2003 ರಲ್ಲಿ ಚಂದ್ರ ಚಕೋರಿ ಎಂಬ ಸಿನಿಮಾ ಮೂಲಕ ಚಂದನ ವನಕ್ಕೆ ಕಾಲಿಟ್ಟಂತಹ ನಟ ಶ್ರೀಮುರುಳಿ(Sri Murali) ಇಂದಿಗೂ ಕೂಡ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಸತತ ಎರಡು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ತೊಡಗಿಕೊಂಡು ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಹೌದು ಗೆಳೆಯರೇ ಡಾಕ್ಟರ್ ರಾಜಕುಮಾರ್ (Dr.Rajkumar) ಕುಟುಂಬದ ಹತ್ತಿರದ ಸಂಬಂಧಿಕರಾಗಿದ್ದ ಕಾರಣ ಶ್ರೀಮುರಳಿ ಹಾಗೂ ಅವರ ಅಣ್ಣ ವಿಜಯ್ ರಾಘವೇಂದ್ರ(Vijay Raghavendra) ಅವರಿಗೆ ಸಿನಿಮಾದ ಬದುಕು ಅಷ್ಟೇ ಕಷ್ಟಕರವಾಗಿರಲಿಲ್ಲ.
ಆದರೂ ಕೂಡ ಮಾಡಿದಂತಹ ಸಾಕಷ್ಟು ಸಿನಿಮಾಗಳಲ್ಲಿ ಸೋಲನ್ನು ಅನುಭವಿಸಿ ಬಂದಂತಹ ಕಷ್ಟಗಳನ್ನೆಲ್ಲ ಮೆಟ್ಟಿ ನಿಂತು ರೋರಿಂಗ್ ಸ್ಟಾರ್ (Roaring star) ಆಗಿ ಬೆಳೆದು ನಿಂತಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಅಪಾರ ಅಭಿಮಾನ ಬಳಗವನ್ನು ಸಂಪಾದಿಸಿಕೊಂಡಿರುವ ಶ್ರೀಮುರಳಿಯವರು ಚಂದ್ರ ಚಕೋರಿ, ಕಾಂತಿ, ಯಶವಂತ, ಸಿದ್ದು, ಗೋಪಿ, ಪ್ರೀತಿಗಾಗಿ, ಮಿಂಚಿನ ಓಟ, ಶಿವಮಣಿ, ಯಜ್ಞ, ಉಗ್ರಂ, ಮೂರ್ತಿ, ಭರಾಟೆಯಿಂದ ಯಶಸ್ವಿ ಸಿನಿಮಾಗಳನ್ನು ನೀಡಿ ಜನಪ್ರಿಯತೆ ಪಡೆದಿದ್ದಾರೆ.
ಇನ್ನು ಕಾಲೇಜು ಓದುತ್ತಿರುವಾಗಲೇ ಪ್ರಶಾಂತ್ ನೀಲ್ರವರ ತಂಗಿ ವಿದ್ಯಾ (vidhya) ಎಂಬುವವರೊಂದಿಗೆ ಪ್ರೀತಿಯಲ್ಲಿ ಬಿದ್ದು ಮನೆಯವರೆಲ್ಲರ ಒಪ್ಪಿಗೆ ಪಡೆದು 11 ಮೇ 20೦8 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ಗೆಳೆಯರೇ ನಟ ಶ್ರೀಮುರುಳಿ(Sri Murali) ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಮೇಶ ಅರವಿಂದ್(Ramesh Arvind) ಅವರ ನಿರೂಪಣೆಯಲ್ಲಿ ಮೂಡಿಬರುವಂತಹ ವೀಕೆಂಡ್ ವಿತ್ ರಮೇಶ್ ಸೀಸನ್ ೪ರ ಅತಿಥಿಯಾಗಿ ಬಂದಾಗ ತಮ್ಮ ಹಾಗೂ ವಿದ್ಯಾ ಅವರ ಪ್ರೇಮಕಹಾನಿಯನ್ನು ಬಿಚ್ಚಿಟ್ಟರು.
ಇವರಿಬ್ಬರ ಲವ್ ಸ್ಟೋರಿಯಲ್ಲಿ ಬಂದಂತಹ ಟ್ವಿಸ್ಟ್ ಅಂಡ್ ಟರ್ನುಗಳು ಅಭಿಮಾನಿಗಳನ್ನು ಥ್ರಿಲ್ ಆಗಿಸಿತ್ತು. ಹೀಗೆ ಹರಸಾಹಸ ಮಾಡಿ ಮನೆಯವರ ಒಪ್ಪಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗಳಿಗೆ ಸದ್ಯ ಅಗಸ್ತ್ಯ ಶ್ರೀ ಮುರುಳಿ ಮತ್ತು ಅತಿವಾ ಶ್ರೀಮುರುಳಿ(Sri Murali) ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಈ ಪುಟದ ಮುಖಾಂತರ ನೀವು ಕೂಡ ನಟ ಶ್ರೀಮುರುಳಿ ಮತ್ತು ವಿದ್ಯಾ ಅವರ ಅಪರೂಪದ ಮದುವೆ ಫೋಟೋಗಳನ್ನು ಕಂಡುಹಿಡಿಯಬಹುದಾಗಿದೆ.