2024ರ ಫೆಬ್ರವರಿ ತಿಂಗಳ ತುಲಾ ರಾಶಿ ಭವಿಷ್ಯ ಇಲ್ಲಿದೆ

0

2024ರ ಫೆಬ್ರವರಿ ತಿಂಗಳಿನಲ್ಲಿ ತುಲಾ ರಾಶಿಯವರ ತಿಂಗಳ ಭವಿಷ್ಯ ಹೇಗಿದೆ ನೋಡೋಣ. ಗ್ರಹಗಳ ಸ್ಥಾನದ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ.
ಲಾಂಛನ : ತಕ್ಕಡಿ ಚಿಹ್ನೆ.
ಅದೃಷ್ಟ ಬಣ್ಣ :  ಬಿಳಿ ಬಣ್ಣ ಮತ್ತು ನೀಲಿ ಬಣ್ಣ.
ಅದೃಷ್ಟ ವಾರ : ಶುಕ್ರವಾರ ಮತ್ತು ಸೋಮವಾರ.
ಅದೃಷ್ಟ ಸಂಖ್ಯೆ : 4,6,7,9.
ಅದೃಷ್ಟ ದೇವತೆ : ಲಕ್ಷ್ಮೀ ದೇವಿ.
ಸ್ನೇಹ ರಾಶಿಗಳು : ಮಿಥುನ ರಾಶಿ, ಕಟಕ ರಾಶಿ ಮತ್ತು ಕುಂಭ ರಾಶಿ.
ಶತ್ರು ರಾಶಿ : ಸಿಂಹ ರಾಶಿ.
ಅದೃಷ್ಟ ದಿನಂಕ : 6,15, 24.

ತುಲಾ ರಾಶಿಯ ವ್ಯಕ್ತಿಗಳು ನಿಪುಣರು, ಜಾಣರು, ಯಾವುದೇ ವಿಚಾರವನ್ನು ಆಳವಾಗಿ ಯೋಚನೆ ಮಾಡುವರು. ಪ್ರತಿ ವಿಷಯದ ಬಗ್ಗೆ ಆಸಕ್ತಿ ಇರುತ್ತದೆ. ಹೆಚ್ಚಾಗಿ ಮಾತಾಡುವುದು ಶ್ರೇಯಸ್ಸು ತರುವುದಿಲ್ಲ. ಮಾತುಗಳು ಎಲ್ಲಾ ಕಲಹ ರೂಪಕ್ಕೆ ಪರಿವರ್ತನೆ ಆಗುತ್ತವೆ. ಎಲ್ಲಿ, ಯಾರ ಜೊತೆ, ಹೇಗೆ ಮಾತಾಡಬೇಕು ಎನ್ನುವ ಚತುರತೆ ಇರಬೇಕು. ತಾಳ್ಮೆ ಮತ್ತು ಸಹನೆ ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ ಅದನ್ನು ಅನುಸರಣೆ ಮಾಡಿದರೆ ಗೆಲುವು ಸಾಧಿಸುವ ಸಾಧ್ಯತೆ ಇದೆ.

ವಾಹನ ಖರೀದಿ, ನೂತನ ಗೃಹ ಖರೀದಿ, ಭೂಮಿ, ಸೈಟ್ ಖರೀದಿ ಮಾಡುವ ಅವಕಾಶ ಇದೆ. ಮನೆಯಲ್ಲಿ ಯಾವುದಾದರೂ ರಿಪೇರಿ ಮಾಡುವ ಕೆಲಸ ಸಾಗುತ್ತದೆ. ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಅವಕಾಶ ಇದೆ ಮತ್ತು ಹೆಚ್ಚಿನ ಹಣ ವ್ಯೆಯ ಆಗುತ್ತದೆ. ವಿಧ್ಯಾರ್ಥಿಗಳಿಗೆ ಪ್ರಗತಿ ಸಾಧಿಸಲು ಸಾಧ್ಯ ಇದೆ. ಹೆಚ್ಚಿನ ಅಧ್ಯಯನದಲ್ಲಿ ತೊಡಗುವುದು, ಓದುವ ಕಡೆ ಹೆಚ್ಚು ಒಲವು ತೋರುವುದು ಮತ್ತು ಹೆಚ್ಚಿನ ಅಂಕ ಗಳಿಸುವ ಅವಕಾಶ ಇರುತ್ತದೆ.

ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ. ಮದುವೆಗೆ ಸಂಬಂಧ ಇರುವಂತೆ ಹೆಚ್ಚು ಕಾರ್ಯಕ್ರಮಗಳು ನಡೆಯಲಿವೆ. ಉದ್ಯೋಗವನ್ನು ಬದಲಾವಣೆ ಮಾಡುವ ನಿರ್ಧಾರ ಕೈಗೊಂಡರೆ ಅದು ತಪ್ಪಾಗುತ್ತದೆ. ಉದ್ಯೋಗವನ್ನು ಮೇಲಿನ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಯತ್ನ ಮಾಡಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸು ಸಿಗುತ್ತದೆ. ಬೇರೆ ಯಾವ ರೀತಿ ಸ್ಪರ್ಧಿ ಎದುರು ನಿಲ್ಲುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ ತುಲಾ ರಾಶಿಯವರು ಮುಂದೆ.

ವಿದೇಶಕ್ಕೆ ಹೋಗುವ ಯೋಗ ಇದೆ ವ್ಯಾಸಂಗ, ವ್ಯಾಪಾರ, ಉದ್ಯೋಗ ಯಾವ ರೂಪದಲ್ಲಿ ಬೇಕಿದ್ದರು ಹೋಗಬಹುದು, ಉತ್ತಮ ಫಲ ಸಹ ಸಿಗುತ್ತದೆ. ಯಾವ ರೀತಿಯ ವೃತ್ತಿಯಲ್ಲಿ ಇದ್ದರು ಅಂದಾಜಿನ ಪ್ರಕಾರ ಲಾಭ ಸಿಕ್ಕೆ ಸಿಗುತ್ತದೆ ತುಲಾ ರಾಶಿಯವರಿಗೆ. ರಕ್ಷಣಾ ಕ್ಷೇತ್ರದಲ್ಲಿ ಮತ್ತು ಸರ್ಕಾರಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳಿಗೆ ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ. ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ ಇದೆ.

ಎಲುಬು ಮತ್ತು ಹಿಮ್ಮಡಿ ನೋವಿನ ಸಮಸ್ಯೆ ಕಾಡಬಹುದು ಆದರಿಂದ ಹೆಚ್ಚು ಆರೋಗ್ಯದ ವಿಚಾರವನ್ನು ಕಡೆಗಣಿಸಬಾರದು. ದಾಂಪತ್ಯ ಜೀವನದಲ್ಲಿ ಒಳ್ಳೆ ಫಲ ದೊರಕುತ್ತದೆ. ಹೊಂದಾಣಿಕೆ ಮಾಡಿಕೊಂಡು ಹೋಗುವ ಗುಣ ಇರುತ್ತದೆ. ಬೇರೆ ಕಡೆಯಿಂದ ಸಾಲ ಮಾಡಿ  ಹೂಡಿಕೆ ಮಾಡುವುದು ತಪ್ಪು ಆಯ್ಕೆ. ಅನಾವಶ್ಯಕ ಸಾಲ ಪಡೆಯದೆ ಇದ್ದಾರೆ ಒಳ್ಳೆಯದು ಇರುವ ಹಣದಲ್ಲಿ ಹೂಡಿಕೆ ಮಾಡುವುದು ಉತ್ತಮ.

ಪರಿಹಾರಗಳು :- ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು. ನವಗ್ರಹ ಶಾಂತಿ ಮಾಡಿಸುವುದು ಒಳ್ಳೆಯದು. ಹಿರಿಯರಿಗೆ ಗೌರವ ನೀಡುವುದು. ಗುರು ಸೇವೆ, ಸಾಧು ಸಂತರ ದರ್ಶನ ಮಾಡುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಮತ್ತು ಒಳ್ಳೆಯ ಆಲೋಚನೆಗಳನ್ನು ಮಾಡುವುದು ಕೂಡ ಉತ್ತಮ.

Leave A Reply

Your email address will not be published.

error: Content is protected !!
Footer code: