ಟಾಲಿವುಡ್ ನಟ ಜಗಪತಿ ಬಾಬು ಅವರ ಸುಂದರ ಕುಟುಂಬ ಇಲ್ಲಿದೆ ನೋಡಿ ಫೋಟೋಸ್!!

0

ತೆಲುಗು ಸಿನಿಮಾ ರಂಗದಲ್ಲಿ ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಬಹುದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವೀರಮಚನೆನಿ ಜಗಪತಿ ಚೌದ್ರಿ ಅಲಿಯಾಸ್ ಜಗಪತಿ ಬಾಬು(Jagapathi babu) ಯಾರಿಗೆ ತಾನೇ ತಿಳಿಯದಿರಲು ಸಾಧ್ಯವಿಲ್ಲ ಹೇಳಿ? ಪೋಷಕ ನಟನಾಗಿ, ಸಹನಟನಾಗಿ, ಕಳ್ಳ ನಟನಾಗಿ ಹಲವು ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಈ ನಟ ಕೇವಲ ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿ ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಮೂಲತಃ ಆಂಧ್ರಪ್ರದೇಶನವರಾದ ಜಗಪತಿ ಬಾಬು ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದಂತಹ ವಿ ಬಿ ರಾಜೇಂದ್ರ ಪ್ರಸಾದ್(BV Rajendra Prasad) ಅವರ ಪುತ್ರರಾಗಿದ್ದ ಕಾರಣ ಸಿನಿಮಾ ರಂಗದ ನಂಟು ರಕ್ತದಲ್ಲಿಯೇ ಅಂಟಿಕೊಂಡಿರುತ್ತದೆ. ಹೀಗೆ ಬಾಲ್ಯದಿಂದಲೂ ನಟನಾಗಬೇಕೆಂಬ ಆಸೆಯನ್ನು ರೂಡಿಸಿಕೊಂಡು ಬೆಳೆದಂತಹ ಜಗಪತಿ ಬಾಬು(Jagapathi babu) 1989 ರಲ್ಲಿ ಕೆರೆಕಂಡ ತೆಲುಗಿನ ಸಿಂಹ ಸ್ವಪ್ನಂ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಹೀಗೆ 1989ರಿಂದ 2013ರ ವರೆಗೆ ನಾಯಕನಟನಾಗಿ ಅಭಿನಯಿಸುತ್ತ ಬಂದ ಜಗಪತಿ ಬಾಬು ಅವರಿಗೆ 2014ರ ನಂತರ ಸಿಕ್ಕಿದ್ದೆಲ್ಲದು ಪೋಷಕ ಪಾತ್ರಗಳೆ. ಹೀಗೆ ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಅತ್ಯದ್ಭುತವಾಗಿ ಜೀವ ತುಂಬುವ ಈ ನಟ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(kiccha Sudeep) ಅವರ ಬಚ್ಚನ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿನಯಿಸುವ ಮೂಲಕ ಕನ್ನಡಿಗರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳು ನೀಡುತ್ತಾ ಹಲವಾರು ವರ್ಷಗಳಿಂದ ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿರುವ ಜಗಪತಿ ಬಾಬು(Jagapathi babu) ಅಲಿಯಾಸ್ ಜಗ್ಗು ಬಾಯ್ ಲಕ್ಷ್ಮಿ (Lakshmi) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಗಳಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದು, ಅವರ ಕಿರಿಯ ಪುತ್ರಿ ಮೇಘನಾ ಅವರ ಮದುವೆ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ. ನೀವು ಕೂಡ ಈ ಪುಟದ ಮುಖಾಂತರ ನಟ ಜಗಪತಿ ಬಾಬು ಅವರ ಸುಂದರ ಕುಟುಂಬ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!
Footer code: