ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಕುಟುಂಬದ ಸಿಹಿ ನೆನಪುಗಳು!

0

Vijay raghavendra wife spandana:ಸ್ನೇಹಿತರೆ, ಚಿನ್ನಾರಿ ಮುತ್ತನ ಚಿನ್ನ ಸ್ಪಂದನ ಈಗ ಕೇವಲ ನೆನಪು ಮಾತ್ರ, ಹೃದಯಘಾತ ಸಮಸ್ಯೆಯಿಂದಾಗಿ ಅತಿ ಚಿಕ್ಕ ವಯಸ್ಸಿಗೆ ತನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡ ಹಾಗೂ ಮಗನನ್ನು ತೊರೆದು ಇಹಲೋಕ ತ್ಯಜಿಸಿದ್ದಾರೆ. ಇವರ ಅಕಾಲಿಕ ಅಗಲಿಕೆಯು ಕರುನಾಡಿಗೆ ದುಃಖದ ಛಾಯೆಯನ್ನು ತಂದಿದೆ ಎಂದರೆ ತಪ್ಪಾಗಲಾರದು. ಕಳೆದ ತಿಂಗಳುಗಳ ಹಿಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಎಂಬ ಹೃದಯ ಶ್ರೀಮಂತಿಕೆ ಉಳ್ಳುವಂತಹ ವ್ಯಕ್ತಿ ಹೃದಯಸ್ತಂಬನದಿಂದ ಇಹಲೋಕ ತ್ಯಜಿಸಿದರು.

ಇದೀಗ ಅದೇ ಕುಟುಂಬದ ಹೆಣ್ಣುಮಗಳಾದ ಸ್ಪಂದನ ವಿಜಯ ರಾಘವೇಂದ್ರ ಕೂಡ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿರುವಾಗ ಹೃದಯಘಾತದಿಂದ ಕೊನೆ ಉಸಿರೆಳೆದಿರುವ ಮಾಹಿತಿ ಹೊರ ಬರುತ್ತಾ ಇದ್ದ ಹಾಗೆ ಎಲ್ಲರಿಗೂ ಒಮ್ಮೆಲೆ ಇದು ಸುಳ್ಳು ಸುದ್ದಿಯಾಗಿ ಬಿಡಲಿ ಎನ್ನುವಂತಾಯಿತು. ಬಹಳ ಸೌಮ್ಯ ಸ್ವಭಾವದ ಹುಡುಗಿಯಾಗಿದ್ದಂತಹ ಸ್ಪಂದನ ಅವರು ಓದು ಮುಗಿಸಿದ ನಂತರ ವಿಜಯ್ ರಾಘವೇಂದ್ರ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು,

ಸುಮಾರು 16 ವರ್ಷಗಳ ಕಾಲ ಸುಖ ಸಂಸಾರಿಕ ಜೀವನ ಮಾಡಿದಂತಹ ಹೆಣ್ಣು ಮಗಳು. ಸದ್ಯ ಈ ಒಂದು ಅಘಾತವಾದ ನೋವನ್ನು ಬರಿಸುವಂತಹ ಶಕ್ತಿಯನ್ನು ಆ ಭಗವಂತ ವಿಜಯ್ ರಾಘವೇಂದ್ರ ಮತ್ತು ಕುಟುಂಬಕ್ಕೆ ಕರುಣಿಸಲಿ ಎಂದು ಪ್ರತಿಯೊಬ್ಬರು ಪ್ರಾರ್ಥಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಅವರ ಕ್ಯೂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದು,

ಮನೆಯ ಕಾರ್ಯಕ್ರಮ ಒಂದರಲ್ಲಿ ಮದುಮಗಳಂತೆ ಬಹಳನೇ ಮುದ್ದಾಗಿ ಸ್ಪಂದನ(Spandana) ಟ್ರೆಡಿಶನಲ್ ಉಡುಗೆಯಲ್ಲಿ ಅಲಂಕೃತರಾಗಿ ಟ್ರೆಡಿಷನಲ್ ಲುಕ್(Traditional outfit) ನಲ್ಲಿ ತಮ್ಮ ಪತಿ ಹಾಗೂ ಮಗನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ಮನೆಯಲ್ಲಿ ನಡೆದಂತಹ ಪೂಜಾ ಕೈಂಕರ್ಯಗಳನ್ನು ಒಟ್ಟಾಗಿ ಕೂತು ಆಚರಣೆ ಮಾಡಿದ ದಂಪತಿಗಳ ಈ ಫೋಟೋ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ (Social nedia) ಬಾರಿ ವೈರಲಾಗುತ್ತಿದೆ. ಸ್ಪಂದನ ಹಾಗೂ ವಿಜಯ್ ರಾಘವೇಂದ್ರ(Vijay Raghavendra) ಅವರ ಸಿಹಿ ನೆನಪುಗಳ ಗೂಡಿನಲ್ಲಿ ಈ ಫೋಟೋಗಳು ಕೂಡ ಸೇರ್ಪಡೆಯಾಗಿವೆ. ಇದನ್ನೂ ಓದಿ ಅಪ್ಪು ಜೊತೆ ನಟಿಸಿದ ನಟಿ ಮೀರಾ ಜಾಸ್ಮಿನ್ ಅಸಲಿ ವಯಸ್ಸು ಎಷ್ಟು ಗೊತ್ತಾ? ಈ ನಟಿಯ ಗ್ಲಾಮರಸ್ ಪಿಡಾ ಆದ ಅಭಿಮಾನಿಗಳು

Leave A Reply

Your email address will not be published.

error: Content is protected !!