆ ಹಾಕಿದ ಇನ್ನೊಂದು ಪದಾರ್ಥ ಮೆಂತೆ ಕಾಳು. ಇದು ಕೂದಲು ಬೆಳೆವಣಿಗೆಗೂ ಕೂಡ ತುಂಬಾ ಒಳ್ಳೆಯದು, ಕೂದಲು ಬುಡವನ್ನು ಸದೃಢವಾಗಿ, ಗಟ್ಟಿಮಾಡೊಕೆ ಈ ಮೆಂತೆ ತುಂಬಾ ಉಪಯುಕ್ತವಾಗಿದೆ. ಈ ಚಳಿಗಾಲದಲ್ಲಿ ತುಂಬಾ ಹೊಟ್ಟು ಆಗುತ್ತಿರುತ್ತದೆ ಅದಕ್ಕೆ ಈ ಮೆಂತೆ ಹೊಟ್ಟನ್ನು ಕಡಿಮೆ ಮಾಡುವಂತಹ ಗುಣ ಹೊಂದಿದೆ. ಪೇರಲೆ ಎಲೆ ಮತ್ತು ಮೆಂತೆ ಚನ್ನಾಗಿ ಕುದ್ದಾಗ ಅದರಲ್ಲಿರುವ ಪೋಷಕಾಂಶದ ಸತ್ವಗಳು ಚನ್ನಾಗಿ ನೀರಿನಲ್ಲಿ ಬಿಟ್ಟಿರುತ್ತದೆ. ಇದು ಕೂದಲಿನ ಬೆಳೆವಣಿಗೆಗೆ ಸಹಾಯ ಮಾಡುತ್ತದೆ. ಇದು ತುಂಬಾ ನ್ಯಾಚುರಲ್ ಮತ್ತು ಪ್ಯುರ್ ಮನೆ ಮದ್ದಾಗಿರುತ್ತದೆ.
ನಮಗೆ ಬೇಕಾದಾಗ ದಿಢೀರನೇ ತಯಾರಿಸಿ ಈ ಪೇರಲೆ ಹೇರ್ ಟಾನಿಕ್ ಅನ್ನು ನಾವು ಹಚ್ಚಿಕೊಳ್ಳಬಹುದು.
ಇದನ್ನು ಅಪ್ಲೈ ಮಾಡೋ ವಿಧಾನ ಈ ಕೆಳಗಿನಂತಿದೆ. ಕೂದಲಿನ ಬುಡಕ್ಕೆ ಸ್ವಲ್ಪ ಕಾಟನ್ (ಹತ್ತಿ)ಯನ್ನು ತಯಾರಿಸಿ ಕೊಂಡಿರುವ ಹೇರ್ ಟಾನಿಕ್ ಅಲ್ಲಿ ಅದ್ದಿ ಕೂದಲಿನ ಬುಡಕ್ಕೆ ಮತ್ತು ಬೈತಲೆ ಮಧ್ಯೆ ಹಚ್ಚಿಕೊಳ್ಳಬೇಕು, ಅಥವಾ ಇದನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ ಸ್ಪ್ರೇ ಮಾಡಿ ಕೊಳ್ಳಬಹುದು. ಈ ವಿಧಾನವನ್ನು ವಾರದಲ್ಲಿ ಮೂರು ಬಾರಿ ಅನುಸರಿಸಬೇಕು.
ನೀವು ಕೂದಲಿಗೆ ಇದನ್ನು ಹಚ್ಚಿಕೊಂಡ ಮೇಲೆ ಅರ್ಧ ಗಂಟೆ ಅಥಾವ ಒಂದು ಗಂಟೆಯ ನಂತರ ಯಾವುದಾದರು ಶಾಂಪೂವಿನಿಂ ಬೇಕಾದರೂ ನೀವು ವಾಷ್ ಮಾಡಿಕೊಳ್ಳಬಹುದು ಅಥಾವ ಉಗುರು ಬೆಚ್ಚಗಿನ ನೀರಿನಿಂದ ಸಹ ತಲೆ ಸ್ನಾನ ಮಾಡಬಹುದು. ಅಥಾವ ರಾತ್ರಿ ಮಲಗುವ ಮೊದಲು ಇದನ್ನು ಕೂದಲಿಗೆ ಅಪ್ಲೈ ಮಾಡಿ ಬೆಳಗ್ಗೆ ಹೇರ್ ವಾಷ್ ಕೂಡ ಮಾಡಿ ಕೊಳ್ಳಬಹುದು, ಯಾವ ಅಡ್ಡ ಪರಿಣಾಮವು ಇಲ್ಲಾ.ಈ ಹೇರ್ ಟಾನಿಕ್ ಅನ್ನು ಉಪಯೋಗಿಸುವುದರಿಂದ ಕೂದಲು ಬೆಳವಣಿಗೆಗೆ ಮತ್ತು ಕೂದಲು ಉದುರುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.