WhatsApp Group Join Now
Telegram Group Join Now

ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ವಿಷ್ಣುವರ್ಧನ್ (Vishnuvardhan) ತಮ್ಮ ಅಭೂತ ಪೂರ್ವ ಅಭಿನಯದ ಮೂಲಕವೇ ಬಹುದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದಂತಹ ನಟ. ಇಂದಿಗೂ ಕೂಡ ವಿಷ್ಣುವರ್ಧನ್ (Vishnuvardhan) ಅವರ ಅಭಿನಯ, ವ್ಯಕ್ತಿತ್ವ ಹಾಗೂ ನಡವಳಿಕೆಗೆ ಅಸಂಖ್ಯಾತ ಅಭಿಮಾನಿ ಬಳಗ ಸೃಷ್ಟಿಯಾಗಿದೆ.

17 ಫೆಬ್ರವರಿ 1975 ರಂದು ವಿಷ್ಣುವರ್ಧನ್ ನಟಿ ಭಾರತೀಯವರನ್ನು ಪ್ರೀತಿಸಿ ಕನ್ನಡ ಚಿತ್ರರಂಗದ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ (Married life) ಕಾಲಿಟ್ಟರು. ದಾದ ಬದುಕಿದಷ್ಟು ದಿನ ಆದರ್ಶವಾಗುವಂತೆ ಬದುಕಿದಂತಹ ಜೋಡಿಗಳು, ವಿಷ್ಣುವರ್ಧನ್ (Vishnuvardhan) ಅವರ ಅಗಲಿಕೆಯ ನಂತರವೂ ಅವರು ಹಾಕಿ ಕೊಟ್ಟಂತಹ ದಾರಿಯಲ್ಲಿ ನಡೆಯುತ್ತಾ ಹೋಗುತ್ತಿರುವ ಭಾರತಿ (bharathi) ಅಮ್ಮನವರು ತಮ್ಮ ಅಪ್ರತಿಮ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದಂತಹ ನಟಿ.

ಹೌದು ಗೆಳೆಯರೇ ಬಲೆ ಜೋಡಿ, ಶ್ರೀ ಕೃಷ್ಣದೇವರಾಯ, ನಮ್ಮ ಸಂಸಾರ ತಾಯಿದೇವರು, ಮನಮೆಚ್ಚಿದ ಮಗ, ಜನ್ಮರಹಸ್ಯ, ಮೇಯರ್ ಮುತ್ತಣ್ಣ, ದೂರದ ಬೆಟ್ಟ, ಬಂಗಾರದ ಜಿಂಕೆ, ನಾಗರಹೊಳೆ, ದೇವರೇ ದಿಕ್ಕು, ಮಕ್ಕಳ ಭಾಗ್ಯ ಸೇರಿದಂತೆ 80ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ಆಗಿನ ಕಾಲದ ಪೀಕ್ನಲ್ಲಿ ಇದ್ದಂತಹ ನಟಿ.

89ನೇ ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿದ್ದಂತಹ ಜಯಂತಿ, ಆರತಿ, ಮಂಜುಳಾ ಅವರನ್ನೆಲ್ಲಾ ಹಿಂದಿಕ್ಕೆ ಅಗ್ರಸ್ಥಾನವನ್ನು ಏರಿದಂತಹ ನಟಿ ಭಾರತಿಯವರಿಗೆ ಆಫರ್ಗಳ ಸುರಿಮಳೆ ಇರುವಾಗಲೇ ನಟ ವಿಷ್ಣುವರ್ಧನ್ (Vishnuvardhan) ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳಿಗೆ.

ಕೀರ್ತಿ ವಿಷ್ಣುವರ್ಧನ್(Keerthi Vishnuvardhan) ಮತ್ತು ಚಂದನ ವಿಷ್ಣುವರ್ಧನ್(Chandana Vishnuvardhan) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಮದುವೆಯಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಂತೋಷವಾಗಿದ್ದಾರೆ. ಇನ್ನು ಕೀರ್ತಿ ವಿಷ್ಣುವರ್ಧನ್ ಅವರ ಪತಿ ಅನಿರುದ್ಧ(Anirudh) ಕೂಡ ಸಿನಿಮಾ ರಂಗದಲ್ಲಿ ಸಕ್ರಿಯ ರಾಗಿದ್ದು, ಮಾವ ಹಾಕಿಕೊಟ್ಟಂತಹ ದಾರಿಯಲ್ಲಿ ನಡೆದು ಚಿತ್ರರಂಗದಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: