ಗಾಜಿನೂರಿನ ತಾತನ ಮನೆಯಲ್ಲಿ ಯುವರಾಜ್ ಕುಮಾರ್ ದಂಪತಿಗಳು! ಹೇಗಿದೆ ನೋಡಿ ಸುಂದರವಾದ ಹಳ್ಳಿ ಮನೆ!!

0

ಸ್ನೇಹಿತರೆ, ರಾಜ್ ಕುಟುಂಬದ ಕುಡಿ, ರಾಘವೇಂದ್ರ ರಾಜಕುಮಾರ್(Raghavendra Rajkumar) ಅವರ ದ್ವಿತೀಯ ಪುತ್ರ ಯುವರಾಜ್ ಕುಮಾರ್ ಆದಾಗಲೇ ಅಣ್ಣಾವ್ರ ಹುಟ್ಟುಹಬ್ಬದ ವಿಶೇಷ ದಿನದಂದು ತಮ್ಮ ಚೊಚ್ಚಲ ಸಿನಿಮಾದ ಪೋಸ್ಟರ್(Poster) ಬಿಡುಗಡೆ ಮಾಡುವ ಮೂಲಕ ಬಲಗಾಲಿಟ್ಟು ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಹೌದು ತಮ್ಮ ಫಸ್ಟ್ ಲುಕ್(First Look) ಪೋಸ್ಟರ್ನಿಂದಾಗಿ ಯುವರಾಜ್ ಕುಮಾರ್ ಜನರನ್ನು ಸೆಳೆಯಲು ಯಶಸ್ವಿಯಾಗಿದ್ದು, ತಮ್ಮ ಕಡಕ್ ಲುಕ್ ಹಾಗೂ ಸ್ಟೈಲ್ ಮೂಲಕ ಅದೆಷ್ಟೋ ಹುಡುಗಿಯರ ಮನಸ್ಸನ್ನು ಕದ್ದಿದಾರೆ.

ಇನ್ನು ಹೆಸರಿಡದ ಈ ಸಿನಿಮಾಗೆ ಯುವ ೦೧ (Yuva 01)ಎಂಬ ಪ್ರೊಡಕ್ಷನ್ ಹೆಸರಿಟ್ಟಿದ್ದು, ಮುಂದಿನ ದಿನಗಳಲ್ಲಿ ಈ ಚಿತ್ರದ ಅಧಿಕೃತ ಹೆಸರು ಹೊರಬರಲಿದೆ. ಸಾಮಾಜಿಕ ಜಾಲತಾಣದಲ್ಲಿಯು ಒಳ್ಳೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಯುವರಾಜ್ ಕುಮಾರ್(Yuvaraj Kumar) ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್(fan page) ಗಳು ಕೂಡ ಕ್ರಿಯೇಟ್ ಆಗಿದ್ದು, ವಿಶೇಷ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಲೇ ಇರುತ್ತಾರೆ.

ಇದೀಗ ಯುವರಾಜ್ ಕುಮಾರ್(Yuvaraj Kumar) ಮತ್ತು ದಂಪತಿಗಳು ತಾತನ ಮನೆಗೆ ಹೋಗಿದ್ದು, ಅಲ್ಲಿನ ಪಡಸಾಲೆಯ ಮೇಲೆ ಕುಳಿತು ಕ್ಲಿಕ್ಕಿಸಿಕೊಂಡಿರುವ ಫೋಟೋ ಅಣ್ಣಾವ್ರ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದೆ. ಹೌದು ಗೆಳೆಯರೇ ಅಣ್ಣಾವ್ರು ಹುಟ್ಟಿ, ಬೆಳೆದಿದ್ದೆಲ್ಲ ಚಾಮರಾಜನಗರ(chamarajnagar)ದಲ್ಲೇ, ಹೀಗಾಗಿ ಅಣ್ಣಾವ್ರ ಮಕ್ಕಳು ಆ ಮನೆಯನ್ನು ಹಾಗೆ ಉಳಿಸಿಕೊಂಡು ಬಂದಿದ್ದು, ಪುನೀತ್ ರಾಜಕುಮಾರ್ ಅದನ್ನು ಅಣ್ಣವ್ರರ ಹೆಸರಿನಲ್ಲಿ ಮ್ಯೂಸಿಯಂ(museum) ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದರು.

ಮುಂದಿನ ದಿನಗಳಲ್ಲಿ ಈ ಕೆಲಸ ಜಾರಿಗೆ ಬರಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಅಣ್ಣಾವ್ರ ಮೊಮ್ಮಗ ಯುವರಾಜ್ ಕುಮಾರ್(Yuvaraj Kumar) ಸಿನಿಮಾದ ಶೂಟಿಂಗ್ ಕಾರ್ಯಗಳ ಬಿಸಿ ಷೆಡ್ಯೂಲ್ನಲ್ಲಿಯೂ(Schedule) ತಮ್ಮ ಮಡದಿ ಶ್ರೀದೇವಿ ಭೈರಪ್ಪ(Sridevi Bhairappa)ನವರೊಂದಿಗೆ ಹಳ್ಳಿಯಲ್ಲಿರುವ ಅಣ್ಣಾವ್ರ ಮನೆಗೆ ಭೇಟಿ ನೀಡಿದ್ದು, ಅಲ್ಲಿದ್ದಂತಹ ಜನರೊಂದಿಗೆ ಮಾತನಾಡಿ ಕಾಲ ಕಳೆದಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ಆಗುತ್ತಿದೆ.

Leave A Reply

Your email address will not be published.

error: Content is protected !!