Darshan: ಬಾಳೆ ಎಲೆಯಲ್ಲಿ ಭರ್ಜರಿ ಊಟ ಸವಿದ ದರ್ಶನ್, ಸೃಜನ್ ಲೋಕೇಶ್ ಮತ್ತು ಸ್ನೇಹಿತರ ಅಪರೂಪದ ಚಿತ್ರ ಇಲ್ಲಿದೆ

0

ಇತರೆ ಭಾಷೆಯ ಸಿನಿಮಾ ಇಂಡಸ್ಟ್ರಿಗೆ ಹೋಲಿಸಿದರೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೀತಿ ಪ್ರೇಮ ಹಾಗೂ ಸ್ನೇಹ ಎಂಬ ಮಧುರ ಬಾಂಧವ್ಯಕ್ಕೆ ಹೆಚ್ಚಿನ ಬೆಲೆ ಇದೆ. ಇಲ್ಲಿನ ಕಲಾವಿದರು ಮತ್ತೊರ್ವ ಕಲಾವಿದನನ್ನು ಕೊ ಆಕ್ಟರ್ (Co actors) ಎಂದು ನೋಡುವ ಬದಲು ತಮ್ಮ ಆತ್ಮೀಯ ಸ್ನೇಹಿತನಂತೆ ಕಾಣುತ್ತಾರೆ. ಹೀಗಾಗಿ ಅಂದಿನ ಕುಚಿಕು ಗೆಳೆಯರಾದ ಡಾಕ್ಟರ್ ವಿಷ್ಣುವರ್ಧನ್(Dr.Vishnuvardhan) ಹಾಗೂ ಅಂಬರೀಶ್ (Ambareesh) ಅವರಿಂದ ಹಿಡಿದು ಈಗಿನ ಯುವ ನಟರು ಕೂಡ ಆತ್ಮೀಯವಾದ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದ್ದಾರೆ.

ಅದರಂತೆ ಬಾಲ್ಯದಿಂದ ಇಂದಿನವರೆಗೂ ಅದ್ಭುತವಾದ ಗೆಳೆತನವನ್ನು ಕಾಪಾಡಿಕೊಂಡು ಬಂದಿರುವಂತಹ ಸೃಜನ್ ಲೋಕೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ರೆಂಡ್ ಶಿಪ್ (Friendship) ಕುರಿತು ಹೇಳದಿರಲು ಸಾಧ್ಯವೇ? ಇವರಿಬ್ಬರ ತಂದೆ ತೂಗುದೀಪ ಶ್ರೀನಿವಾಸ್ ಮತ್ತು ಲೋಕೇಶ್ ಸಿನಿಮಾದಲ್ಲಿ ಕೆಲಸ ಮಾಡುವುದರೊಂದಿಗೆ ಒಳ್ಳೆ ಭಾಂದವ್ಯವನ್ನು ಬೆಳೆಸಿಕೊಂಡಿರುತ್ತಾರೆ.

ಹೀಗೆ ತಮ್ಮ ತಂದೆಯೊಂದಿಗೆ ಪುಟ್ಟ ಪುಟ್ಟ ಮಕ್ಕಳಾಗಿದ್ದಾಗ ಸೆಟ್ಟಿಗೆ ಹೋಗುತ್ತಿದ್ದಂತಹ ದರ್ಶನ್ ಹಾಗೂ ಸೃಜನ್ ಲೋಕೇಶ್ ಕೂಡ ಬಾಲ್ಯದಲ್ಲೇ ಚಡ್ಡಿ ದೋಸ್ತ್ಗಳಾಗಿ ಬೆಳೆದವರು. ಅಂದಿನಿಂದ ಇಂದಿನವರೆಗೂ ಅದೇ ಮಧುರವಾದ ಸ್ನೇಹ ಬಾಂಧವ್ಯವನ್ನು ಉಳಿಸಿಕೊಂಡು ಬಂದಿರುವ ದಚ್ಚು ಮತ್ತು ಸೃಜನ್ ಲೋಕೇಶ್ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಒಬ್ಬರ ಸಿನಿಮಾಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಒಟ್ಟಾಗಿ ದರ್ಶನ್ ಹಾಗೂ ಸೃಜನ್ ಕಾಣಿಸಿಕೊಳ್ಳದೆ ಹೋದರು ಇವರಿಬ್ಬರ ನಡುವೆ ಇರುವಂತಹ ಸ್ನೇಹ ಬಾಂಧವ್ಯದಲ್ಲಿ ಕಿಂಚಿತ್ತಾದ ಪ್ರೀತಿಯು ಕಡಿಮೆಯಾಗಿಲ್ಲ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಅಪರೂಪದ ಫೋಟೋ ಒಂದು ಬಾರಿ ವೈರಲಾಗುತ್ತಿದ್ದು, ಮದುವೆ ಕಾರ್ಯಕ್ರಮ ಒಂದಕ್ಕೆ ಒಟ್ಟಾಗಿ ಹೋಗಿ ನವ ವಧು ವರರನ್ನು ಆಶೀರ್ವದಿಸಿದ ಕನ್ನಡ ಸಿನಿ ಸೆಲೆಬ್ರಿಟಿಗಳ ಗ್ಯಾಂಗ್ ಜೊತೆಗೆ ಕೂತು ಊಟ ಮಾಡುವಾಗ ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಫೋಟೋದಲ್ಲಿ ನಟ ಪ್ರಜ್ವಲ್ ದೇವರಾಜ್(Prajwal Devraj), ಮಜಾ ಟಾಕೀಸ್ ಖ್ಯಾತಿಯ ಮುತ್ತು ಮಣಿ ಅಲಿಯಾಸ್ ವಿಶ್ವಾಸ್, ಮಂಡ್ಯ ರಮೇಶ್ ಸೃಜನ್ ಲೋಕೇಶ್(Srujan Lokesh) ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)ಸೇರಿದಂತೆ ಮುಂತಾದ ಕಲಾವಿದರು ಜೊತೆಯಾಗಿ ಬಾಳೆ ಎಲೆಯಲ್ಲಿ ಊಟ ಸವಿದಿದ್ದಾರೆ. ಈ ಫೋಟೋ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.

Leave A Reply

Your email address will not be published.

error: Content is protected !!