WhatsApp Group Join Now
Telegram Group Join Now

Modalasala Actress Bhama : ಕನ್ನಡ ಹಾಗೂ ಮಲಯಾಳಂನ ಸಿನಿಮಾ ರಂಗದಲ್ಲಿ ತಮ್ಮ ಅಪ್ರತಿಮಾ ಅಭಿನಯದ ಚಾಪನ್ನು ತೋರುತ್ತ ಹಲವರು ವರ್ಷಗಳ ಕಾಲ ಸಕ್ರಿಯರಾಗಿದ್ದಂತಹ ನಟಿ ಭಾಮಾ (Bhama) ಮೂಲತಃ ಕೇರಳದವರು. ಕೇರಳದ ಸೆಕೆಂಡರಿ ಶಾಲೆಯಲ್ಲಿ ಪ್ರಾರ್ಥಮಿಕ ಶಿಕ್ಷಣವನ್ನು ಮುಗಿಸಿ ಆನಂತರ ಜೀಸಸ್ ಬೆಥನಿ ಕೋವೆಂಟ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಹೈಸ್ಕೂಲ್ ಮುಗಿಸಿದ ನಂತರ ಸಮಾಜಶಾಸ್ತ್ರದಲ್ಲಿ ಪದವಿ ಪಡೆದರು.

ಇನ್ನು ಚಿಕ್ಕಂದಿನಿಂದಲೂ ಲಲಿತ ಕಲೆಗಳಲ್ಲಿ ಬಹಳನೇ ಆಸಕ್ತಿ ಹೊಂದಿದ್ದ ಕಾರಣ ಮಲಯಾಳಂನ ನಿವೇದ್ಯಂ (Nivedyam) ಎಂಬ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗುತ್ತಾರೆ. ಮೊದಲ ಸಿನಿಮಾದಲ್ಲಿಯೇ ಜನಪ್ರಿಯತೆ ಪಡೆದಂತಹ ನಟಿ ಭಾಮಾ ಅವರು ಅನಂತನ ಮಲಯಾಳಂನ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಪಿಕ್ನಲ್ಲಿ ಇರುವಾಗಲೇ ರಾಕಿಂಗ್ ಸ್ಟಾರ್ ಯಶ್ (Yash) ಅವರ ಮೊದಲ ಸಲ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟರು.

ಹೀಗೆ ಮುಗ್ದ ಹುಡುಗಿಯ ಪಾತ್ರದಲ್ಲಿ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ಭಾಮ ಅವರು ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರ ಶೈಲೂ ಸಿನಿಮಾದಲ್ಲಿ ಶೈಲುವಾಗಿ ಅಭಿನಯಿಸುವ ಮೂಲಕ ಕನ್ನಡಿಗರ ಮನದರಸಿಯಾಗಿ ಹೋದರು. ಆನಂತರ ತೆರೆಕಂಡ ಒಂದು ಕ್ಷಣದಲ್ಲಿ, ಆಟೋ ರಾಜ, ಬರ್ಫಿ, ಅಯ್ಯಪ್ಪ, ಅಂಬರ, ಅರ್ಜುನ, ರಾಗ ಮುಂತಾದ ಸಿನಿಮಾಗಳು ನಟಿ ಭಾಮಾ (Bhama) ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸನ್ನು ತಂದುಕೊಟ್ಟಿತು.

ಹೇಗೆ 2018ರ ವರೆಗೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಭಾಮ ಅವರು ಅವಕಾಶಗಳ ಸುರಿಮಳೆ ಇರುವಾಗಲೇ ಅರುಣ್ ಜಗದೀಶ್(Arun Jagdeesh) ತುಂಬುವರೊಂದಿಗೆ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಒಂದು ಮುದ್ದಾದ ಮಗಳಿದ್ದು ಆಗಾಗ ತಮ್ಮ ಮಗಳೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.

ಮೂರು ವರ್ಷದ ಮಗುವಿದ್ದರೂ ನೋಡಲು ಬಹಳ ಯಂಗಾಗಿ ಕಾಣುವ ಭಾಮಾ (Bhama) ಅವರ ಫೋಟೋಗಳು ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳು ಸಂತೂರ್ ಮಮ್ಮಿ ಎಂದೆಲ್ಲ ಕಾಮೆಂಟ್ ಮಾಡುವ ಮೂಲಕ ಬಾಮಾ ಅವರ ಸೌಂದರ್ಯವನ್ನು ಹಾಡಿ ಹೊಗಳುತ್ತಿರುತ್ತಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: