WhatsApp Group Join Now
Telegram Group Join Now

Vijay Raghavendra ಸ್ನೇಹಿತರೆ, ವಿಜಯ ರಾಘವೇಂದ್ರ (Vijay Raghavendra) ಅವರ ಧರ್ಮಪತ್ನಿ ಸ್ಪಂದನ ನಮ್ಮೆಲ್ಲರಿಂದ ಅಗಲಿ ವಾರಗಳೇ ಉರುಳಿದರು ಇಂದಿಗೂ ಆ ಕಹಿ ಸತ್ಯವನ್ನು ಯಾರನ್ನು ಒದಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗೆ ಕೇವಲ ಟಿವಿ ಮೊಬೈಲ್ಗಳಲ್ಲಿ ಅವರನ್ನು ನೋಡಿ ಕಣ್ತುಂಬಿ ಕೊಳ್ಳುವಂತಹ ನಮಗೆ ಸ್ಪಂದನ ಅವರ ಸಾವು ಬಹು ದೊಡ್ಡ ಮಟ್ಟದ ನೋವು ತಂದೊಡ್ಡಿರುವಾಗ ಆಕೆಯ ಕುಟುಂಬಸ್ಥರ ಪರಿಸ್ಥಿತಿ ಹೇಗೆ ಇರುತ್ತದೆ? ಎಂಬುದನ್ನು ನೀವೇ ಯೋಚಿಸಿ.

ಬಹಳ ಲವಲವಿಕೆ ಇಂದ ಎಲ್ಲರೊಂದಿಗೆ ಓಡಾಡಿಕೊಂಡು ಶೂಟಿಂಗ್ ಕೆಲಸಗಳಲ್ಲಿ ನಿರತರಾಗುತ್ತಿದ್ದಂತಹ ವಿಜಯ್ ರಾಘವೇಂದ್ರ ಸದ್ಯ ತಮ್ಮ ಮಗನೊಂದಿಗೆ ಕಣ್ಣೀರು ಹಾಕುತ್ತ ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ಎದುರಾಗಿದೆ. ತಮ್ಮ ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ದೊರಕುವವರೆಗೂ ಕಾದು ಆನಂತರ ಅಗ್ನಿಸಾಕ್ಷಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ನೂರು ವರ್ಷ ಜೊತೆಗೆ ಸುಖವಾಗಿ

ಬಾಳಬೇಕೆಂಬ ಆಸೆಯನ್ನು ಹೊತ್ತಿದ್ದ ವಿಜಯ್ ರಾಘವೇಂದ್ರ ಅವರ ಕನಸುಗಳೆಲ್ಲವೂ ನುಚ್ಚು ನೂರಾಗಿದೆ. ಸ್ಪಂದನವರಿಗೆ ಹೊರದೇಶದಲ್ಲಿ ಲಘು ಹೃದಯಘಾತ ಉಂಟಾಗಿ ತಮ್ಮ ಪತಿ ಹಾಗೂ ಮಗನನ್ನು ಒಬ್ಬಂಟಿಯನ್ನಾಗಿಸಿ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನ ಅವರ ಹಲವು ಮಾಹಿತಿಗಳು ಹರಿದಾಡುತ್ತಿದ್ದು, ಸೆಲೆಬ್ರಿಟಿಗಳು ತಮ್ಮ ಹಾಗೂ ಸ್ಪಂದನ(Spandana)ರವರ ಒಡನಾಟದ ಮೆಲುಕು ಹಾಕುತ್ತ ಕಂಬನಿ ಮಿಡಿದಿದ್ದಾರೆ.

ಅದರಂತೆ ಸ್ಪಂದನವರ ಸಾವಿನ ಸುದ್ದಿ ಹೊರ ಬರುತ್ತಾ ಇದ್ದ ಹಾಗೆ ಹಲವಾರು ಕಲಾವಿದರು ತಮ್ಮ ಹಾಗೂ ಸ್ಪಂದನ ಜೊತೆಗಿನ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ(Social Media) ಖಾತೆಯಲ್ಲಿ ಹಂಚಿಕೊಳ್ಳುತ್ತಾ ಕಂಬನಿ ಮಿಡಿದಿದ್ದರು. ಅದರಂತೆ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಕೂಡ ಸ್ಪಂದನ (Spandana) ಜೊತೆಗೆ ಹಲವು ಫೋಟೋಗಳನ್ನು ಶೇರ್ ಮಾಡಿ ಭಾವುಕರಾಗಿದ್ದಾರೆ.

ಸ್ಪಂದನ ಮತ್ತು ರಾಗಿಣಿ (Ragini) ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಯಾವುದೇ ಖಾಸಗಿ ಮದುವೆ ಸಂಭ್ರಮ ಅಥವಾ ಮನೆಯಲ್ಲಿ ನಡೆಯುವಂತಹ ಪುಟ್ಟ ಕಿಟ್ಟಿ ಪಾರ್ಟಿ ಗಳೆಲ್ಲ ಒಟ್ಟಾಗಿ ಭೇಟಿ ಮಾಡಿ ಫೋಟೋ ಕ್ಲಿಕಿಸಿಕೊಳ್ಳುತ್ತಿದ್ದರು. ಆದರೀಗ ಸ್ಪಂದನ ಕೇವಲ ನೆನಪು ಮಾತ್ರ ಎಂಬ ಸತ್ಯವನ್ನು ಆರಗಿಸಿಕೊಳ್ಳಲು ಅವರಿಗೂ ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ ಬಾಳೆ ಎಲೆಯಲ್ಲಿ ಭರ್ಜರಿ ಊಟ ಸವಿದ ದರ್ಶನ್, ಸೃಜನ್ ಲೋಕೇಶ್ ಮತ್ತು ಸ್ನೇಹಿತರ ಅಪರೂಪದ ಚಿತ್ರ ಇಲ್ಲಿದೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: