ಹೆಣ್ಣು ಹೇಗಿರಬೇಕು ಎಂದರೆ ಕೈ ತುಂಬಾ ಬಳೆಯನ್ನು ಇಟ್ಟುಕೊಳ್ಳಬೇಕು ಹಣೆ ತುಂಬಾ ಕುಂಕುಮವನ್ನು ಇಟ್ಟುಕೊಳ್ಳಬೇಕು ತಲೆ ತುಂಬಾ ಹೂವನ್ನು ಮುಡಿದಿರಬೇಕು ಕಾಲಿಗೆ ಗೆಜ್ಜೆಯನ್ನು ಧರಿಸಿರಬೇಕು ಕಾಲುಂಗುರವನ್ನು ಹಾಕಿರಬೇಕು. ಹೆಣ್ಣು ಅಂದರೆ ಲಕ್ಷ್ಮಿ ಮನೆಯನ್ನು ಬೆಳಗುವ ದೇವತೆ ಸಿರಿಯಾಗಿ ಇರಬೇಕು.
ಈಗಿನ ಕಾಲದ ಹೆಣ್ಣು ಮಕ್ಕಳು ಮಳೆ ಇಲ್ಲದೆ ಹಣೆಗೆ ಒಂದು ಬೊಟ್ಟು ಇಲ್ಲದೆ ಹೇಗೋ ಹೇಗೋ ಇರುತ್ತಾರೆ ಆದರೆ ಇದು ತಪ್ಪು, ಮನೆಯ ಮಹಾಲಕ್ಷ್ಮಿ ಎಂದು ಕರೆಯುವ ಹೆಣ್ಣು ಮನೆಯಲ್ಲಿ ಕಳಕಳಿಯಾಗಿ ಇರಬೇಕು. ಮನೆಯಲ್ಲಿ ಸದಾ ನಗುಮುಖದಿಂದ ಇರಬೇಕು ಯಾವಾಗಲೂ ಸಿಟ್ಟು ಮಾಡಿಕೊಳ್ಳಬಾರದು ಹಾಗೆ ಗಂಡನ ಮೇಲೆ ಬೇರೆಯವರ ಹತ್ತಿರ ದೂರನ್ನು ಕೊಡಬಾರದು.
ಗಂಡನಿಗೆ ಗೌರವವನ್ನು ಕೊಡಬೇಕು ಹೆಣ್ಣು ಕರುಣಾಮಯಿಯಾಗಿ ಇರಬೇಕು. ಗಂಡನಿಗೆ ಮಕ್ಕಳಿಗೆ ಹಾಗೂ ಮನೆಗೆ ಬಂದ ಅತಿಥಿಯರನ್ನು ಸರಿಯಾಗಿ ಸತ್ಕರಿಸಬೇಕು ಹೊಟ್ಟೆಯ ತುಂಬಾ ಊಟವನ್ನು ಹಾಕಬೇಕು. ಅತ್ಯಂತ ಗೌರವಯುತವಾಗಿ ನಡೆದುಕೊಳ್ಳಬೇಕು. ಹೆಣ್ಣು ತಲೆ ಬಗ್ಗಿಸಿ ನಡೆಯಬೇಕು. ಅಂದರೆ ನೀತಿ ನಿಯಮ ವಿನಯಗಳು ಅವಳಲ್ಲಿ ತುಂಬಿರಬೇಕು.
ಹಿರಿಯರು ಮತ್ತು ಕಿರಿಯರು ಎಂಬ ಗೌರವವು ಇರಬೇಕು. ತಾನು ಎನ್ನುವುದನ್ನು ಬಿಟ್ಟು ಬೇರೆಯವರಿಗಾಗಿ ಬೇರೆಯವರ ಖುಷಿಯಲ್ಲಿ ತನ್ನ ಖುಷಿಯನ್ನು ಕಂಡುಕೊಳ್ಳಬೇಕು. ಯಾವಾಗಲೂ ಹಸನ್ಮುಖಿಯಾಗಿರಬೇಕು ಸಿಟ್ಟು ಸಿಡುಕುಗಳನ್ನ ಮಾಡಬಾರದು ಕೋಪಿಷ್ಟೆಯಾಗಿರಬಾರದು. ಹೆಣ್ಣು ಹೀಗಿದ್ದರೆ ಮಹಾಲಕ್ಷ್ಮಿ ಸದಾ ಮನೆಯಲ್ಲಿ ವಾಸವಾಗಿರುತ್ತಾಳೆ. ಅಮ್ಮನಿಗೆ ನಂದನವನ ಆಗಿರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.