Vishnuvardhan: ಡಾಕ್ಟರ್ ವಿಷ್ಣುವರ್ಧನ್ ಕುಟುಂಬದ ಅಪರೂಪದ ವೈರಲ್ ಫೋಟೋಸ್! ಇಲ್ಲಿವೆ ನೋಡಿ

0

ಸ್ನೇಹಿತರೆ ತಮ್ಮ ಅಪ್ರತಿ ಅಭಿನಯದ ಮೂಲಕ ನಾಗರಹಾವು(Nagarahavu) ಸಿನಿಮಾದ ಮೂಲಕ ಪುಟ್ಟಣ್ಣ ಕಣಗಾಲ್ ಅವರ ಪ್ರಿಯ ಶಿಷ್ಯನಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ಸಂಪತ್ ಕುಮಾರ್ ಅನಂತರ ಕನ್ನಡ ಚಿತ್ರರಂಗದಲ್ಲಿ ವಿಷ್ಣು ದಾದಾನಾಗಿ ಗುರುತಿಸಿಕೊಂಡು ನೂರಾರು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ ಹಿರಿಮೆಯನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಮೈಲುಗಳನ್ನು ಹಾಕಿದಂತಹ ಮಹಾನುಭಾವ.

ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ವಿಷ್ಣುವರ್ಧನ್ ಅವರು ಆಗಿನ ಕಾಲದ ಎಲ್ಲಾ ನಟರೊಂದಿಗೆ ತೆರೆಹಂಚಿಕೊಂಡು ಪೀಕ್ ನಲ್ಲಿ ಇದ್ದಂತಹ ನಟಿ ಭಾರತೀಯವರನ್ನೂ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮದುವೆಯಾದ ಆರಂಭಿಕ ದಿನದಲ್ಲೇ ಒಂದು ಮುದ್ದಾದ ಹೆಣ್ಣು ಮಗಳನ್ನು ದತ್ತು ಪಡೆದ ವಿಷ್ಣುವರ್ಧನ್(Vishnuvardhan) ದಂಪತಿಗಳಿಗೆ

ಅನಂತರ ಕೀರ್ತಿ ವಿಷ್ಣುವರ್ಧನ್ (Keerthi Vishnuvardhan) ಎಂಬ ಮುದ್ದು ಮಗಳು ಜನಿಸಿದಳು. ಹೀಗೆ ವಿಷ್ಣು ದಾದಾ ತಾವು ಸಿನಿಮಾ ರಂಗದಿಂದ ಬಂದ ಅರ್ಧದಷ್ಟು ಹಣವನ್ನು ಬಡವರಿಗೆ ನಿರ್ಗತಿಕರಿಗೆ ಹಾಗೂ ತಮ್ಮ ಅಭಿಮಾನಿಗಳ ಸಹಾಯಕೆಂದು ಮುಡಿಪಾಗಿ ಇಟ್ಟಂತಹ ಅದ್ಭುತ ವ್ಯಕ್ತಿ. ಕೊಡುಗೈ ದಾನಿಯಾಗಿದ್ದಂತಹ ವಿಷ್ಣುವರ್ಧನ್ ಅವರಿಗೆ ತಮ್ಮದೇ ಆದ ಸ್ವಂತ ಮನೆ ಒಂದನ್ನು ಕಟ್ಟಿಸಿ ಕೊಳ್ಳಬೇಕು ಎಂಬ ಬಹುದೊಡ್ಡ ಆಸೆ ಇರುತ್ತದೆ.

ಆದರೆ ಅವರ ಜೀವಿತಾವಧಿಯಲ್ಲಿ ಈ ಒಂದು ಆಸೆಯನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇದಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್(Aniruddh) ಹಾಗೂ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಇಬ್ಬರು ಸೇರಿ ವಿಷ್ಣು ದಾದನ ಹೆಸರಿನಲ್ಲಿ ಬೃಹತ್ತಾದ ಮನೆ ಒಂದನ್ನು ಕಟ್ಟಿಸಿ ಅದರ ಗೃಹಪ್ರವೇಶದ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಮಾಡಿದರು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಸ್ಟಾರ್ ಸೆಲೆಬ್ರಿಟಿಗಳು ಆಗಮಿಸಿ ಶುಭ ಕೋರಿದರು.

ಆ ಸಮಯದಲ್ಲಿ ತೆಗೆಯಲಾದಂತಹ ಕೆಲವು ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತಿದ್ದು ಅತ್ತೆ ಅಳಿಯನ ಬಾಂಧವ್ಯ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Leave A Reply

Your email address will not be published.

error: Content is protected !!
Footer code: