ರಿಷಬ್ ಮಗಳ ಕಿವಿ ಚುಚ್ಚುವ ಕಾರ್ಯಕ್ರಮದ ಅಪರೂಪದ ಫೋಟೋಸ್!!

0

ಸ್ನೇಹಿತರೆ, ಸದ್ಯದ ದಿನಗಳಲ್ಲಿ ನಮ್ಮೆಲ್ಲರಿಗೂ ರಿಷಬ್ ಶೆಟ್ಟಿ (Rishab Shetty) ನೆನಪಾಗುವುದು ಅವರ ಬ್ಲಾಕ್ಬಸ್ಟರ್ ಕಾಂತಾರ ಸಿನಿಮಾ. ಹೌದು ಗೆಳೆಯರೇ ಒಂದೇ ಒಂದು ಸಿನಿಮಾದ ಮುಖಾಂತರ ತಮ್ಮ ಇಮೇಜ್ಜನ್ನು ಬದಲಿಸಿಕೊಂಡಂತಹ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಅದ್ಬುತ ನಟನೆ ನಿರ್ದೇಶನ ಎಲ್ಲದರ ಮುಖಾಂತರ ರಿಷಬ್ ಶೆಟ್ಟಿ (Rishab Shetty) ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕಾಂತರಾ ಪಾರ್ಟ್ 2 ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ರಿಷಬ್ ಶೆಟ್ಟಿ (Rishab Shetty) ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಚಿತ್ರದ ಅಪ್ಡೇಟ್ಗಳನ್ನು ನೀಡುತ್ತಲಿರುತ್ತಾರೆ.

ಇದೀಗ ತಮ್ಮ ವೈಯಕ್ತಿಕ ವಿಚಾರದ ಕುರಿತಾಗಿ ಪೋಸ್ಟ್ಗಳನ್ನು ಶೇರ್ ಮಾಡಿರುವ ರಿಷಬ್ ಶೆಟ್ಟಿ (Rishab Shetty) ತಮ್ಮ ಮುದ್ದು ಮಗಳ ಕಿವಿ ಚುಚ್ಚುವ ಕಾರ್ಯಕ್ರಮದ ಸಂದರ್ಭದಲ್ಲಿ ತೆಗೆದಿರುವ ಫೋಟೋ ಹಾಗೂ ವಿಡಿಯೋವನ್ನು ಸೆರೆ ಹಿಡಿದು ಹೃದಯ ಸ್ಪರ್ಶದ ಕ್ಷಣವನ್ನು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹೌದು ಗೆಳೆಯರೇ ಪ್ರಗತಿ ಶೆಟ್ಟಿ(Pragathi Shetty)ಯವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಗಳಿಗೆ ರಣವಿತ್(Ranavith) ಮತ್ತು ರಾದ್ಯ (Radhya)ಎಂಬ ಇಬ್ಬರು ಮುದ್ದು ಮಕ್ಕಳಿದ್ದು, ತಮ್ಮ ಕಿರಿ ಮಗಳ ಕಿವಿ ಚುಚ್ಚುವ ಕಾರ್ಯಕ್ರಮವನ್ನು ಸಾಕಷ್ಟು ದಿನಗಳಿಂದ ಮುಂದೂಡುತ್ತಾ ಬರುತ್ತಿದ್ದರು, ಇದೀಗ ಈ ಶುಭ ಗಳಿಗೆಗೆ ಮುಹೂರ್ತ ಫಿಕ್ಸ್ ಮಾಡಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಹಸಿರು ಬಣ್ಣದ ಉಡುಪನ್ನು ಧರಿಸಿ ಈ ಶುಭ ಕಾರ್ಯವನ್ನು ಮಾಡಿದ್ದಾರೆ. ನಟ ರಿಷಬ್ ಶೆಟ್ಟಿ (Rishab Shetty) ತಮ್ಮ ಮುದ್ದು ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಪ್ರೀತಿಯಿಂದ ಹಿಡಿದು ಅವರಿಗೆ ಬೆಂಬಲ ಮತ್ತು ಸಾಂತ್ವಾನ ನೀಡುತ್ತಾ, ಅರ್ಚಕರ ಕೈಯಿಂದ ಕಿವಿ ಚುಚ್ಚಿಸಿದ್ದಾರೆ.

ತಂದೆ ಮಗಳ ಈ ಅಪರೂಪದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ಇನ್ನು ವಿಶೇಷವಾಗಿ ರಿಷಬ್ ಶೆಟ್ಟಿ (Rishab Shetty) ಅವರು ಹುಟ್ಟಿ ಬೆಳೆದ ಹಳ್ಳಿ ಮನೆಯಲ್ಲಿಯೇ ಮಗಳ ಈ ಶುಭ ಕಾರ್ಯವನ್ನು ಮಾಡಿರುವುದು ವಿಶೇಷವಾಗಿ ಮಾರ್ಪಡಿಸಿದೆ, ‘ನಾನು ಬೆಳೆದ ಮನೆಯಲ್ಲಿ ಸಾಕಷ್ಟು ನೆನಪುಗಳಿವೆ, ಇದೀಗ ಈ ಶುಭ ಕಾರ್ಯದ ಮತ್ತೊಂದು ನೆನಪು ಸೇರ್ಪಡೆಯಾಗಿರುವುದು, ಬಹಳ ಸಂತೋಷ ತಂದಿದೆ’ ಎಂಬ ಕ್ಯಾಪ್ಷನ್(caption) ಬರೆದುಕೊಂಡಿದ್ದಾರೆ.

Leave A Reply

Your email address will not be published.

error: Content is protected !!